Site icon Vistara News

ಡಾ. ರಾಜಕುಮಾರ್‌ ಪಾಠಕ್ಕೆ ಕತ್ತರಿ: ದೇವನೂರು ಸೇರಿ ಏಳು ಸಾಹಿತಿಗಳ ಪಠ್ಯ ಬೋಧಿಸದಂತೆ ಶಿಕ್ಷಣ ಇಲಾಖೆ ತಡೆ

text book

ಬೆಂಗಳೂರು: ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ವ್ಯಾಪ್ತಿಯ ಪಠ್ಯಪುಸ್ತಕ ರಚನೆ ಕುರಿತು ಗೊಂದಲಗಳಿದ್ದ ಸಮಯದಲ್ಲಿ ಸರ್ಕಾರಕ್ಕೆ ಪತ್ರ ಬರೆದಿದ್ದ ಏಳು ಸಾಹಿತಿಗಳ ಪಠ್ಯಗಳನ್ನು ಬೋಧನೆ ಮಾಡದಂತೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಇದರಲ್ಲಿ ಡಾ. ರಾಜಕುಮಾರ್‌ ಅವರ ಪಠ್ಯವೂ ಸೇರಿದೆ.

ಇದರಂತೆ ದೇವನೂರು ಮಹಾದೇವ ಸೇರಿ ಏಳು ಸಾಹಿತಿಗಳು ಬರೆದ ಪಠ್ಯವನ್ನು ಬೋಧನೆ, ಕಲಿಕೆ ಹಾಗೂ ಮೌಲ್ಯಮಾಪನಕ್ಕೆ ಪರಿಗಣಿಸಬಾರದು ಎಂದು ತಿಳಿಸಲಾಗಿದೆ.

ಈ ಕುರಿತು ಕರ್ನಾಟಕ ಪಠ್ಯಪುಸ್ತಕ ಸಂಘ ಸುತ್ತೋಲೆ ಹೊರಡಿಸಿದೆ. ಹತ್ತನೇ ತರಗತಿಯ ಪ್ರಥಮ ಭಾಷೆಯಲ್ಲಿದ್ದ ದೇವನೂರು ಮಹದೇವ ಅವರ ʼಎದೆಗೆ ಬಿದ್ದ ಅಕ್ಷರʼ(ಗದ್ಯ), ಜಿ. ರಾಮಕೃಷ್ಣ ಅವರ ʼಭಗತ್‌ ಸಿಂಗ್‌ʼ(ಪೂರಕ ಪಠ್ಯ), ತೃತೀಯ ಭಾಷೆಯ ಪಠ್ಯದಲ್ಲಿದ್ದ ಈರಪ್ಪ ಎಂ. ಕಂಬಳಿ ಅವರ ʼಹೀಗೊಂದು ಟಾಪ್‌ ಪ್ರಯಾಣʼ(ಪೂರಕ ಗದ್ಯ), ಸತೀಶ್‌ ಕುಲಕರ್ಣಿ ಅವರ ʼಕಟ್ಟತೇವ ನಾವುʼ(ಪದ್ಯ), ದ್ವಿತೀಯ ಭಾಷೆಯಲ್ಲಿದ್ದ ಸುಕನ್ಯ ಮಾರುತಿ ಅವರ ʼಏಣಿʼ(ಪದ್ಯ), ಒಂಭತ್ತನೇ ತರಗತಿಯ ತೃತೀಯ ಭಾಷೆ ಪಠ್ಯದಲ್ಲಿದ್ದ ರೂಪ ಹಾಸನ ಅವರ ʼಅಮ್ಮನಾಗುವುದೆಂದರೆʼ (ಪೂರಕ ಪದ್ಯ), ಆರನೇ ತರಗತಿ ಪ್ರಥಮ ಭಾಷೆ ಪಠ್ಯದಲ್ಲಿದ್ದ ದೊಡ್ಡಹುಲ್ಲೂರು ರುಕ್ಕೋಜಿರಾವ್‌ ಅವರ ʼಡಾ. ರಾಜಕುಮಾರ್‌ʼ (ಗದ್ಯ)ವನ್ನು ಹಿಂಪಡೆಯಲಾಗಿದೆ.

ಈ ಲೇಖಕರು ತಮ್ಮ ಅನುಮತಿಯನ್ನು ಹಿಂಪಡೆದಿರುವ ಹಿನ್ನೆಲೆಯಲ್ಲಿ ಅವುಗಳನ್ನು ಬೋಧನೆ, ಕಲಿಕೆ ಹಾಗೂ ಮೌಲ್ಯಮಾಪನಕ್ಕೆ ಪರಿಗಣಿಸಬಾರದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ | ಕುಂ. ವೀರಭದ್ರಪ್ಪ ನಿಜವಾಗಲೂ ಸಾಹಿತಿಯೇ?: ರೋಹಿತ್‌ ಚಕ್ರತೀರ್ಥ ಪ್ರಶ್ನೆ

Exit mobile version