Site icon Vistara News

Domestic Violence : ಕಪ್ಪು ಎಂದು ಹೀಯಾಳಿಸುವ ಪತ್ನಿ ಜತೆ ಬದುಕು ಕಷ್ಟ; ಡೈವೋರ್ಸ್‌ ದಯಪಾಲಿಸಿದ ಹೈಕೋರ್ಟ್

Karnataka high court teachers appointment

ಬೆಂಗಳೂರು: ಹೆಂಡತಿಯೊಬ್ಬಳು ಗಂಡನನ್ನು ಪದೇಪದೆ ಅವನ ಚರ್ಮದ ಬಣ್ಣದ ಆಧಾರದಲ್ಲಿ (Condemning on the Basis of skin colour) ಹೀಯಾಳಿಸುವುದು ಕ್ರೌರ್ಯವಾಗುತ್ತದೆ (Cruelty) ಎಂದು ಹೈಕೋರ್ಟ್‌ (Karnataka High court) ಅಭಿಪ್ರಾಯಪಟ್ಟಿದೆ. ಮಾತ್ರವಲ್ಲ, ಅಂಥ ಹೆಂಡತಿಯೊಂದಿಗೆ ಬಾಳ್ವೆ ನಡೆಸುವುದು ಕಷ್ಟ ಎಂದು ಹೇಳಿ ಡೈವೋರ್ಸ್‌ ದಯಪಾಲಿಸಿದೆ. ಈ ಘಟನೆ ನಡೆದಿರುವುದು‌ (Domestic Violence) ಕರ್ನಾಟಕ ಹೈಕೋರ್ಟ್‌ನಲ್ಲಿ.

ಮದುವೆಯಾಗಿ ಐದೇ ವರ್ಷದಲ್ಲಿ ಅವರಿಬ್ಬರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ಇಂಥ ಸಣ್ಣ ವಿಷಯಕ್ಕೆಲ್ಲ ಡೈವೋರ್ಸ್‌ ಕೊಡಲು ಸಾಧ್ಯವಿಲ್ಲ ಎಂದು ಕೌಟುಂಬಿಕ ನ್ಯಾಯಾಲಯ ಅವಕಾಶ ಕೊಟ್ಟಿರಲಿಲ್ಲ. ಇದನ್ನು ಪ್ರಶ್ನಿಸಿ ಪತಿ ಹೈಕೋರ್ಟ್‌ ಮೆಟ್ಟಿಲು ಏರಿದ್ದರು. ಈಗ ಹೈಕೋರ್ಟ್‌ ಡೈವೋರ್ಸ್‌ ನೀಡಿದೆ.

ಏನಿದು ಕಪ್ಪು ಚರ್ಮದ ನಿಂದನೆ ಪ್ರಕರಣ?

ಬೆಂಗಳೂರಿನ ನಿವಾಸಿಗಳಾಗಿದ್ದ ಅವರಿಬ್ಬರಿಗೆ ಮದುವೆಯಾಗಿದ್ದು 2007ರಲ್ಲಿ. ಕೆಲವೇ ವರ್ಷಗಳಲ್ಲಿ ಅವರಿಬ್ಬರ ಸಂಬಂಧ ಹಳಸಿತ್ತು. ಹೆಂಡತಿ ಪದೇಪದೆ ನಾನು ಕಪ್ಪು ಕಪ್ಪು ಎಂದು ಹೀಯಾಳಿಸುತ್ತಿದ್ದರು ಎಂದು ಆಪಾದಿಸಿ 2012ರಲ್ಲಿ ಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ಬೆಂಗಳೂರಿನ 2ನೇ ಹೆಚ್ಚುವರಿ ಪ್ರಧಾನ ಕೌಟುಂಬಿಕ ನ್ಯಾಯಾಲಯ 2017ರ ಜ.13ರಂದು ಡೈವೋರ್ಸ್‌ ನಿರಾಕರಿಸಿತ್ತು.

ಕೌಟುಂಬಿಕ ನ್ಯಾಯಾಲಯದಲ್ಲಿ ಗಂಡನ ಆರೋಪಗಳೇನು?

  1. ವಿವಾಹ ನಂತರ ಪತ್ನಿ ಸದಾ ನನ್ನನ್ನು ಕಪ್ಪು ಚರ್ಮದವರೆಂದು ಹೇಳುತ್ತಾ ಅವಮಾನಿಸುತ್ತಿದ್ದಳು. ಆದರೆ, ಮಗಳಿಗಾಗಿ ನಾನು ಆ ಅವಮಾನ ಸಹಿಕೊಳ್ಳುತ್ತಿದ್ದೆ.
  2. 2011ರ ಅ.29ರಂದು ಪತ್ನಿಯು ನನ್ನ ಹಾಗೂ ವೃದ್ಧ ತಾಯಿ ಸೇರಿ ಕುಟುಂಬ ಸದಸ್ಯರೆಲ್ಲರ ವಿರುದ್ಧ ಕಿರುಕುಳ ಮತ್ತು ಕೌಟುಂಬಿಕ ದೌರ್ಜನ್ಯ ಆರೋಪದಡಿ ಪ್ರಕರಣ ದಾಖಲಿಸಿದ್ದರು.
  3. ಆ ದೂರಿನ ಸಂಬಂಧ ಪೊಲೀಸರು ನನಗೆ ಸಾಕಷ್ಟು ಕಿರುಕುಳ ನೀಡಿದ್ದಾರೆ. ಹಲವು ದಿನಗಳ ಕಾಲ ಪೊಲೀಸ್‌ ಠಾಣೆ ಮತ್ತು ಕೋರ್ಚ್‌ಗೆ ಅಲೆದಾಡುವಂತಾಯಿತು.
  4. ಇಷ್ಟೆಲ್ಲ ಗಲಾಟೆಗಳಾದ ಬಳಿಕ ಆಕೆ ನನ್ನನ್ನು ತೊರೆದು ತವರು ಮನೆ ಸೇರಿದವರು ವಾಪಸಾಗಿಲ್ಲ.
  5. ಅವಳಿಗೆ ನನ್ನೊಂದಿಗೆ ದಾಂಪತ್ಯ ಜೀವನ ಮುಂದುವರಿಸಲು ಆಸಕ್ತಿ ಇಲ್ಲ.
  6. ಆಕೆ ನಾನು ಉದ್ಯೋಗ ಮಾಡುವ ಕಂಪನಿಗೂ ದೂರು ನೀಡಿದ್ದು, ಅವರು ಕೂಡಾ ನನ್ನನ್ನು ವಿಚಾರಣೆ ನಡೆಸಿದ್ದಾರೆ. ಇದರಿಂದ ನನಗೆ ಮಾನಸಿಕ ಯಾತನೆ ನೀಡಿದೆ.
  7. ಆಕೆ ವಿಧವಿಧವಾಗಿ ನನಗೆ ಹಿಂಸೆ ನೀಡುತ್ತಿರುವುದಿಂದ ಇದನ್ನು ಕ್ರೌರ್ಯ ಪರಿಗಣಿಸಿ ವಿಚ್ಛೇದನ ಮಂಜೂರು ಮಾಡಬೇಕು.

ಆದರೆ, ಇದಿಷ್ಟನ್ನೇ ಇಟ್ಟುಕೊಂಡು ಡೈವೋರ್ಸ್‌ ನೀಡಲಾಗದು ಎಂದು ಕೌಟುಂಬಿಕ ನ್ಯಾಯಾಲಯ ಹೇಳಿತ್ತು. ಇದನ್ನು ಪ್ರಶ್ನಿಸಿ ಪತಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಹೈಕೋರ್ಟ್‌ನಲ್ಲಿ ಪತ್ನಿ ಹೇಳಿದ್ದೇನು?

ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿದ ಪತಿ ಸಲ್ಲಿಸಿದ ಅರ್ಜಿಗೆ ಪ್ರತಿಯಾಗಿ ಪತ್ನಿಯೂ ದಾವೆ ಸಲ್ಲಿಸಿದ್ದರು. ʻʻನನ್ನ ಗಂಡನಿಗೆ ಬೇರೊಂದು ಮಹಿಳೆಯೊಂದಿಗೆ ಅಕ್ರಮ ಸಂಬಂಧವಿತ್ತು. ಅವರ ಸಂಬಂಧದಲ್ಲಿ ಒಂದು ಮಗು ಕೂಡಾ ಇದೆ. ನಾನು ಮೊದಲಿಗೆ ಗಂಡನ ಮನೆಯಲ್ಲಿಯೇ ಅತ್ತೆ, ನಾದಿನಿ ಮತ್ತು ಮೈದುನನ ಜೊತೆಗೆ ವಾಸವಾಗಿದ್ದೆ. 2011ರ ಏ.7ರಂದು ಪ್ರತ್ಯೇಕ ಮನೆ ಮಾಡಿದಾಗಲೂ ಗಂಡನ ಕುಟುಂಬ ಸದಸ್ಯರು ಮನೆಗೆ ಬರುತ್ತಿದ್ದರು. ಆದರೆ, ಗಂಡ ನನ್ನ ಜತೆ ಕೆಟ್ಟದಾಗಿ ವರ್ತಿಸುತ್ತಿದ್ದರು. ನಿತ್ಯ ಮನೆಗೆ ರಾತ್ರಿ ತಡವಾಗಿ ಬರುತ್ತಿದ್ದರು. ನನ್ನನ್ನು ಮನೆಯಿಂದ ಹೊರಗೆ ಹೋಗಲು ಬಿಡುತ್ತಿರಲಿಲ್ಲʼʼ ಎಂದು ದೂರು ಸಲ್ಲಿಸಿದ್ದರು.

ಹೈಕೋರ್ಟ್‌ ಡೈವೋರ್ಸ್‌ ಕೊಡಲು ಕಾರಣವೇನು?

  1. ಪತಿಯ ಅಕ್ರಮ ಸಂಬಂಧ ಕುರಿತಂತೆ ಪತ್ನಿ ಆಧಾರರಹಿತ ಆರೋಪ ಮಾಡಿದ್ದಾರೆ. ಆದರೆ, ಇದಕ್ಕೆ ಪೂರಕವಾದ ಸಾಕ್ಷಿಗಳಿಲ್ಲ. ಆದರೆ, ಇಂತಹ ಆರೋಪ ಮಾಡುವ ಮೂಲಕ ಕ್ರೂರವಾಗಿ ವರ್ತಿಸಿದ್ದಾರೆ.
  2. ಮಹಿಳೆ ತನ್ನ ಪತಿ ಮತ್ತವರ ಕುಟುಂಬ ಸದಸ್ಯರ ವಿರುದ್ಧ ಹಲವು ಕ್ರಿಮಿನಲ್‌ ಕೇಸು ದಾಖಲಿಸಿದ್ದಾರೆ.
  3. ‘ಕಪ್ಪು ಚರ್ಮದವರು’ ಎಂದು ಸದಾ ಹೇಳುವ ಮೂಲಕ ಪತಿಗೆ ಪತ್ನಿ ಅವಮಾನ ಮಾಡುತ್ತಿದ್ದರು.
  4. ಸಕಾರಣವಿಲ್ಲದಿದ್ದರೂ ಪತಿಯ ಜೊತೆ ಇರದೇ ಪತ್ನಿ ತವರು ಮನೆ ಸೇರಿದ್ದಾರೆ.
  5. ಹಲವು ವರ್ಷಗಳಿಂದ ಪತಿಯ ಸಂಪರ್ಕದಲ್ಲಿ ಇಲ್ಲದ ಪತ್ನಿ, ಪತಿಯೊಂದಿಗೆ ಸಹಬಾಳ್ವೆ ನಡೆಸಲು ಸಿದ್ಧಳಿದ್ದೇನೆ. ಆದರೆ, ಯಾವ ಕಾರಣಕ್ಕೂ ಅವರ ವಿರುದ್ಧ ದಾಖಲಿಸಿರುವ ದೂರು ಹಿಂಪಡೆಯವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಹೀಗಾಗಿ ಅವರು ಪತಿಯೊಂದಿಗೆ ಬಾಳುವ ಆಸಕ್ತಿ ಹೊಂದಿಲ್ಲ ಎನ್ನುವುದು ಸ್ಪಷ್ಟ.
  6. ಅವರ ಸಂಬಂಧದಲ್ಲಿ ದೊಡ್ಡ ಬಿರುಕು ಇರುವುದು ಸ್ಪಷ್ಟವಾಗುತ್ತದೆ. ಆದ್ದರಿಂದ ಕ್ರೌರ್ಯದ ಆಧಾರದ ಮೇಲೆ ಪತಿಗೆ ವಿಚ್ಛೇದನ ಮಾಡಬಹುದಾಗಿದೆ.
  7. ಒಂದು ವೇಳೆ ಪತ್ನಿ ಜೀವನಾಂಶ ಕೋರಿ ಅರ್ಜಿ ಸಲ್ಲಿಸಿದರೆ ಕೌಟುಂಬಿಕ ನ್ಯಾಯಾಲಯ ಪರಿಶೀಲಿಸಿ ನಿರ್ಧರಿಸಬೇಕು ಎಂದು ಹೈಕೋರ್ಟ್‌ ಆದೇಶದಲ್ಲಿ ತಿಳಿಸಿದೆ.

ಇದನ್ನೂ ಓದಿ: High court :‌ ಪತ್ನಿ, ಮಕ್ಕಳ ಪಾಲನೆ ಗಂಡನ ಧರ್ಮ ; ಜೀವನಾಂಶ ಕೊಡಲೊಪ್ಪದವನಿಗೆ ಕುರಾನ್‌ ಪಾಠ ಮಾಡಿದ ನ್ಯಾ. ದೀಕ್ಷಿತ್

ಬೆಂಗಳೂರು: ಹೆಂಡತಿಯೊಬ್ಬಳು ಗಂಡನನ್ನು ಪದೇಪದೆ ಅವನ ಚರ್ಮದ ಬಣ್ಣದ ಆಧಾರದಲ್ಲಿ (Condemning on the Basis of skin colour) ಹೀಯಾಳಿಸುವುದು ಕ್ರೌರ್ಯವಾಗುತ್ತದೆ (Cruelty by wife) ಎಂದು ಹೈಕೋರ್ಟ್‌ (Karnataka High court) ಅಭಿಪ್ರಾಯಪಟ್ಟಿದೆ. ಮಾತ್ರವಲ್ಲ, ಅಂಥ ಹೆಂಡತಿಯೊಂದಿಗೆ ಬಾಳ್ವೆ ನಡೆಸುವುದು ಕಷ್ಟ ಎಂದು ಹೇಳಿ ಡೈವೋರ್ಸ್‌ ದಯಪಾಲಿಸಿದೆ. ಈ ಘಟನೆ ನಡೆದಿರುವುದು‌ (Domestic Violence) ಕರ್ನಾಟಕ ಹೈಕೋರ್ಟ್‌ನಲ್ಲಿ.

Exit mobile version