Site icon Vistara News

Amit Shah : ಕಾಂಗ್ರೆಸ್‌ ಹಿಡಿತದಲ್ಲಿರುವ ಕುಂದಗೋಳದಲ್ಲಿ ಅಮಿತ್‌ ಶಾ ರೋಡ್‌ ಶೋ: ಕುಟುಂಬ ರಾಜಕಾರಣದ ವಿರುದ್ಧ ವಾಗ್ದಾಳಿ

amit-shah-road show in kundagol

#image_title

ಕುಂದಗೋಳ: ಕಾಂಗ್ರೆಸ್‌ ಶಾಸಕರನ್ನು ಹೊಂದಿರುವ ಧಾರವಾಡದ ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು ಒಂದು ಕಿಲೋಮೀಟರ್‌ ರಥಯಾತ್ರೆಯಲ್ಲಿ ಕೇಂದ್ರ ಗೃಹಸಚಿವ ಅಮಿತ್‌ ಶಾ ಭಾಗವಹಿಸಿದರು.

ವಿಶೇಷವಾಗಿ ಅಲಂಕರಿಸಲಾಗಿದ್ದ ರಥವನ್ನೇರಿದ ಅಮಿತ್‌ ಶಾ ಅವರಿಗೆ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ರಾಜ್ಯ ಬಿಜೆಪಿ ಪ್ರಭಾರಿ ಅರುಣ್‌ ಸಿಂಗ್‌ ಸಾಥ್‌ ನೀಡಿದರು.

ರೋಡ್ ಶೋ ನಡೆದ ನಡೆಸುತ್ತಿರುವ ಮಾರ್ಗದಲ್ಲಿ ಪೊಲೀಸರ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಪ್ರವಾಸಿ ಮಂದಿರದ ಬಳಿಯಿಂದ ಗಾಳಿ ಮಾರೆಮ್ಮ ದೇವಸ್ಥಾನದವರೆಗೆ ರೋಡ್ ಷೋ ನಡೆಯಿತು. ರಸ್ತೆಯುದ್ದಕ್ಕೂ ಬಿಜೆಪಿ ಧ್ವಜ, ಕೇಸರಿ ಬಂಟಿಂಗ್‌ ಕಟ್ಟಿದ್ದ ಕಾರ್ಯಕರ್ತರು ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು. ರಸ್ತೆಯ ಇಕ್ಕೆಲಗಳಲ್ಲೂ ನಿಂತು ಸಾರ್ವಜನಿಕರು ಕೈಬೀಸಿದರು.

ರೋಡ್‌ ಶೋ ನಂತರ ಮಾತನಾಡಿದ ಅಮಿತ್‌ ಶಾ, ದೇಶದಲ್ಲಿ ಭಯೋತ್ಪಾದನೆಯನ್ನು ಮಟ್ಟಹಾಕಿದ್ದೇವೆ. ಕಾಶ್ಮೀರದಲ್ಲಿ 370 ತೆಗೆದು ಹಾಕಿದ್ದು ಮೋದಿ. ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ನಿರ್ಮಾಣವಾಗುತ್ತಿದೆ. ದೇಶ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಶಾ. ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಕರ್ನಾಟಕವನ್ನು ದೆಹಲಿ ನಾಯಕರು ಎಟಿಎಮ್ ಮಾಡಿಕೊಂಡಿದ್ದರು. ಜೆಡಿಎಸ್ ಕಾಂಗ್ರೆಸ್ ಈ ರಾಜ್ಯವನ್ನು ಲೂಟಿ ಹೊಡೆದಿವೆ. ಜೆಡಿಎಸ್ ಕುಟುಂಬ ರಾಜಕಾರಣದಿಂದ ರಾಜ್ಯ ನಲುಗಿದೆ. ಇದೆಲ್ಲಕ್ಕೂ ಬಿಜೆಪಿಯೊಂದೇ ಪರಿಹಾರ.
ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಅಮಿತ್‌ ಶಾ ಕರೆ ನೀಡಿದರು.

ಹುಬ್ಬಳ್ಳಿಯಲ್ಲಿ ವಿಜಯ ಸಂಕಲ್ಪ ಅಭಿಯಾನದಲ್ಲಿ ಭಾಗಿಯಾದ ಅಮಿತ್ ಶಾ, ಕುಂದಗೋಳ ಪಟ್ಟಣದಲ್ಲಿರುವ ಬಸವರಾಜ್ ಹಂಚಿನಮನಿ ಅವರ ಮನೆಯ ಗೋಡೆ ಮೇಲೆ ಬರಹಕ್ಕೆ ಬಣ್ಣ ಹಚ್ಚಿದರು. ನಂತರ ಗೋಡೆಗೆ ಕರಪತ್ರ ಅಂಟಿಸಿದರು. ಹಂಚಿನಮನಿ ಅವರ ಕುಟುಂಬದವರು ಅಮಿತ್‌ ಶಾ ಅವರಿಗೆ ಆರತಿ ಬೆಳಗಿ, ತಿಲಕವಿಟ್ಟು ಸ್ವಾಗತಿಸಿದರು.

Exit mobile version