ಹಾವೇರಿ, ಕರ್ನಾಟಕ: ಮೇ 10ಕ್ಕೆ ಮತದಾನ ಮಾಡಿ ಐದು ವರ್ಷ ಕರ್ನಾಟಕದ ಭವಿಷ್ಯ ನಿರ್ಧಾರ ಮಾಡುವ ದಿನ. ಈ ಸಲದ ಚುನಾವಣೆ ಬಹಳ ವಿಶೇಷವಾಗಿರುವ ಚುನಾವಣೆಯಾಗಿದೆ. ಬಿಜೆಪಿ ಮತ್ತು ಸರಕಾರ ಸಕಾರಾತ್ಮಕವಾಗಿ ಮತ್ತು ಸರಕಾರದ ಸಾಧನೆ ಮುಂದಿಟ್ಟುಕೊಂಡು ಮತ ಕೇಳಿದ್ದೇವೆ. ಕರ್ನಾಟಕದ ಜನರ ಬದುಕು ಹಸನಗೊಳಿಸುವ ಕೆಲಸ ಮಾಡುತ್ತಿದ್ದೇವೆ. ಕೇಂದ್ರ ಸರಕಾರ ಹಲವಾರು ಯೋಜನೆ ಕೊಟ್ಟಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಅವರು ಹೇಳಿದರು(Karnataka Election 2023).
ಹಾವೇರಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಬಿಜೆಪಿ ಸರ್ಕಾರವು 17 ಲಕ್ಷ ಮನೆ ಹಾಗೂ 12 ಲಕ್ಷ ಶೌಚಾಲಯ ನಿರ್ಮಾಣ ಮಾಡಿದೆ. 54 ಲಕ್ಷ ರೈತರಿಗೆ 16 ಸಾವಿರ ಕೋಟಿ ಕೊಟ್ಟಿದ್ದೇವೆ. ಜಲಜೀವನ್ ಮಿಷನ್ ಅಡಿಯಲ್ಲಿ 4 ಲಕ್ಷ ಮನೆಗೆ ನೀರು ಕೊಟ್ಟಿದ್ದೇವೆ. ಹಿಂದೆ ಕಾಂಗ್ರೆಸ್ ಇದ್ದಾಗ ಕೇಂದ್ರದ ಜೊತೆ ಸಂಘರ್ಷ ಮಾಡಿಕೊಂಡಿತ್ತು. ಹೀಗಾಗಿ ರಾಜ್ಯಕ್ಕೆ ಯೋಜನೆಗಳು ಬಂದಿರಲಿಲ್ಲ. ಕಾಂಗ್ರೆಸ್-ಜೆಡಿಎಸ್ 2018ರಲ್ಲಿ ಅಪವಿತ್ರ ಮೈತ್ರಿ ಮಾಡಿಕೊಂಡಿದ್ದರು ಎಂದು ಹೇಳಿದರು.
ಕೊರೊನಾ ಕಾಲಘಟದಲ್ಲಿ ರಾಜ್ಯ ಸರ್ಕಾರವು ತುಂಬ ಉತ್ತಮ ಕೆಲಸ ಮಾಡಿದೆ. ವ್ಯಾಕ್ಸಿನೇಷನ್ ಮೂಲಕ ಹಲವಾರು ಜೀವಗಳು ಬದುಕಿವೆ. ಕಷ್ಟಕಾಲದಲ್ಲಿ ಧಾವಿಸಿ ಬಂದ ಬಿಜೆಪಿ ಸರಕಾರಕ್ಕೆ ಆಶೀರ್ವಾದ ಮಾಡ್ತಿರಿ ಎನ್ನುವ ವಿಶ್ವಾಸ ಇದೆ. ಬಡವರು, ರೈತರು ಬಗ್ಗೆ ಅವರಿಗೆ ಕಳಕಳಿ ಇದೆಯಾ? ಕಾಂಗ್ರೆಸ್ ಸರಕಾರ ಇದ್ದಾಗ ದಿನಾಲೂ ರೈತರ ಆತ್ಮಹತ್ಯೆಯೇ ಸುದ್ದಿಯಾಗಿತ್ತು. 4000 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರಿಗೆ ಯಾವುದೇ ಪರಿಹಾರವನ್ನು ಕೊಡಲಿಲ್ಲ. ನಮ್ಮ ಸರಕಾರದಲ್ಲಿ ರೈತರ ಆತ್ಮಹತ್ಯೆ ಸುದ್ದಿ ಕೇಳಿ ಬರ್ತಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
Karnataka Election: ರೈತ ವಿದ್ಯಾನಿಧಿ ಜಾರಿ ಮಾಡಿದ್ದೇವೆ
ರೈತ ವಿದ್ಯಾ ನಿಧಿ ಮಾಡಿದ್ದೇನೆ. ಡಿಸೇಲ್‌ಗೆ ಸಬ್ಸಿಡಿ ಕೊಟ್ಟಿದ್ದೇನೆ. ಶೂನ್ಯ ಬಡ್ಡಿದರದಲ್ಲಿ ಸಾಲವನ್ನು 3 ರಿಂದ 5 ಲಕ್ಷಕ್ಕೆ ಏರಿಸಿದ್ದೇವೆ. ರೈತರನ ಭದ್ರತೆಗೆ ಹಲವಾರು ಕಾರ್ಯಕ್ರಮ ಮಾಡಿದ್ದೇವೆ. ನೀರಾವರಿಗೆ ಹಲವಾರು ಕೆಲಸ ಮಾಡಿದ್ದೇವೆ ಚುನಾವಣೆ ಮುಗಿದ ಮೇಲೆ ಮಹದಾಯಿ ಕಾರ್ಯ ಆರಂಭಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಅಪ್ಪರ್ ಕೃಷ್ಣಾ ಪ್ರಾಜೆಕ್ಟ್ ಬಹಳ ದಿನದಿಂದ ನೆನಗುದಿಗೆ ಬಿದ್ದಿತ್ತು. ಈ ಬಗ್ಗೆ ಯಾವುದೇ ನಿರ್ಣಯ ಕೈಗೊಳ್ಳದೇ ಕಾಂಗ್ರೆಸ್‌ನವರು ರೈತರಿಗೆ ಬಹಳ ಅನ್ಯಾಯ ಮಾಡಿದರು. ಕರ್ನಾಟಕ ಈಗ ಕೈಗಾರಿಕೆಯಲ್ಲಿ ದೇಶದಲ್ಲೇ ಮೂರನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಕೃಷಿ, ಆಹಾರೋದ್ಯಮ ಅಭಿವೃದ್ಧಿಯಾಗುತ್ತಿದೆ. ಇವತ್ತು ನಮ್ಮ ಆರ್ಥಿಕತೆ ಸೃದೃಢವಾಗುತ್ತಿದೆ. ಜಿಎಸ್‌ಟಿ ಸಂಗ್ರಹದಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿದೆ. ಹೊಸ ಆರ್‌ಎನ್‌ಡಿ ನೀತಿಯನ್ನು ಜಾರಿಗೆ ತಂದಿದ್ದೇವೆ. 13 ಲಕ್ಷ 33 ಸಾವಿರ ಉದ್ಯೋಗ ಸೃಷ್ಟಿ ಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಇದನ್ನೂ ಓದಿ: Karnataka Election : ಬಸವರಾಜ ಬೊಮ್ಮಾಯಿಯೇ ಮುಂದಿನ ಸಿಎಂ; ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಘೋಷಣೆ
ಹೆಣ್ಣು ಮಕ್ಕಳ ಆದಾಯ ಹೆಚ್ಚಿಸಲು ವಿಶೇಷ ಕಾರ್ಯಕ್ರಮ ಮಾಡಿದ್ದೇನೆ. ಬೆವರಿಗೆ ಬೆಲೆಯನ್ನ ತರುತ್ತಿದ್ದೇವೆ. ದಿನದಲಿತರನ್ನು ಕತ್ತಲೆಯಲ್ಲಿಟ್ಟು ಬಾವಿಯಲ್ಲಿಟ್ಟು ಆಡಳಿತ ಮಾಡಿದ್ರು. ಎಸ್ಸಿ, ಎಸ್ಟಿ ಸಮುದಾಯದ ಮೀಸಲಾತಿ ಹೆಚ್ಚಿಸಿದ್ದೇವೆ. ಇದು ನಮ್ಮ ಸರ್ಕಾರದ ಕ್ರಾಂತಿಕಾರಿ ನಿರ್ಧಾರವಾಗಿದೆ. ಒಳಮೀಸಲಾತಿ ತೀರ್ಮಾನ ಮಾಡಿದ್ದೇವೆ. ಗೋ ಹತ್ಯೆ ನಿಷೇಧ ಕಾನೂನು ಜಾರಿಗೆ ತಂದಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.