Site icon Vistara News

Double Murder : ಜೈನ ಮುನಿ, ಯುವ ಬ್ರಿಗೇಡ್ ಕಾರ್ಯಕರ್ತ ಹತ್ಯೆ ತನಿಖೆಗೆ ಬಿಜೆಪಿಯಿಂದ 2 ಟೀಮ್‌

Jain Muni and Yuva brigade activist murder

ಬೆಂಗಳೂರು: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಮಠದ ಜೈನ ಮುನಿಗಳು (Jain Muni Murder) ಮತ್ತು ತಿ. ನರಸೀಪುರದ ಯುವ ಬ್ರಿಗೇಡ್‌ ಕಾರ್ಯಕರ್ತ (Yuva brigade activist) ವೇಣುಗೋಪಾಲ್‌ ನಾಯಕ್‌ ಕೊಲೆ ಪ್ರಕರಣದ (Double Murder) ಹಿಂದಿನ ಸತ್ಯಾಸತ್ಯತೆಯನ್ನು ಶೋಧ ಮಾಡಲು ಬಿಜೆಪಿ ಎರಡು ಶೋಧನಾ ತಂಡಗಳನ್ನು (BJP forms two teams) ರಚಿಸಿದೆ.

ರಾಜ್ಯದಲ್ಲಿ ನಡೆಯುತ್ತಿರುವ ಹಿಂದು ಕಾರ್ಯಕರ್ತರ ಸರಣಿ ಹತ್ಯೆಗಳನ್ನು (Serial murder) ಖಂಡಿಸಿ ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್‌ ಕುಮಾರ್‌ ಕಟೀಲ್‌ (Nalin kumar Kateel) ಅವರು, ಸತ್ಯಾಸತ್ಯತೆ ತಿಳಿಯಲು ತಂಡಗಳನ್ನು ರಚಿಸಿದ್ದಾರೆ. ಈ ತಂಡಗಳು ಮಂಗಳವಾರ ಬೆಳಗಾವಿ ಮತ್ತು ಮೈಸೂರಿಗೆ ಭೇಟಿ ನೀಡಲಿವೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ಒಂದು ತಂಡದ ನೇತೃತ್ವವನ್ನು ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್‌ ಕುಮಾರ್‌ ಕಟೀಲ್‌ ಅವರು ವಹಿಸಲಿದ್ದರೆ, ಇನ್ನೊಂದು ತಂಡಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಮುಖ್ಯಸ್ಥರಾಗಿರುತ್ತಾರೆ.

ತಂಡಗಳು ಹೀಗಿವೆ

ಜೈನಮುನಿ ಹತ್ಯೆ ಸ್ಥಳಕ್ಕೆ ಭೇಟಿ ನೀಡಲಿರುವ ತಂಡ

1. ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್‌ ಕುಮಾರ್‌ ಕಟೀಲ್‌, 2. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ, 3. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕ ಮಹೇಶ ಟೆಂಗಿನಕಾಯಿ, 4. ಶಾಸಕ ಅಭಯ ಪಾಟೀಲ್‌, 5. ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, 6. ಸಂಸದರಾದ ಮಂಗಳಾ ಸುರೇಶ್‌ ಅಂಗಡಿ, 7. ಎಂಎಲ್‌ಸಿ ಮಹಾಂತೇಶ್‌ ಕವಟಗಿಮಠ, 8. ಬೆಳಗಾವಿ ನಗರ ಜಿಲ್ಲಾಧ್ಯಕ್ಷ ಅನಿಲ್‌ ಬೆನಕೆ, 9. ಚಿಕ್ಕೋಡಿ ಜಿಲ್ಲಾಧ್ಯಕ್ಷ ಡಾ. ರಾಜೇಶ್‌ ನೇರ್ಲಿ, 10. ಬೆಳಗಾವಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಸಂಜಯ್‌ ಪಾಟೀಲ್‌, 11. ಬಿಜೆಪಿ ರಾಜ್ಯಾಧ್ಯಕ್ಷ ಎಂ.ಬಿ. ಜಿರಲಿ

ಇದನ್ನೂ ಓದಿ: Jain muni Murder : ಜೈನಮುನಿ ಕೊಲೆ ಪ್ರಕರಣ ಸಿಬಿಐಗೆ ವಹಿಸಲ್ಲ: ಡಾ. ಜಿ. ಪರಮೇಶ್ವರ

ವೇಣುಗೋಪಾಲ್‌ ನಾಯಕ್‌ ಮನೆಗೇ ಭೇಟಿ ನೀಡಲಿರುವ ತಂಡ

  1. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, 2. ಶಾಸಕ ಡಾ. ಸಿ.ಎನ್‌. ಅಶ್ವತ್ಥನಾರಾಯಣ, 3. ಮೈಸೂರು ಸಂಸದ ಪ್ರತಾಪಸಿಂಹ, 4. ಮೈಸೂರು ನಗರ ಜಿಲ್ಲಾ ಅಧ್ಯಕ್ಷ, ಶಾಸಕ ಶ್ರೀವತ್ಸ, 5. ಮಾಜಿ ಶಾಸಕ ಎನ್‌. ಮಹೇಶ್‌, 6. ಮಾಜಿ ಶಾಸಕ ಪ್ರೀತಮ್‌ ಗೌಡ, ಅರಣ್ಯ, ವಸತಿ ಮತ್ತು ವಿಹಾರ ನಿಗಮದ ಮಾಜಿ ಅಧ್ಯಕ್ಷ ಅಪ್ಪಣ್ಣ, ಮಾಜಿ ಮೇಲ್ಮನೆ ಸದಸ್ಯ ಪ್ರೊ. ಮಲ್ಲಿಕಾರ್ಜುನ, ವಿಭಾಗ ಪ್ರಭಾರಿ ವೈ.ವಿ ರವಿಶಂಕರ್‌, ಮೈಸೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಶ್ರೀಮತಿ ಮಂಗಳಾ ಸೋಮಶೇಖರ್‌.

ಚಿಕ್ಕೋಡಿ ಹಿರೇಕೋಡಿ ಮಠದ ಮುನಿಗಳನ್ನು ನಾರಾಯಣ ಮಾಳಿ ಮತ್ತು ಹುಸೇನ್‌ ಡಾಲಾಯತ್‌ ಎಂಬಿಬ್ಬರು ಸೇರಿ ಕೊಲೆ ಮಾಡಿದ್ದರು. ಮುನಿಗಳನ್ನು ಕೊಲೆ ಮಾಡಿದ ದುಷ್ಟರು ಅವರ ದೇಹವನ್ನು ಒಂಬತ್ತು ತುಂಡುಗಳಾಗಿ ಕತ್ತರಿಸಿ ಬೋರ್‌ವೆಲ್‌ಗೆ ಹಾಕಿದ್ದರು.

ತಿ. ನರಸೀಪುರದಲ್ಲಿ ನಡೆದ ಹನುಮ ಜಯಂತಿಯಲ್ಲಿ ಹುಟ್ಟಿಕೊಂಡ ವಿವಾದದ ಹಿನ್ನೆಲೆಯಲ್ಲಿ ಯುವ ಬ್ರಿಗೇಡ್‌ ಕಾರ್ಯಕರ್ತ ವೇಣುಗೋಪಾಲ್‌ ನಾಯಕ್‌ ಅವರನ್ನು ಕೊಲೆ ಮಾಡಲಾಗಿದೆ. ಈ ಎರಡು ಕೊಲೆಗಳನ್ನು ಹಿಂದು ನಾಯಕರ ಕೊಲೆ ಎಂಬಂತೆ ಬಿಜೆಪಿ ಪರಿಗಣಿಸಿದ್ದು, ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಬಳಿಕ ಇಂಥ ಕೃತ್ಯಗಳು ಹೆಚ್ಚಾಗಿವೆ ಎಂದು ಆರೋಪಿಸಿವೆ. ಈ ಕೊಲೆಗಳ ಸತ್ಯ ಶೋಧನೆಗೆ ಬಿಜೆಪಿ ಮುಂದಾಗಿದೆ.

Exit mobile version