ಬೆಂಗಳೂರು: ಸಿಎಂ ಸ್ಥಾನಕ್ಕೆ ಪ್ರಬಲ ಪೈಪೋಟಿ ನಡೆಸಿ ಕೊನೆಗೆ ಡಿಸಿಎಂ ಆಗಿರುವ ಡಿ.ಕೆ. ಶಿವಕುಮಾರ್ ಅವರು ಈಗ ಸರ್ಕಾರಿ ಮನೆಯಾಗಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕೆಂಬ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.
ಇದೀಗ ಸರ್ಕಾರದ ಮೂರು ಬಂಗಲೆಗಳಿದ್ದು, ಅವುಗಳಲ್ಲಿ ಯಾವುದಾದರೂ ಒಂದನ್ನು ಪಡೆಯಲೇಬೇಕು ಎಂದು ಪಣ ತೊಟ್ಟಿದ್ದಾರೆ. ಮೊದಲನೆಯದಾಗಿ ಬಿಜೆಪಿ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಇದ್ದ ನಿವಾಸಕ್ಕೆ ಮೊದಲ ಆದ್ಯತೆಯನ್ನು ನೀಡಿದ್ದಾರೆ.
ಎರಡನೆಯದಾಗಿ ಪ್ರಸ್ತುತ ಸಭಾಪತಿ ಬಸವರಾಜ ಹೊರಟ್ಟಿ ಇರುವ ಕುಮಾರ ಕೃಪ ರಸ್ತೆಯಲ್ಲಿರುವ ನಿವಾಸವನ್ನು ಆಯ್ಕೆಗೆ ಪರಿಗಣಿಸಿದ್ದಾರೆ. ಮೂರನೆಯದಾಗಿ ಸಿಎಂ ಸಿದ್ದರಾಮಯ್ಯ ಈಗ ವಾಸಿಸುತ್ತಿರುವ ನಿವಾಸವನ್ನು ಕೇಳಿದ್ದಾರೆ ಎನ್ನಲಾಗಿದೆ.
ಈ ಮೂರು ನಿವಾಸಗಳು ಬೃಹತ್ ಹೊರಾಂಗಣ ಹೊಂದಿವೆ. ವಿಶಾಲವಾದ ಲಾನ್ ಹೊಂದಿವೆ. ದಿನ ನಿತ್ಯ ಬರುವ ಜನರನ್ನು ಭೇಟಿ ಮಾಡಲು ಸ್ಥಳಾವಕಾಶವಿದೆ. ಪಾರ್ಕಿಂಗ್ ವ್ಯವಸ್ಥೆ ಎಲ್ಲದಕ್ಕೂ ಅನುಕೂಲ ಆಗಲಿದೆ. ಈ ಮೂರರಲ್ಲಿ ಯಾವುದಾದರೂ ಒಂದನ್ನು ನೀಡಿ ಎಂದು ಕೇಳಿರುವುದಾಗಿ ಮೂಲಗಳು ಹೇಳಿವೆ.
ಇದನ್ನೂ ಓದಿ: Fact Check: ʼಅಲ್ಲಾಡ್ಸು ಅಲ್ಲಾಡ್ಸು..ʼ ಪದ್ಯಕ್ಕೆ ಡ್ಯಾನ್ಸ್ ಮಾಡಿದವರು ಸಿದ್ದರಾಮಯ್ಯ ಅವರಾ?