Site icon Vistara News

Dr C N Manjunath: ಬೆಂಗಳೂರಿನಲ್ಲೇ ಸುರೇಶ್‌ ವಿರುದ್ಧ ಡಾ. ಮಂಜುನಾಥ್‌ಗೆ 2 ಲಕ್ಷ ಮತಗಳ ಲೀಡ್‌! ಕ್ಷೇತ್ರವಾರು ಪಟ್ಟಿ ಇಲ್ಲಿದೆ

Dr C N Manjunath

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ (Bangalore Rural Election Result 2024) ಮೂರು ಬಾರಿ ಸಂಸದರಾಗಿ ಭಾರಿ ಅಂತರದಿಂದ ಆಯ್ಕೆಯಾಗಿದ್ದ ಡಿ.ಕೆ. ಸುರೇಶ್‌ ಅವರು ಈ ಬಾರಿ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್‌ ಮಂಜುನಾಥ್‌ (Dr C N Manjunath) ಅವರ ವಿರುದ್ಧ ಭಾರಿ ಅಂತರದಿಂದ ಸೋತಿದ್ದಾರೆ. ವಿಶೇಷ ಅಂದರೆ ಡಿ.ಕೆ. ಸುರೇಶ್‌ ಅವರಿಗೆ ಅವರ ಹುಟ್ಟೂರು ಕನಕಪುರದಲ್ಲಿ ಮಾತ್ರ 25,677 ಮತಗಳ ಲೀಡ್‌ ಸಿಕ್ಕಿದೆ. ರಾಮನಗರದಲ್ಲಿ ಸಿಕ್ಕಿರುವುದು ಕೇವಲ 145 ಮತಗಳ ಮುನ್ನಡೆ.‌ ಇವೆರಡು ಕ್ಷೇತ್ರಗಳನ್ನು ಬಿಟ್ಟರೆ ಉಳಿದ ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲೂ ಡಾ. ಸಿ ಎನ್‌ ಮಂಜುನಾಥ್‌ ಅವರಿಗೇ ಲೀಡ್‌ ಸಿಕ್ಕಿದೆ.

ಬಿಜೆಪಿ ಅಭ್ಯರ್ಥಿಗೆ ಬೆಂಗಳೂರು ನಗರದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಸಬಹುದು. ಗ್ರಾಮಾಂತರ ಭಾಗದ ಮತದಾರರು ಡಿ.ಕೆ. ಸುರೇಶ್‌ ಅವರನ್ನು ಬೆಂಬಲಿಸಬಹುದು. ಹಾಗಾಗಿ ಯಾವುದೇ ಅಭ್ಯರ್ಥಿಯ ಗೆಲುವಿನ ಅಂತರ 50 ಸಾವಿರದ ಒಳಗೇ ಇರಬಹುದು ಎಂಬ ರಾಜಕೀಯ ಪಂಡಿತರ ಲೆಕ್ಕಾಚಾರ ತಪ್ಪಾಗಿದೆ. ಕಾಂಗ್ರೆಸ್‌ ಅಭ್ಯರ್ಥಿ ಡಿ.ಕೆ. ಸುರೇಶ್‌ ವಿರುದ್ಧ ಬಿಜೆಪಿ ಅಭ್ಯರ್ಥಿ ಡಾ.ಸಿ. ಎನ್‌ ಮಂಜುನಾಥ್‌ ಅವರು 2,69,590 ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದಾರೆ.

ಇದನ್ನೂ ಓದಿ | Lowest Margin of Wins: ಕೇವಲ 48 ಮತ ಅಂತರದ ಗೆಲುವು! ಕಡಿಮೆ ಅಂತರದಿಂದ ಗೆದ್ದವರ ಪಟ್ಟಿ ಇಲ್ಲಿದೆ

ಬೆಂಗಳೂರು ಹೊರಗಿನ ಮಾಗಡಿ, ಚನ್ನಪಟ್ಟಣ, ಕುಣಿಗಲ್‌, ಆನೇಕಲ್‌ ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲೂ ಡಾ.ಸಿ. ಎನ್‌. ಮಂಜುನಾಥ್‌ ಅವರೇ 25 ರಿಂದ 35 ಸಾವಿರದ ತನಕ ಮುನ್ನಡೆ ಸಾಧಿಸಿದ್ದಾರೆ. ಆದರೆ ಬೆಂಗಳೂರು ದಕ್ಷಿಣ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರಗಳಲ್ಲಿ ಡಿ.ಕೆ. ಸುರೇಶ್‌ ಅವರಿಗೆ ಭಾರೀ ಹಿನ್ನಡೆಯಾಗಿದೆ. ಡಾ.ಸಿ. ಎನ್‌. ಮಂಜುನಾಥ್‌ ಅವರಿಗೆ ರಾಜರಾಜೇಶ್ವರಿ ನಗರದಲ್ಲಿ 98,997 ಮತಗಳ ಭಾರಿ ಲೀಡ್‌ ಸಿಕ್ಕಿದ್ದರೆ, ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ 97,129 ಮತಗಳ ಮುನ್ನಡೆ ಸಿಕ್ಕಿದೆ. ಹೀಗೆ ಬೆಂಗಳೂರು ನಗರದಲ್ಲೇ ಬಿಜೆಪಿ ಅಭ್ಯರ್ಥಿಗೆ ಸುಮಾರು 2 ಲಕ್ಷ ಮತಗಳ ಮುನ್ನಡೆ ಸಿಕ್ಕಂತಾಗಿದೆ. ಇದರ ಪರಿಣಾಮವಾಗಿ ಡಿ.ಕೆ. ಸುರೇಶ್‌ ಅವರು ಭಾರಿ ಅಂತರದಿಂದ ಸೋತಿದ್ದಾರೆ. ಡಾ. ಮಂಜುನಾಥ್‌ ಅವರಿಗೆ ಶೇ.56.2ರಷ್ಟು ಮತಗಳು ಸಿಕ್ಕಿದ್ದರೆ, ಡಿ ಕೆ ಸುರೇಶ್‌ ಅವರಿಗೆ ಶೇ.42.2ರಷ್ಟು ಮತಗಳು ಲಭಿಸಿವೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮತಗಳ ವಿಧಾನಸಭೆ ಕ್ಷೇತ್ರವಾರು ಪಟ್ಟಿ ಈ ಕೆಳಗಿನಂತಿದೆ.

ಒಟ್ಟು ಮತ ಗಳಿಕೆ
ಡಾ. ಮಂಜುನಾಥ್: 1078914
ಡಿ.ಕೆ.ಸುರೇಶ್: 809324
ಗೆಲುವಿನ ಅಂತರ: 2,69,590

ರಾಮನಗರ ವಿಧಾನಸಭಾ ಕ್ಷೇತ್ರ
ಡಾ. ಮಂಜುನಾಥ್: 91,945
ಡಿ.ಕೆ.ಸುರೇಶ್: 92,090
ಕ್ಷೇತ್ರದ ಲೀಡ್: 145 (ಕಾಂಗ್ರೆಸ್)

ಮಾಗಡಿ ವಿಧಾನಸಭಾ ಕ್ಷೇತ್ರ
ಡಾ. ಮಂಜುನಾಥ್: 1,13,911
ಡಿ.ಕೆ.ಸುರೇಶ್: 83,938
ಕ್ಷೇತ್ರದ ಲೀಡ್: 29973(ಬಿಜೆಪಿ)

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ
ಡಾ. ಮಂಜುನಾಥ್:106971
ಡಿ.ಕೆ.ಸುರೇಶ್: 85357
ಕ್ಷೇತ್ರದ ಲೀಡ್: 21,614 (ಬಿಜೆಪಿ)

ಕನಕಪುರ ವಿಧಾನಸಭಾ ಕ್ಷೇತ್ರ
ಡಾ. ಮಂಜುನಾಥ್: 83,303
ಡಿ.ಕೆ.ಸುರೇಶ್: 1,08,980
ಕ್ಷೇತ್ರದ ಲೀಡ್: 25677 (ಕಾಂಗ್ರೆಸ್)

ಕುಣಿಗಲ್ ವಿಧಾನಸಭಾ ಕ್ಷೇತ್ರ
ಡಾ. ಮಂಜುನಾಥ್: 97,248
ಡಿ.ಕೆ.ಸುರೇಶ್: 73,410
ಕ್ಷೇತ್ರದ ಲೀಡ್: 23,838 (ಬಿಜೆಪಿ)

ಅನೇಕಲ್ ವಿಧಾನಸಭಾ ಕ್ಷೇತ್ರ
ಡಾ. ಮಂಜುನಾಥ್: 1,37,693
ಡಿ.ಕೆ.ಸುರೇಶ್: 1,15,328
ಕ್ಷೇತ್ರದ ಲೀಡ್: 22,365 (ಬಿಜೆಪಿ)

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ
ಡಾ. ಮಂಜುನಾಥ್: 2,55,756
ಡಿ.ಕೆ.ಸುರೇಶ್: 1,58,627
ಕ್ಷೇತ್ರದ ಲೀಡ್: 97,129 (ಬಿಜೆಪಿ)

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ
ಡಾ. ಮಂಜುನಾಥ್: 1,88,726
ಡಿ.ಕೆ.ಸುರೇಶ್: 89,729
ಕ್ಷೇತ್ರದ ಲೀಡ್: 98,997 (ಬಿಜೆಪಿ)

ಇದನ್ನೂ ಓದಿ | ಲಕ್ಷ್ಮೀ ಹೆಬ್ಬಾಳ್ಕರ್‌ ಕ್ಷೇತ್ರದಲ್ಲೇ ಶೆಟ್ಟರ್‌ಗೆ 50 ಸಾವಿರ ಮತಗಳ ಲೀಡ್; ಕ್ಷೇತ್ರವಾರು ಪಟ್ಟಿ ಇಲ್ಲಿದೆ!

Exit mobile version