Site icon Vistara News

Yuvajanotsava | ಏಳು ಸಾವಿರ ಯುವಕರು ಭಾಗಿ; ಪ್ರಧಾನಿ ಮೋದಿ ಭಾಷಣ: ಸಿಎಂ ಬೊಮ್ಮಾಯಿ

Basavaraj Bommai

Basavaraj Bommai

ಹುಬ್ಬಳ್ಳಿ: ಒಂದು ವಾರ ಧಾರವಾಡದಲ್ಲಿ ನಡೆಯುವ ಯುವಜನೋತ್ಸವದಲ್ಲಿ ದೇಶದ ವಿವಿಧೆಡೆಯಿಂದ ಏಳು ಸಾವಿರ ಯುವಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಈ ಕುರಿತು ಮಾತನಾಡಿದ ಬೊಮ್ಮಾಯಿ, ಒಂದು ವಾರ ಯುವಜನೋತ್ಸವ ನಡೆಯಲಿದೆ. ಈಗಾಗಲೆ 5,500 ನೋಂದಣಿ ಆಗಿದೆ. ಇನ್ನೆರಡು ದಿನದಲ್ಲಿ 7000ಕ್ಕೂ ಹೆಚ್ಚು ಯುವಕರು ನೋಂದಣಿಯಾಗುತ್ತಾರೆ. ಎಲ್ಲ ಕಾರ್ಯಕ್ರಮಗಳೂ ಧಾರವಾಡದ ಕೆಸಿಡಿ ಮೈದಾನದಲ್ಲಿ ನಡೆಯುತ್ತವೆ. ಎರಡು ವಿವಿಗಳು ಸೇರಿ ವಿವಿಧೆಡೆ ವಾಸ್ತವ್ಯ ಹಾಗೂ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಬೇರೆ ಬೇರೆ ಇಲಾಖೆಗಳಿಗೆ ಹೊಣೆ ನೀಡಲಾಗಿದೆ.

ಹುಬ್ಬಳ್ಳಿಯ ರೈಲ್ವೆ ಮೈದಾನದಲ್ಲಿ ಉದ್ಘಾಟನೆ ನಡೆಯಲಿದ್ದು, ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುತ್ತಾರೆ. ದೇಶದ ಅಖಂಡತೆಯ ಮನೋಭಾವನೆ ಯುವಕರಲ್ಲಿ ಮೂಡಬೇಕು. ಯುವಕರ ಭವಿಷ್ಯದ ಕುರಿತು ಅನೇಕ ನಿರ್ಣಯಗಳಾಗುತ್ತವೆ. ಒಂದು ಕಾಲದಲ್ಲಿ ದೇಶಕ್ಕೆ ಭಾರವಾಗಿದ್ದ ಜನಸಂಖ್ಯೆ, ಈಗ ಅಸ್ತಿಯಾಗಿ ಪರಿವರ್ತನೆ ಆಗುತ್ತಿದೆ. ವಿವೇಕಾನಂದ ಜನ್ಮದಿನದಂದು ಅರ್ಥಪೂರ್ಣ ಕಾರ್ಯಕ್ರಮ ನಡೆಯುತ್ತದೆ. ಪ್ರಧಾನಿ ಮೋದಿಯವರಿಂದ ಪ್ರೇರಣಾದಾಯಿ ಮಾತುಗಳನ್ನು ನಿರೀಕ್ಷಿಸುತ್ತಿದ್ದೇವೆ ಎಂದರು.

ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಮೆಟ್ರೊ ಪಿಲ್ಲರ್‌ನಿಂದ ತಾಯಿ ಮತ್ತು ಮಗು ಮೃತಪಟ್ಟಿರುವ ಕುರಿತು ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ಕಬ್ಬಿಣದ ಕಂಬ ಬಿದ್ದಿರುವುದು ಗಮನಕ್ಕೆ ಬಂದಿದೆ. ಇದು ಅತ್ಯಂತ ದುರದೃಷ್ಟಕರ. ಗುತ್ತಿಗೆದಾರ ಯಾರು? ಏನು ಕಾರಣ ಎಂದು ತಿಳಿದು ಪ್ರಕರಣ ದಾಖಲಿಸುವಂತೆ ಸೂಚಿಸಲಾಗಿದೆ. ಬಿಎಂಆರ್‌ಸಿಎಲ್‌ ಜತೆಗೆ ಮುಖ್ಯಮಂತ್ರಿಗಳ ನಿಧಿಯಿಂದಲೂ ತಲಾ 10 ಲಕ್ಷ ರೂ. ನೀಡಲಾಗುತ್ತದೆ ಎಂದರು.

ಇದನ್ನೂ ಓದಿ | Namma Metro Pillar | ಮೆಟ್ರೋ ಪಿಲ್ಲರ್‌ ಕುಸಿತ: ಕಳಪೆ ಕಾಮಗಾರಿಯೇ, ಎಂಜಿನಿಯರ್‌ಗಳ ನಿರ್ಲಕ್ಷ್ಯವೇ: IISCಯಿಂದ ತನಿಖೆ

Exit mobile version