Site icon Vistara News

Earthquake: ಕರ್ನಾಟದ ವಿಜಯಪುರ, ತಮಿಳುನಾಡಿನಲ್ಲಿ ಭೂಕಂಪ

Earthqake

ಬೆಂಗಳೂರು: ಇಂದು ಮುಂಜಾನೆ ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಭೂಕಂಪದ (Earthquake) ಅನುಭವ ಆಗಿದೆ. ಮುಂಜಾನೆ 8 ಗಂಟೆಗೆ ಎರಡೂ ರಾಜ್ಯಗಳ ಹಲವು ಕಡೆ ಭೂಕಂಪದ ಅನುಭವ ಜನರಿಗೆ ಆಯಿತು.

ಕರ್ನಾಟಕದ ವಿಜಯಪುರದಲ್ಲಿ ಭೂಕಂಪನ ಸಂಭವಿಸಿದೆ. ರಾಷ್ಟ್ರೀಯ ಭೂಕಂಪನ ಶಾಸ್ತ್ರ ಕೇಂದ್ರದ ಪ್ರಕಾರ, ಭೂಕಂಪದ ತೀವ್ರತೆಯನ್ನು ರಿಕ್ಟರ್‌ ಮಾಪಕದಲ್ಲಿ 3.1 ಎಂದು ಅಳೆಯಲಾಗಿದೆ. ಅದೇ ಸಮಯದಲ್ಲಿ, ತಮಿಳುನಾಡಿನ ಚೆಂಗಲ್ಪಟ್ಟುವಿನಲ್ಲಿ ಬೆಳಗ್ಗೆ 7:39ಕ್ಕೆ ಭೂಮಿ ಕಂಪಿಸಿದೆ. ರಿಕ್ಟರ್‌ ಮಾಪಕದಲ್ಲಿ ಭೂಕಂಪದ ತೀವ್ರತೆ 3.2ರಷ್ಟಿತ್ತು ಎಂದು ಕೇಂದ್ರ ಮಾಹಿತಿ ನೀಡಿದೆ.

ಭೂಕಂಪದಿಂದಾಗಿ ಯಾವುದೇ ಅನಾಹುತ ಸಂಭವಿಸಿಲ್ಲ. ಆದರೆ ಜನ ಮನೆಯಿಂದ ಹೊರಗೆ ಬಂದು ಗುಂಪುಗೂಡಿ ಅನುಭವವನ್ನು ಹಂಚಿಕೊಂಡರು.

ವಿಜಯನಗರ ಹಾಗೂ ಕಲಬುರಗಿ ಸುತ್ತಮುತ್ತ ಆಗಾಗ ಭೂಕಂಪನ ಸಂಭವಿಸುವುದು ಕಂಡುಬಂದಿದೆ. ಅದೃಷ್ಟವಶಾತ್‌ ಭೂಕಂಪನದ ತೀವ್ರತೆ ರಿಕ್ಟರ್‌ ಮಾಪಕದಲ್ಲಿ 5ನ್ನು ಮೀರಿ ಹೋಗಿಲ್ಲ. ಕಳೆದ ವರ್ಷ ಹತ್ತಕ್ಕೂ ಹೆಚ್ಚು ಬಾರಿ ಈ ಪ್ರದೇಶದಲ್ಲಿ ಕಂಪನಗಳು ಸಂಭವಿಸಿವೆ. ತಜ್ಞರು, ದಕ್ಖನ್‌ ಪ್ರಸ್ಥಭೂಮಿಯ ಈ ಪ್ರದೇಶ ಅಸ್ಥಿರ ಭೂಫಲಕಗಳ ಮೇಲೆ ನಿಂತಿರುವುದರಿಂದ ಭೂಕಂಪನದ ಸಾಧ್ಯತೆಗಳು ಹೆಚ್ಚು ಇವೆ ಎಂದು ಹೇಳುತ್ತಾರೆ.

ಇದನ್ನೂ ಓದಿ: Tsunami Warning: 7.6 ತೀವ್ರತೆಯ ಭೂಕಂಪ; ಭೀಕರ ಸುನಾಮಿಯ ವಾರ್ನಿಂಗ್‌!

Exit mobile version