Site icon Vistara News

Drowned in pond : ಕುರಿ ತೊಳೆಯಲು ಕೆರೆಗೆ ಇಳಿದಿದ್ದ ಒಂದೇ ಕುಟುಂಬದ ಮೂವರು ನೀರುಪಾಲು

three drowned

#image_title

ರಾಮನಗರ: ಕುರಿ ಮೈ ತೊಳೆಯಲು ಕೆರೆಗೆ ಇಳಿದಿದ್ದ ಒಂದೇ ಕುಟುಂಬದ ಮೂವರು ನೀರಿನಲ್ಲಿ ಮುಳುಗಿ (Drowned in pond) ಪ್ರಾಣ ಕಳೆದುಕೊಂಡು ದಾರುಣ ಘಟನೆ ರಾಮನಗರ ‌ಜಿಲ್ಲೆ ಮಾಗಡಿ ತಾಲೂಕಿನ ಮುತ್ತ ಸಾಗರ ಗ್ರಾಮದಲ್ಲಿ ನಡೆದಿದೆ.

ಗೊಲ್ಲರಹಟ್ಟಿ ಗ್ರಾಮದ ಒಂದೇ ಕುಟುಂಬದ ನಾಗರಾಜು (30), ಜ್ಯೋತಿ (35), ಲಕ್ಷ್ಮೀ(22) ಮೃತಪಟ್ಟ ದುರ್ದೈವಿಗಳು. ಅವರು ಕೆರೆಯಲ್ಲಿ ಕುರಿ‌‌ ಮೈತೊಳೆಯಲು ಹೋಗಿದ್ದರು. ಆಗ ನೀರಿನಲ್ಲಿ ಮುಳುಗಿ ದುರಂತ ಸಂಭವಿಸಿದೆ. ಯಾರೋ ಒಬ್ಬರು ಮುಳುಗಿದಾಗ ಉಳಿದಿಬ್ಬರು ರಕ್ಷಣೆಗೆ ಹೋಗಿ ಈ ದುರಂತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.

ಘಟನೆ ತಿಳಿಯುತ್ತಿದ್ದಂತೆಯೇ ಭಾರಿ ಸಂಖ್ಯೆಯಲ್ಲಿ ಜನ ಅಲ್ಲಿ ನೆರೆದರು. ಅಗ್ನಿ ಶಾಮಕ ದಳದ ಸಿಬ್ಬಂದಿ ಕೂಡಾ ಧಾವಿಸಿದರು. ಇಬ್ಬರ ಮೃತದೇಹಗಳನ್ನು ಹೊರಗೆ ತೆಗೆಯಲು ಅವರು ಸಮರ್ಥರಾಗಿದ್ದು, ಮತ್ತೊಬ್ಬರ ಶವಕ್ಕಾಗಿ ಹುಡುಕಾಟ ಮುಂದುವರಿದಿದೆ. ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಐಪಿಎಲ್‌ ಬೆಟ್ಟಿಂಗ್‌: ಲಕ್ಷ ಲಕ್ಷ ಕಳೆದುಕೊಂಡ ಯುವಕ ಆತ್ಮಹತ್ಯೆ

ಕಲಬುರಗಿ: ಐಪಿಎಲ್‌ ಬೆಟ್ಟಿಂಗ್‌ನಲ್ಲಿ (IPL‌ Betting) ಲಕ್ಷಾಂತರ ರೂಪಾಯಿ ಕಳೆದುಕೊಂಡ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜೇವರ್ಗಿ ಪಟ್ಟಣದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕರ ವಸತಿ ನಿಲಯದಲ್ಲಿ ನಡೆದಿದೆ. ಸಿದ್ದುಪ್ರಸಾದ ಸಾ.ಬಿರಾಳ ಬಿ (26) ನೇಣಿಗೆ ಶರಣಾದವನು.

ಸಿದ್ದುಪ್ರಸಾದ ಪದವಿ ಮುಗಿದರೂ ತನ್ನ ಸ್ನೇಹಿತರೊಂದಿಗೆ ಹಾಸ್ಟೆಲ್‌ನಲ್ಲಿ ವಾಸವಾಗಿರುತ್ತಿದ್ದ. ಐಪಿಎಲ್ ಕ್ರಿಕೆಟ್‌ನ್ನು ನೋಡುತ್ತಿದ್ದ ಆತ ಬೆಟ್ಟಂಗ್‌ನ ಹಿಂದೆ ಬಿದ್ದಿದ್ದ. ಇದರಲ್ಲಿ ಲಕ್ಷಾಂತರ ರೂಪಾಯಿ ಹಣವನ್ನು ಕಳೆದುಕೊಂಡಿದ್ದ ಎಂದು ತಿಳಿದು ಬಂದಿದೆ. ಬೆಟ್ಟಿಂಗ್‌ನಲ್ಲಿ ಹಣ ಕಳೆದುಕೊಳ್ಳುತ್ತಿದ್ದರೂ ಇವತ್ತಲ್ಲ ನಾಳೆ ಮರಳಿ ಬರುತ್ತದೆ ಎನ್ನುವ ಭರವಸೆಯೊಂದಿಗೆ ಸಾಲ ಮಾಡಿ ತಂದು 5 ‌ಲಕ್ಷ ರೂಪಾಯಿ ಸುರಿದಿದ್ದ. ಈತ ಐಪಿಎಲ್ ಬೆಟ್ಟಿಂಗ್‌ನಲ್ಲಿ ಹಣ ಕಳೆದುಕೊಂಡಿದ್ದರ ಬಗ್ಗೆ ಮನೆಯವರಿಗೆ ತಿಳಿಸಿದ್ದ ಎನ್ನಲಾಗಿದೆ.

ಇತ್ತ ಮನೆಯವರು ಸಿದ್ದುಗೆ ಹೇಗಾದರೂ ಮಾಡಿ ಸಾಲವನ್ನು ತೀರಿಸೋಣ ಎಂದು ಹೇಳಿದ್ದರಂತೆ. ಆದರೆ ಲಕ್ಷ ಕಳೆದುಕೊಂಡ ಸಿದ್ದು ಮನನೊಂದು ಯಾರು ಇಲ್ಲದ ವೇಳೆ ಹಾಸ್ಟೆಲ್‌ನಲ್ಲಿ ನೇಣು ಬಿಗಿದುಕೊಂಡಿದ್ದಾನೆ. ವಿಷಯ ತಿಳಿಯುತ್ತಿದ್ದಂತೆಯೇ ಜೇವರ್ಗಿ ಶಾಸಕ ಡಾ.ಅಜಯ್ ಸಿಂಗ್ ಹಾಗೂ ಪಿಎಸ್ಐ ಶಿವರಾಜ ಪಾಟೀಲ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನೀರಿನ ಪಂಪ್‌ ಸ್ವಿಚ್‌ ಹಾಕಲು ಹೋದಾಗ ವಿದ್ಯುತ್‌ ಶಾಕ್‌, ಯುವಕ ಮೃತ್ಯು

ಲಕ್ಷ್ಮೇಶ್ವರ (ಗದಗ): ನೀರಿನ ಪಂಪ್‌ ಮೋಟಾರ್ ಸ್ವಿಚ್ ಹಾಕಲು ಹೋಗಿ ಯುವಕನೊಬ್ಬ ಜೀವ ಕಳೆದುಕೊಂಡಿದ್ದಾನೆ (Electricution). ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಹುಲ್ಲೂರು ಗ್ರಾಮದಲ್ಲಿ ಘಟನೆ ನಡೆದಿದ್ದು, ಈಶ್ವರ ಬಸಪ್ಪ ಕುರಿ (22) ಮೃತ ದುರ್ದೈವಿ.

ಈಶ್ವರ ಬಸಪ್ಪ ಅವರು ಮನೆಯಲ್ಲಿನ ಮೋಟಾರ್ ಸ್ವಿಚ್ ಹಾಕುವಾಗ ಒಮ್ಮಿಂದೊಮ್ಮೆಗೇ ವಿದ್ಯುತ್‌ ಶಾಕ್‌ ಹೊಡೆದಿದೆ. ವಿದ್ಯುದಾಘಾತಕ್ಕೆ ಒಳಗಾದ ಯುವಕ ಅಲ್ಲೇ ಕುಸಿದು ಬಿದ್ದಿದ್ದು, ಮನೆಯವರು ಬಂದು ನೋಡುವಾಗ ಯುವಕ ಪ್ರಾಣ ಕಳೆದುಕೊಂಡಿದ್ದ. ಲಕ್ಷ್ಮೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ

ಇದನ್ನೂ ಓದಿ : Bus gutted: ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಚಲಿಸುವಾಗಲೇ ಹೊತ್ತಿ ಉರಿದ ವೋಲ್ವೋ ಬಸ್‌, ಎಲ್ಲ 30 ಪ್ರಯಾಣಿಕರು ಸೇಫ್‌

Exit mobile version