Site icon Vistara News

Chikkaballapur Election Results : ಚಿಕ್ಕಬಳ್ಳಾಪುರದಲ್ಲಿ ಡಾ. ಕೆ. ಸುಧಾಕರ್‌ರನ್ನು ಹೀನಾಯವಾಗಿ ಸೋಲಿಸಿದ ಪ್ರದೀಪ್‌ ಈಶ್ವರ್‌

Chikkaballapur assembly election results winner pradeep eshwar

Chikkaballapur Election Results pradeep eshwar wins

ಚಿಕ್ಕಬಳ್ಳಾಪುರ: ಕರ್ನಾಟಕ ವಿಧಾನಸಭಾ ಚುನಾವಣೆ (Chikkaballapur Election Results) ಫಲಿತಾಂಶ ಪ್ರಕಟವಾಗಿದ್ದು, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪ್ರದೀಪ್‌ ಈಶ್ವರ್‌ ಭರ್ಜರಿ ಗೆಲುವು ಸಾಧಿಸಿದ್ದಾರೆ. ಇವರು 10,642 ಮತಗಳ ಅಂತರದಿಂದ ಹಾಲಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ಅವರ ವಿರುದ್ಧ ವಿಜಯ ಪತಾಕೆ ಹಾರಿಸಿದ್ದಾರೆ.

ಈ ಬಾರಿ ಕಾಂಗ್ರೆಸ್‌ ಅಭ್ಯರ್ಥಿ ಪ್ರದೀಪ್‌ ಈಶ್ವರ್‌ 86,224, ಡಾ. ಕೆ. ಸುಧಾಕರ್‌ 75,582 ಮತಗಳನ್ನು ಪಡೆದಿದ್ದು, ಜೆಡಿಎಸ್‌ ಅಭ್ಯರ್ಥಿ ಕೆ. ಪಿ. ಬಚ್ಚೇಗೌಡ 19,815 ಮತಗಳನ್ನು ಪಡೆದಿದ್ದಾರೆ.

2019ರ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಕೆ. ಸುಧಾಕರ್ 84,389 ಮತ ಪಡೆದು ಗೆದ್ದಿದ್ದರು. ಕಾಂಗ್ರೆಸ್ ಅಭ್ಯರ್ಥಿ ಎಂ. ಆಂಜಿನಪ್ಪ 49, 558 ಮತ, ಜೆಡಿಎಸ್‌ನ ರಾಧಾಕೃಷ್ಣ 35, 869 ಮತ ಪಡೆದಿದ್ದರು.

2018ರಲ್ಲಿ ನಡೆದ ಚುನಾವಣೆಯಲ್ಲಿ ಡಾ. ಕೆ. ಸುಧಾಕರ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿ ಗೆದ್ದಿದ್ದರು. ನಂತರ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿ 2019ರಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾಗಿದ್ದರು. ಆ ಬಳಿಕದ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿ ಅಭೂತಪೂರ್ವ ಜಯ ಗಳಿಸಿದ್ದರು. ಜೆಡಿಎಸ್‌ನಿಂದ ಕೆ.ಪಿ.ರಾಧಾಕೃಷ್ಣ ಹಾಗೂ ಕಾಂಗ್ರೆಸ್‌ನಿಂದ ಎಂ ಆಂಜಿನಪ್ಪ ಸ್ಪರ್ಧಿಸಿದ್ದರು. ಆದರೆ, ಈ ಬಾರಿ ಸಚಿವ ಡಾ.ಕೆ. ಸುಧಾಕರ್ ಅವರನ್ನು ಸೋಲಿಸಲು ಕಾಂಗ್ರೆಸ್‌ ಹಾಕಿದ್ದ ʼಪರಿಶ್ರಮʼ ಫಲ ನೀಡಿದೆ.

ಇದನ್ನೂ ಓದಿ | Karnataka Election Results 2023 : ಹಾಸನದ ಜಿದ್ದಾಜಿದ್ದಿಯಲ್ಲಿ ಜೆಡಿಎಸ್‌ಗೆ ಗೆಲುವು; ಪ್ರೀತಂ ಸೋಲಿಸಿದ ಸ್ವರೂಪ್‌

ʻಪರಿಶ್ರಮ ನೀಟ್ ಅಕಾಡೆಮಿʼಯ ರೂವಾರಿ ಪ್ರದೀಪ್ ಈಶ್ವರ್ ಅವರು ಸುಧಾಕರ್‌ಗೆ ತೀವ್ರ ಪೈಪೋಟಿ ನೀಡಿದ್ದರು. ಪ್ರಚಾರದ ವೇಳೆ ಸಿನಿಮಾ ಡೈಲಾಗ್‌ಗಳ ಮೂಲಕ ಯುವ ಜನರನ್ನು ಸೆಳೆದಿದ್ದರು. ತಾಲೂಕಿನ ಪೆರೇಸಂದ್ರ ಗ್ರಾಮದವರೇ ಆದ ಇಬ್ಬರ ನಡುವೆ ತೀವ್ರ ಜಿದ್ದಾಜಿದ್ದಿಯ ಸ್ಪರ್ಧೆ ಏರ್ಪಟ್ಟಿದ್ದರಿಂದ ಕ್ಷೇತ್ರದಲ್ಲಿ ಯಾರು ಗೆಲ್ಲುವರೋ ಎಂಬ ಕುತೂಹಲ ಮೂಡಿತ್ತು. ಇನ್ನು ಸುಧಾಕರ್ ವಿರುದ್ಧ‌ 40% ಕಮಿಷನ್ ಪಿತಾಮಹ‌ ಎಂದು ಭ್ರಷ್ಟಾಚಾರದ ಆರೋಪ ಮಾಡಿದ್ದ ಪ್ರದೀಪ್‌ ಈಶ್ವರ್‌ ಈ ಬಾರಿ ಮೆಡಿಕಲ್‌ ಮಿನಿಸ್ಟರ್‌ ಬೇಕಾ, ಮೆಡಿಕಲ್‌ ಮೇಷ್ಟ್ರು ಬೇಕಾ ಎಂದು ಪ್ರಚಾರದ ವೇಳೆ ಹೇಳುತ್ತಾ ಗಮನ ಸೆಳೆದಿದ್ದರು. ಇದೀಗ ಅಂತಿಮವಾಗಿ ಹಾಲಿ ಸಚಿವರ ವಿರುದ್ಧ ಪ್ರದೀಪ್‌ ಈಶ್ವರ್‌ ಗೆದ್ದು ಬೀಗಿದ್ದಾರೆ.

Exit mobile version