ಬೆಂಗಳೂರು: ಲಂಚ ಸ್ವೀಕರಿಸುವ ವೇಳೆ ನಗರ ಜಿಲ್ಲಾ ಆರೋಗ್ಯ ಅಧಿಕಾರಿ (ಡಿಎಚ್ಒ) ಡಾ. ನಿರಂಜನ್ ಲೋಕಾಯುಕ್ತ (Lokayukta raid) ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. ಹೊಸ ಆಸ್ಪತ್ರೆಗೆ ಪರವಾನಗಿ ನೀಡುವ ಸಲುವಾಗಿ ಡಿಎಚ್‌ಒ 1.25 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ. ಅದರಂತೆ 40 ಸಾವಿರ ರೂಪಾಯಿ ಅಡ್ವಾನ್ಸ್ ತೆಗೆದುಕೊಳ್ಳುವ ವೇಳೆ ನಗರ ಲೋಕಾಯುಕ್ತ ಎಸ್‌ಪಿ ಅಶೋಕ್ ನೇತೃತ್ವದ ತಂಡ ದಾಳಿ ಮಾಡಿ ಡಾ. ನಿರಂಜನ್ ಅವರನ್ನು ವಶಕ್ಕೆ ಪಡೆದಿದೆ.
ಇದನ್ನೂ ಓದಿ | Lokayukta Raid | ಲಂಚ ಪಡೆಯುವಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಜೆಸ್ಕಾಂ ಅಧಿಕಾರಿ