ಬೆಂಗಳೂರು: ರಾಜ್ಯದಲ್ಲಿ ಶಿಕ್ಷಕರ ಕೊರತೆ ತೀವ್ರವಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ಶಿಕ್ಷಕ ವೃತ್ತಿಗೆ (Education News) ಪರೀಕ್ಷೆ ಬರೆಯುವವರ ವಯೋಮಿತಿಯನ್ನು ೫ ವರ್ಷಕ್ಕೆ ಏರಿಸಿ ಆದೇಶ ನೀಡಿದೆ. ಈ ಮೂಲಕ ವಯೋಮಿತಿ ಮೀರಿದ ಬಿಎಡ್, ಡಿಎಡ್ ಅಭ್ಯರ್ಥಿಗಳಿಗೆ ಭರ್ಜರಿ ಸಿಹಿ ಸುದ್ದಿಯನ್ನೇ ಕೊಟ್ಟಿದೆ.
ಸಚಿವ ಸಂಪುಟ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ಶಿಕ್ಷಕರ ಪರೀಕ್ಷೆ ಬರೆಯುವ ವಯೋಮಿತಿಯನ್ನು (Education News) ಸಡಿಲಿಕೆ ಮಾಡಲು ತೀರ್ಮಾನಿಸಲಾಗಿದೆ. ಎಲ್ಲ ವರ್ಗಗಳಿಗೂ ಸಡಿಲಿಕೆ ಮಾಡಿದ್ದು, ಯಾರೂ ಸಹ ಆತಂಕಪಡುವ ಅಗತ್ಯವಿಲ್ಲ. ಎಸ್ಸಿ, ಎಸ್ಟಿ, ಜನರಲ್ ಕೆಟಗರಿ ಸೇರಿದಂತೆ ಎಲ್ಲರಿಗೂ ಈಗ ಇರುವ ವಯೋಮಿತಿಗಿಂತ ೫ ವರ್ಷ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.
ವಿಕಲಚೇತನ, ಪ್ರ ವರ್ಗ ಒಂದು, ಎಸ್ಸಿ, ಎಸ್ಟಿಗೆ 47 ವರ್ಷವನ್ನು ನಿಗದಿಪಡಿಸಲಾಗಿದೆ. ಈ ಹಿಂದೆ ಈ ವರ್ಗಗಳಿಗೆ ೪೨ ವರ್ಷ ವಯೋಮಿತಿಯನ್ನು ನಿಗದಿಪಡಿಸಲಾಗಿತ್ತು. (Education News) ಸಾಮಾನ್ಯ ವರ್ಗಕ್ಕೆ 42 ವರ್ಷ ವಯಸ್ಸಿನ ಮಿತಿಯನ್ನು ನಿಗದಿಪಡಿಸಲಾಗಿದೆ. ಈ ಹಿಂದೆ ಸಾಮಾನ್ಯ ವರ್ಗಕ್ಕೆ ೩೭ ವರ್ಷ ನಿಗದಿಯಾಗಿತ್ತು. ಹಾಗಾಗಿ ಈಗ ನಿಗದಿಪಡಿಸಿರುವಂತೆ ಅರ್ಹ ಶಿಕ್ಷಕ ಫಲಾನುಭವಿಗಳು ಪರೀಕ್ಷೆ ಬರೆಯಬಹುದಾಗಿದೆ ಎಂದು ಮಾಧುಸ್ವಾಮಿ ತಿಳಿಸಿದ್ದಾರೆ.
ಕೊರೊನಾ ಹಿನ್ನೆಲೆ ಕ್ರಮ
ಕೊರೊನಾ ಸೇರಿದಂತೆ ಇನ್ನಿತರ ಸಮಸ್ಯೆಗಳಿಂದ ಕಳೆದ (Education News) ಮೂರು ವರ್ಷಗಳಿಂದ ಶಿಕ್ಷಕರ ನೇಮಕಾತಿಗೆ ಚಾಲನೆ ನೀಡಲು ಆಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಸಾವಿರಾರು ಬಿಎಡ್, ಡಿಎಡ್ ಅಭ್ಯರ್ಥಿಗಳು ವಯೋಮಿತಿ ಮೀರಿದ ಕಾರಣ ಅವಕಾಶದಿಂದ ವಂಚಿತರಾಗಿದ್ದರು. ಇವರನ್ನೆಲ್ಲ ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಈ ತೀರ್ಮಾನವನ್ನು ತೆಗೆದುಕೊಂಡಿದೆ.
ಇದನ್ನೂ ಓದಿ | ಎಸಿಬಿ ರದ್ದು ಬಗ್ಗೆ ಕಾನೂನು ತಂಡದ ಸಲಹೆ ಕೇಳಿದ್ದೇವೆ; ಸಿಎಂ ಬೊಮ್ಮಾಯಿ