ಚಿಕ್ಕಮಗಳೂರು: ಡ್ರಂಕ್ ಆ್ಯಂಡ್ ಡ್ರೈವ್ (Drunk and Drive) ಪ್ರಕರಣದಲ್ಲಿ ದಂಡ ಹಾಕಿದ್ದಕ್ಕೆ ಆರೋಪಿಯೋಬ್ಬ ಒಂದು ತಿಂಗಳ ಬಳಿ ಕೋರ್ಟ್‌ಗೆ ನುಗ್ಗಿ ಜಡ್ಜ್ ಮೇಲೆ ಚಪ್ಪಲಿ ತೂರಿರುವ ಘಟನೆ ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯದ ಒಂದನೇ ಹೆಚ್ಚುವರಿ ಕಿರಿಯ ಶ್ರೇಣಿಯ ಕೋರ್ಟ್‌ನಲ್ಲಿ ನಡೆದಿದೆ.
ಚಿಕ್ಕಮಗಳೂರು ನಗರದ ಅರವಿಂದ ನಗರ ನಿವಾಸಿ ಲೋಕೇಶ್ ನ್ಯಾಯಾಧೀಶರ ಮೇಲೆ ಚಪ್ಪಲಿ ತೂರಿದ ಆರೋಪಿಯಾಗಿದ್ದಾನೆ. ಈತನನ್ನು ನಗರ ಪೊಲೀಸರು ಬಂಧಿಸಿದ್ದಾರೆ. ಕಳೆದ ತಿಂಗಳು ಪೊಲೀಸರು ಡ್ರಂಕ್ ಆ್ಯಂಡ್ ಡ್ರೈವ್ ತಪಾಸಣೆಯಲ್ಲಿದ್ದಾಗ ಲೋಕೇಶ್ ಸಿಕ್ಕಿಬಿದ್ದಿದ್ದ. ಆಗ ಪೊಲೀಸರು ಆತನಿಗೆ ಕೋರ್ಟ್‍ನಲ್ಲಿ ದಂಡ ಕಟ್ಟುವಂತೆ ಸೂಚಿಸಿದ್ದರು. ಕೋರ್ಟ್‌ಗೆ ಬಂದ ಆರೋಪಿ ಲೋಕೇಶ್ ೫ ಸಾವಿರ ರೂಪಾಯಿ ದಂಡ ಕಟ್ಟಿ ವಾಪಸಾಗಿದ್ದ.
ಒಂದು ತಿಂಗಳ ಬಳಿಕ ಬಂದು ಗಲಾಟೆ
ದಂಡ ಕಟ್ಟಿದ ತಿಂಗಳ ಬಳಿಕ ಪುನಃ ಕೋರ್ಟ್‌ಗೆ ಬಂದ ಲೋಕೇಶ್ ಪಾನಮತ್ತನಾಗಿದ್ದ. ಸೀದಾ ಜಿಲ್ಲಾ ನ್ಯಾಯಾಲಯದ ಒಂದನೇ ಹೆಚ್ಚುವರಿ ಕಿರಿಯ ಶ್ರೇಣಿಯ ಕೋರ್ಟ್ ಹಾಲ್‌ಗೆ ನುಗ್ಗಿ ಜಡ್ಜ್ ಮೇಲೆ ಚಪ್ಪಲಿ ತೂರಿದ್ದಾನೆ. ಕೂಡಲೇ ಅಲ್ಲೇ ಇದ್ದ ನಗರ ಪೊಲೀಸರು ಆತನನ್ನು ಬಂಧಿಸಿದ್ದಾರೆ. ನಾನು ಏನು ತಪ್ಪು ಮಾಡಿದ್ದೇನೆ ಎಂದು ದಂಡ ಹಾಕಿದ್ದೀರಾ ಎಂದು ಕೂಗಾಡಿದ್ದಾನೆ. ಆದರೆ, ತಕ್ಷಣ ಮಧ್ಯಪ್ರವೇಶ ಮಾಡಿದ ಪೊಲೀಸರು ಆತನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ. ಚಿಕ್ಕಮಗಳೂರು ನಗರ ಠಾಣೆಯಲ್ಲಿ ಲೋಕೇಶ್ ವಿರುದ್ಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | ಮಳವಳ್ಳಿ ಬಾಲಕಿ ಕೊಲೆ | ಅತ್ಯಾಚಾರ ಎಸಗಿದವನಿಗೆ ಊಟ-ತಿಂಡಿ ಕೊಡಬೇಡಿ, ಗಲ್ಲು ಶಿಕ್ಷೆಯಾಗಲಿ; ಪೋಷಕರ ಆಕ್ರೋಶ