ಮಂಡ್ಯ: ಕರ್ನಾಟಕದಲ್ಲಿ ಬ್ರಹ್ಮಚಾರಿ ಸಂಘ ಶುರುವಾಗುತ್ತಿದ್ದು, ಪಾದಯಾತ್ರೆ ಉದ್ಘಾಟನೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರೇ ಅಧ್ಯಕ್ಷರಾಗಲಿದ್ದಾರೆ. ಮಂಡ್ಯದ ಬ್ರಹ್ಮಚಾರಿಗಳು ದೇಶಾದ್ಯಂತ ಬ್ರಹ್ಮಚಾರಿ (Brahmachari Sangha) ಸಂಘಟನೆ ವಿಸ್ತರಿಸಲು ಮುಂದಾಗಿದ್ದಾರೆ. ಅಖಿಲ ಭಾರತೀಯ ಬ್ರಹ್ಮಚಾರಿಗಳ ಸಂಘಕ್ಕೆ ಅಧ್ಯಕ್ಷರಾಗಲು ಕಾಂಗ್ರೆಸ್‌ನ ಕೇಂದ್ರ ನಾಯಕ ರಾಹುಲ್ ಗಾಂಧಿ (Ragul Gandi) ಅವರಿಗೆ ಆಹ್ವಾನ ಕೊಟ್ಟಿದ್ದಾರೆ. ರೈತರ ಮಕ್ಕಳಿಗೆ ಹೆಣ್ಣು ಕೊಡದ ಕಾರಣಕ್ಕೆ ಬೇಸತ್ತು ಹೋಗಿರುವ ಮಂಡ್ಯ ಹೈಕಳು, ಇದೀಗ ಜನರಿಗೆ ಅರಿವು ಮೂಡಿಸಲು ಬ್ರಹ್ಮಚಾರಿ ಸಂಘವನ್ನು (Demand for bride) ಕಟ್ಟಿಕೊಂಡಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಗಂಡು ಮಕ್ಕಳು ಮದುವೆ ಆಗಬೇಕು ಎಂದರೂ ಹೆಣ್ಣು ಸಿಗುವುದು ಕಷ್ಟವಾಗಿದೆ. ಪೋಷಕರುಗೆ ತಮ್ಮ ಮಕ್ಕಳಿಗೆ ಹುಡುಗಿ ಹುಡುಕುವುದೇ ಈಗ ಒಂದು ಸವಾಲಿನ ಕೆಲಸವಾಗಿದೆ. ಅದರಲ್ಲೂ ರೈತರು, ಪುರೋಹಿತರು, ಸಣ್ಣ ಉದ್ಯೋಗಿಗಳು ಅಂದರೆ ಹುಡುಗಿ ಕೊಡಲು ಹಿಂದೆಟ್ಟು ಹಾಕುತ್ತಿದ್ದಾರೆ. ಹುಡುಗಿಯರಂತೂ ಇಂಥವರನ್ನು ಕಣ್ಣೆತ್ತಿಯೂ ನೋಡುವುದಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಬೇರೆ ದಾರಿ ಕಾಣದೆ (Demand for bride) ಯುವಕರು ದೇವರ ಮೊರೆ ಹೋಗಿದ್ದು ಆಯಿತು. ಬಳಿಕ ಪಾದಯಾತ್ರೆ ನಡೆಸಿದರೂ, ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ಬ್ರಹ್ಮಚಾರಿ ಸಂಘವನ್ನು ಕಟ್ಟಿಕೊಂಡಿದ್ದಾರೆ.
ಇದನ್ನೂ ಓದಿ: Marriage Cancel : ತಾಳಿ ಕಟ್ಟಲು ಬಂದ್ರೆ ತಾಳಿಯನ್ನೇ ದೂಡಿದ ವಧು; ಅರ್ಧದಲ್ಲೇ ನಿಂತು ಹೋಯಿತು ಮದುವೆ
ಬ್ರಹ್ಮಚಾರಿ ಸಂಘದಿಂದ 2024ರ ಜನವರಿಯಲ್ಲಿ ಚುಂಚನಗಿರಿಗೆ ಪಾದಯಾತ್ರೆ ನಡೆಸಿ ಅರಿವು ಮೂಡಿಸಲು ಮುಂದಾಗಿದ್ದಾರೆ. ಅಖಿಲ ಕರ್ನಾಟಕ ಬ್ರಹ್ಮಚಾರಿಗಳ ಸಂಘದಿಂದ ರಾಷ್ಟ್ರ ವ್ಯಾಪ್ತಿ ಸಂಘಟನೆ ಮಾಡಲು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಅಖಿಲ ಕರ್ನಾಟಕ ಬ್ರಹ್ಮಚಾರಿಗಳ ಸಂಘದ ರಾಜ್ಯಾಧ್ಯಕ್ಷ ಆಗಿರುವ ಮಲ್ಲೇಶ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಬ್ರಹ್ಮಚಾರಿಗಳ ನಡೆ.. ಕಾಲಭೈರವೇಶ್ವರನ ಕಡೆ.. ಎಂಬ ಘೋಷವಾಕ್ಯದೊಂದಿಗೆ ಮಂಡ್ಯದ ಕೆ.ಎಂ.ದೊಡ್ಡಿಯಿಂದ ಆದಿಚುಂಚನಗಿರಿಗೆ ಪಾದಯಾತ್ರೆ ನಡೆಸಲಾಗುತ್ತಿದೆ. ಮಂಡ್ಯದಿಂದ ನಾಗಮಂಗಲದವರೆಗೆ ಸುಮಾರು 86 ಕಿ.ಮೀವರೆಗೆ ಪಾದಯಾತ್ರೆಕೈಗೊಳ್ಳಲಾಗುತ್ತದೆ. ಈಗಾಗಲೇ ಪಾದಯಾತ್ರೆಗೆ ನೊಂದಣಿ ಪ್ರಕ್ರಿಯೆಯು ಶುರುವಾಗಿದೆ ಎಂದರು.
ಇನ್ನು ಆದಿಚುಂಚನಗಿರಿಯ ಪಾದಯಾತ್ರೆಗೆ ಕಾಂಗ್ರೆಸ್‌ನ ಕೇಂದ್ರ ನಾಯಕ ರಾಹುಲ್ ಗಾಂಧಿಯನ್ನು ಕರೆಸಲು ಸಂಘವು ಚಿಂತನೆ ನಡೆಸಿದೆ. ಈಗಾಗಲೇ ಕೆ.ಪಿ.ಸಿ.ಸಿ ಮೂಲಕ ಪತ್ರ ವ್ಯವಹಾರ ನಡೆಸಿ ರಾಹುಲ್ ಗಾಂಧಿ ಕರೆಸಲು ಯೋಜಿಸಲಾಗಿದೆ. ಅವರಿಂದಲೇ ಬ್ರಹ್ಮಚಾರಿ ಸಂಘದ ಆದಿಚುಂಚನಗಿರಿ ಪಾದಯಾತ್ರೆಗೆ ಚಾಲನೆ ಕೊಡಿಸಲಾಗುತ್ತದೆ. ಜೊತೆಗೆ ಅಖಿಲ ಕರ್ನಾಟಕ ಬ್ರಹ್ಮಚಾರಿಗಳ ಸಂಘಕ್ಕೆ ಅಧ್ಯಕ್ಷರಾಗಿ ರಾಹುಲ್ ಗಾಂಧಿಯವರಿಗೆ ಆಹ್ವಾನವನ್ನು ನೀಡುತ್ತೇವೆ ಎಂದರು.
ಈಗಾಗಲೇ 2022-23ರಲ್ಲಿ ಬ್ರಹ್ಮಚಾರಿಗಳ ನಡೆ ಮಲೆ ಮಹದೇಶ್ವರ ಬೆಟ್ಟದ ಕಡೆ ಎಂದು ಪಾದಯಾತ್ರೆ ಹೋಗಿ ಬಂದಿದ್ದೇವೆ. ಇದೀಗ ಒಕ್ಕಲಿಗ ಸಮುದಾಯ ಪ್ರಬಲ ಮಠವಾದ ಆದಿಚುಂಚನಗಿರಿಗೆ ಪಾದಯಾತ್ರೆ ಕೈಗೊಳ್ಳಲಿದ್ದೇವೆ ಎಂದು ಮಲ್ಲೇಶ್ ತಿಳಿಸಿದರು.
ಪರಮ ಪವಿತ್ರ ಬ್ರಹ್ಮಚಾರಿಗಳು
ಇನ್ನು ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ರಾಜ್ಯದ ಬ್ರಹ್ಮಚಾರಿಗಳಿಗೆ ಆಹ್ವಾನವನ್ನು ನೀಡಲಾಗಿದೆ. ಈ ಪಾದಯಾತ್ರೆಗೆ ಬರುವರಿಗೆ ಸಂಘದಿಂದ ಕೆಲವು ನಿಬಂಧನೆಯು ಇದೆ. ಅವಿವಾಹಿತರಿಗೆ ಮಾತ್ರ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಕಲ್ಪಿಸಲಾಗಿದೆ. ಹೆಣ್ಣು ಸಿಗದ ಮಂಡ್ಯ ಯುವಕರು ʻಪರಮ ಪವಿತ್ರ ಬ್ರಹ್ಮಚಾರಿಗಳುʼ ಎಂಬ ಹೆಸರಿನಲ್ಲಿ ವಾಟ್ಸ್‌ಆ್ಯಪ್ ಗ್ರೂಪ್ ಅನ್ನು ಕ್ರೀಯೆಟ್ ಮಾಡಿಕೊಂಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ