ಬೆಂಗಳೂರು, ಕರ್ನಾಟಕ: ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲರ್ಣಿ ಅವರು ಗೆಲುವು ಸಾಧಿಸಿದ್ದಾರೆ. 85 ಸಾವಿರಕ್ಕೂ ಅಧಿಕ ಮತಗಳನ್ನು ಪಡೆದುಕೊಂಡಿದ್ದಾರೆ. ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಅಮೃತ ದೇಸಾಯಿ ಅವರು 67 ಸಾವಿರಕ್ಕೂ ಅಧಿಕ ಮತಗಳನ್ನು ಪಡೆದುಕೊಂಡಿದ್ದಾರೆ.
ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಸ್ವಂತ ಕ್ಷೇತ್ರಕ್ಕೆ ಕಾಲಿಡಲು ವಿನಯ್ ಕುಲಕರ್ಣಿ ಅವರಿಗೆ ಅನುಮತಿ ಇರಲಿಲ್ಲ. ಹಾಗಿದ್ದೂ, ಅಲ್ಲಿನ ಮತದಾರರು ವಿನಯ್ ಕುಲಕರ್ಣಿ ಗೆಲುವು ಸಾಧಿಸಿದ್ದಾರೆ. ಕ್ಷೇತ್ರದಿಂದ ಹೊರವಲಯದಲ್ಲಿ ಇದ್ದು ತಂತ್ರಗಾರಿಕೆ ಮಾಡಿದ್ದ ವಿನಯ್ ಕುಲಕರ್ಣಿ.
2023ರ ಚುನಾವಣೆಯ ಅಭ್ಯರ್ಥಿಗಳು
ಹಾಲಿ ಶಾಸಕ ಬಿಜೆಪಿಯ ಅಮೃತ್ ದೇಸಾಯಿ ಅವರು ಕಣದಲ್ಲಿದ್ದರು. 2018ರಲ್ಲಿ ಸೋತ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ಅವರು ಮತ್ತೆ ಕಾಂಗ್ರೆಸ್‌ನಿಂದ ಹಾಗೂ ಜೆಡಿಎಸ್‌ನಿಂದ ಮಂಜುನಾಥ್ ಎಚ್ ಅವರು ಸ್ಪರ್ಧೆಯಲ್ಲಿದ್ದರು.
2018ರ ಚುನಾವಣೆ ಫಲಿತಾಂಶ ಏನಾಗಿತ್ತು?
ಧಾರವಾಡ ಗ್ರಾಮೀಣ ಎಂದು ಕರೆಯಲಾಗುವ ಧಾರವಾಡ ಕ್ಷೇತ್ರವು ಅನೇಕ ವಿಶಿಷ್ಟತೆಗಳನ್ನು ಹೊಂದಿದೆ. ಇಲ್ಲಿ ಯಾವಾಗಲೂ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಜಿದ್ದಾಜಿದ್ದಿಯನ್ನುಕಂಡಾಗಿದೆ. 2018ರ ಚುನಾವಣೆಯಲ್ಲಿ ಬಿಜೆಪಿಯ ಅಮೃತ್ ದೇಸಾಯಿ ಅವರು 85123 ಮತಗಳನ್ನು ಪಡೆದುಕೊಂಡರೆ, ಕಾಂಗ್ರೆಸ್‌ನ ವಿನಯ ಕುಲಕರ್ಣಿ ಅವರು 64783 ಮತಗಳನ್ನು ಗಳಿಸಿದ್ದರು. ಬಿಜೆಪಿಯ ಅಭ್ಯರ್ಥಿ ಕಾಂಗ್ರೆಸ್ ಅಭ್ಯರ್ಥಿಯನ್ನು 20340 ವೋಟ್‌ಗಳ ಅಂತರದಲ್ಲಿ ಸೋಲಿಸಿದ್ದರು. ಈ ಕ್ಷೇತ್ರವು ಜಿಲ್ಲೆಯ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾಗಿದೆ.