ಬೆಂಗಳೂರು: ಡ್ರೋನ್ ತಂತ್ರಜ್ಞಾನದಲ್ಲಿ ಅತ್ಯುನ್ನತ ಪರಿಣತಿ ಸಾಧಿಸಿರುವುದಾಗಿ ಹೇಳಿ ಮೂರು ವರ್ಷದ ಹಿಂದ ಟ್ರೋಲ್ ಆಗಿದ್ದ ಪ್ರತಾಪ್ (Drone Pratap), ಅಂದರೆ ಡ್ರೋನ್ ಪ್ರತಾಪ್ ಮತ್ತೆ ಬಂದಿದ್ದಾರೆ.
ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಹಾಗೂ ಟ್ವಿಟರ್‌ನಲ್ಲಿ ಪ್ರತಾಪ್ ಹಾಕಿಕೊಂಡಿರುವ ಪೋಸ್ಟ್ ಇದೀಗ ಕುತೂಹಲ ಮೂಡಿಸಿದೆ. ಡ್ರೋನ್ ಹಾರಿಸಿದ್ದೆ, ಅನೇಖ ಪ್ರಶಸ್ತಿಗಳು ಬಂದಿವೆ, ವಿವಿಧ ಸರ್ಕಾರಗಳು ನೀಡಿದ ಕೋಟ್ಯಂತರ ರೂ. ವೇತನ ನಿರಾಕರಿಸಿದೆ ಎಂದೆಲ್ಲ ಪ್ರತಾಪ್ ಹೇಳಿದ್ದು ಸುಳ್ಳು ಎಂದು ಮಾಧ್ಯಮವೊಂದು 2020ರಲ್ಲಿ ವರದಿ ಮಾಡಿತ್ತು.
ಆನಂತರ ಮಾಧ್ಯಮಗಳೆದುರು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಡಿಕೊಂಡಿದ್ದ ಪ್ರತಾಪ್, ಸ್ಪಷ್ಟನೆ ನೀಡಲು ಪ್ರಯತ್ನಿಸಿದ್ದರು. ಆದರೆ ಒಪ್ಪಬಲ್ಲ ಸ್ಪಷ್ಟನೆ ನೀಡಲು ವಿಫಲವಾಗಿದ್ದರಿಂದ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿದ್ದರು.
ಅಲ್ಲಿಂದಲೂ ಇನ್‌ಸ್ಟಾಗ್ರಾಮ್‌ನಲ್ಲಿ ಸಕ್ರಿಯವಾಗಿರುವ ಪ್ರತಾಪ್ (Drone Pratap), ವಿಮಾನದಲ್ಲಿ ಪ್ರಯಾಣ ಮಾಡುತ್ತಿರುವುದು, ಬೇರೆ ದೇಶದಲ್ಲಿರುವ ಫೋಟೊಗಳನ್ನು ಹಾಕಿಕೊಳ್ಳುತ್ತಿರುತ್ತಾರೆ. 14 ವಾರದ ಹಿಂದೆ ಸ್ನೇಹಿತನ ಕುಟುಂಬದೊಂದಿಗೆ ಫೋಟೊ ಹಾಕಿದ್ದ ಪ್ರತಾಪ್ ಇದೀಗ ತಮ್ಮದೇ ಫೋಟೊ ಪೋಸ್ಟ್ ಮಾಡಿದ್ದಾರೆ.
ಲ್ಯಾಪ್‌ಟಾಪ್ ಹಾಗೂ ಡ್ರೋನ್ ಎದುರು ಕುಳಿತಿರುವ ಪ್ರತಾಪ್, ಕೈಗೆ ಹಳದಿ ಬಣ್ಣದ ಗ್ಲೌಸ್ ಧರಿಸಿದ್ದಾರೆ. ಡ್ರೋನ್‌ಗೆ ಅಳವಡಿಸುವ ರೆಕ್ಕೆಗಳನ್ನು (ಪ್ರೊಪೆಲ್ಲರ್) ಇರಿಸಿಕೊಂಡಿದ್ದು, ಕೈಯಲ್ಲಿ ಸಾಲ್ಡರಿಂಗ್ ಗನ್ ಹಿಡಿದಿದ್ದಾರೆ. ಕ್ಯಾಮೆರಾದತ್ತ ನೋಡಿ ನಗುತ್ತಿರುವ ಫೋಟೊಗೆ ಕ್ಯಾಪ್ಷನ್ ಸಹ ನೀಡಿದ್ದಾರೆ.
“When The Wrong People Leave Your Life, Right Things Start Happening💹” ಅಂದರೆ, ಯಾವಾಗ ಕೆಟ್ಟ ಜನಗಳು ನಿಮ್ಮ ಜೀವನದಿಂದ ಹೊರಗೆ ಹೋಗುತ್ತಾರೆಯೋ ಆಗ ಉತ್ತಮ ಸಂಗತಿಗಳು ಘಟಿಸಲು ಆರಂಭವಾಗುತ್ತವೆ ಎಂದು ಬರೆದುಕೊಂಡಿದ್ದಾರೆ.
ಒಂದೂವರೆ ವರ್ಷದ ಹಿಂದೆ ಡ್ರೋನ್ ಹಾರಿಸುತ್ತಿರುವ ವಿಡಿಯೋ ಹಾಕಿಕೊಂಡಿದ್ದ ಪ್ರತಾಪ್ ಇದೀಗ ಡ್ರೋನ್‌ನೊಂದಿಗೆ ಫೋಟೊ ಹಾಕಿಕೊಂಡಿದ್ದಾರೆ. ಈ ನಡುವೆ ವಿವಿಧ ದೇಶಗಳಿಗೆ ಪ್ರಯಾಣಿಸಿದ ಫೋಟೊಗಳೂ ಇವೆ. ಇದೆಲ್ಲವನ್ನೂ ನೋಡಿದರೆ, ಡ್ರೋನ್ ಕುರಿತು ನಿಜವಾಗಿಯೂ ಸಂಶೋಧನೆಯನ್ನು ಮಾಡುತ್ತಿದ್ದಾರೆಯೇ ಎಂಬ ಚರ್ಚೆಗಳು ನಡೆಯುತ್ತಿವೆ.
ಫೋಟೊ ಕುರಿತು ಅನೇಕರು ಕಮೆಂಟ್ ಮಾಡಿದ್ದಾರೆ. “ಅಣ್ಣ ಮಿಕ್ಸಿ ರಿಪೇರಿ ಮಾಡ್ತಾ ಇದ್ದೀಯಾ ???”, “
ಹಾರ್ಸು ಹಾರ್ಸು ಇನ್ನು ಎಷ್ಟು ದೂರ ಆಗುತ್ತೋ ಅಷ್ಟು ದೂರ ಹಾರ್ಸು…”, “ಈ ಸಲ ಏನ್ ರಾಕೆಟ್ ಹಾರುಸ್ತಿರ ಅಣ್ಣಾ”, “ಲೋ ತಮ್ಮ… ಮೊದಲು ಡ್ರ್ಯಾಗ್ & ಲಿಫ್ಟ್ ಫಾರ್ಮುಲಾ ತಿಳ್ಕೊಂಡ್ ಅದರ ಮೇಲೆ ಒಂದು ಪೋಸ್ಟ್ ಹಾಕು.” ಎಂಬುದಾಗಿ ತರಹೇವಾರಿ ಕಮೆಂಟ್‌ಗಳು ಬರುತ್ತಿವೆ.
ಇದನ್ನೂ ಓದಿ | ಚೀನಾಕ್ಕೆ ಕೌಂಟರ್ ಕೊಡಲು ಭಾರತ-ಅಮೆರಿಕ ಸಜ್ಜು; ಡ್ರೋನ್ ತಯಾರಿಕೆಯಲ್ಲಿ ಜಂಟಿ ಸಹಭಾಗಿತ್ವ