Site icon Vistara News

Education News: ಒಂದೂ ಮಕ್ಕಳಿಲ್ಲದ ಶಾಲೆಗೆ ಇಬ್ಬರು ಶಿಕ್ಷಕರು! ಇದು ದಾಸನಹುಂಡಿ ಸಕಿಪ್ರಾ ಶಾಲೆಯ ಕಥೆ-ವ್ಯಥೆ

school in Chamarajanagar has two teachers and no students ೨

ಚಾಮರಾಜನಗರ: ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಶಿಕ್ಷಣ (Education News) ದೊರೆಯಬೇಕು. ಶಿಕ್ಷಣ ಎಂಬುದು ಪ್ರತಿಯೊಬ್ಬನ ಮೂಲಭೂತ ಹಕ್ಕುಗಳಲ್ಲೊಂದು. ಹೀಗಾಗಿ ಒಬ್ಬನೇ ವಿದ್ಯಾರ್ಥಿ ಇದ್ದರೂ ಅಂತಹ ಶಾಲೆಯನ್ನು ನಡೆಸಬೇಕು. ಅದು ಸರಿಯಾದ ಕ್ರಮ ಸಹ. ಆದರೆ, ಇಲ್ಲೊಂದು ಶಾಲೆಯಲ್ಲಿ ಸರಿಯಾಗಿ ಪಾಠ ಮಾಡುತ್ತಿಲ್ಲ ಎಂಬ ದೂರಿನಿಂದ ಇದ್ದಬದ್ದ ಮಕ್ಕಳೆಲ್ಲ ಈಗ ಖಾಸಗಿ ಶಾಲೆ ಸೇರಿದ್ದಾರೆ. ಹೀಗಾಗಿ ಈ ಶಾಲೆಯಲ್ಲಿ ಮಕ್ಕಳೇ ಇಲ್ಲ. ಹೀಗಿದ್ದರೂ ಇಲ್ಲೀಗ ಖಾಲಿ ಕೊಠಡಿಗಳಿಗೆ ಇಬ್ಬಿಬ್ಬರು ಶಿಕ್ಷಕರು ಎನ್ನುವಂತಾಗಿದೆ.

ಇದು ಯಳಂದೂರು ತಾಲೂಕಿನ ದಾಸನಹುಂಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಥೆಯಾಗಿದೆ. ಇಲ್ಲಿ ಒಂದರಿಂದ ಐದನೇ ತರಗತಿಯವರೆಗೆ ಪಾಠ ನಡೆಯುತ್ತದೆ. ಮೊದಲಿಗೆ 13 ಮಕ್ಕಳು ಇದ್ದರು. ಇವರಲ್ಲಿ ಐವರು 5ನೇ ತರಗತಿಯನ್ನು ಪಾಸ್‌ ಮಾಡಿದ್ದಾರೆ (Education News). ಹೀಗಾಗಿ ಇವರು ಮುಂದಿನ ತರಗತಿಗೆ ಬೇರೆ ಶಾಲೆಗೆ ಸಹಜವಾಗಿಯೇ ಹೋಗಿದ್ದಾರೆ. ಆದರೆ, ಉಳಿದ 8 ಮಕ್ಕಳು ಸಹ ಸರ್ಕಾರಿ ಶಾಲೆಯನ್ನು ತೊರೆದು ಖಾಸಗಿ ಶಾಲೆಯನ್ನು ಸೇರಿಕೊಂಡಿದ್ದಾರೆ. ಹೀಗಾಗಿ ಇಲ್ಲಿ ಮಕ್ಕಳೇ ಇಲ್ಲದಂತೆ ಆಗಿದೆ.

ಇದನ್ನೂ ಓದಿ: BJP Politics: ಬೀದಿಗೆ ಬಂದ ಬಿಜೆಪಿ ಕಲಹ; ಯತ್ನಾಳ್‌-ನಿರಾಣಿ ನಡುವೆ ನಿಲ್ಲದ ಅಂತರ್ಯುದ್ಧ

ಮಕ್ಕಳು ಇಲ್ಲದ ಕಾರಣ ಶಾಲೆಗೆ ಬೀಗ ಹಾಕಲಾಗಿದೆ.

ಶಾಲೆ ಬಿಡಿಸಲು ಕಾರಣ ಏನು?

ಇಲ್ಲಿರುವ ಮುಖ್ಯ ಶಿಕ್ಷಕ ವೀರಣ್ಣ ಅವರು ಮಕ್ಕಳಿಗೆ ಸರಿಯಾಗಿ ಪಾಠ (Education News) ಮಾಡುತ್ತಿಲ್ಲ ಎಂಬುದು ಪಾಲಕರ ದೂರಾಗಿದೆ. ಸರಿಯಾಗಿ ಪಾಠವನ್ನು ಮಾಡದೇ ಇದ್ದಾಗ ನಾವೇಕೆ ಶಾಲೆಗೆ ಮಕ್ಕಳನ್ನು ಕಳುಹಿಸಬೇಕು? ಮಕ್ಕಳಿಗೆ ಈ ಸಂದರ್ಭದಲ್ಲಿ ಸಮರ್ಪಕವಾದ ಶಿಕ್ಷಣ (Education News) ದೊರೆಯದಿದ್ದರೆ ಮುಂದೆ ಬಹಳ ಕಷ್ಟವಾಗುತ್ತದೆ. ಹೀಗಾಗಿ ನಮಗೆ ನಮ್ಮ ಮಕ್ಕಳ ಭವಿಷ್ಯ ಮುಖ್ಯ. ಈ ಕಾಲದಲ್ಲಿ ಮಕ್ಕಳಿಗೆ ಇಂಗ್ಲಿಷ್ ಅವಶ್ಯಕವಾಗಿ ಬೇಕು. ಇಲ್ಲಿನ ಶಿಕ್ಷಕರಿಗೆ ಏನೂ ಗೊತ್ತಿಲ್ಲ. ಇನ್ನು ಮಕ್ಕಳಿಗೆ ಏನು ಕಲಿಸುತ್ತಾರೆ? ಎಂದು ಶಿಕ್ಷಕರ ವಿರುದ್ಧ ಗ್ರಾಮಸ್ಥರು ಆರೋಪ ಮಾಡಿದ್ದಾರೆ.

ಶಿಕ್ಷಕನ ವರ್ಗಾವಣೆಗೆ ಪಟ್ಟು ಹಿಡಿದಿದ್ದ ಹಳ್ಳಿಗರು

ಇಲ್ಲಿ ಗ್ರಾಮಸ್ಥರು V/S ಶಿಕ್ಷಕ (Education News) ಎಂಬಂತೆ ಇತ್ತು. ಕಾರಣ ಕಳೆದ ಒಂದೂವರೆ ವರ್ಷದಿಂದ ಒಬ್ಬರೇ ಶಿಕ್ಷಕರು ಈ ಶಾಲೆಯಲ್ಲಿ ಇದ್ದರು. ಆದರೆ, ಅವರಿಂದ ಉತ್ತಮ ಶಿಕ್ಷಣ ದೊರೆಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದ ಗ್ರಾಮಸ್ಥರು ಶಿಕ್ಷಕನ ವರ್ಗಾವಣೆಗೂ ಪಟ್ಟು ಹಿಡಿದಿದ್ದರು. ಆದರೆ, ಇದರ ಬಗ್ಗೆ ಶಿಕ್ಷಣ ಇಲಾಖೆ ಯಾವುದೇ ಕ್ರಮ ಕೈಗೊಳ್ಳದೇ ಇರುವುದರಿಂದ ಬೇಸತ್ತು ಮಕ್ಕಳನ್ನು ಖಾಸಗಿ ಶಾಲೆಗೆ (Education News) ದಾಖಲು ಮಾಡಲಾಗಿದೆ. ಶಿಕ್ಷಕರನ್ನು ವರ್ಗಾವಣೆ ಮಾಡಿದರೆ ಮಾತ್ರ ಸರ್ಕಾರಿ ಶಾಲೆಗೆ ಸೇರಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಹೀಗಾಗಿ ಶಿಕ್ಷಕ ಮತ್ತು ಗ್ರಾಮಸ್ಥರ ನಡುವಿನ ತಿಕ್ಕಾಟಕ್ಕೆ ಸರ್ಕಾರಿ ಶಾಲೆಯೊಂದು ಮುಚ್ಚುವ ಹಂತ ತಲುಪಿದೆ.

ಟಿಸಿ ಕೊಡದಿದ್ದರೂ ಕ್ಯಾರೇ ಎಂದಿಲ್ಲ!

ಕಾನೂನು ಪ್ರಕಾರ ಮಕ್ಕಳನ್ನು (Education News) ಒಂದು ಶಾಲೆಯಿಂದ ಇನ್ನೊಂದು ಶಾಲೆಗೆ ಸೇರ್ಪಡೆ ಮಾಡಬೇಕೆಂದರೆ ಟಿಸಿಯನ್ನು ಪಡೆಯಬೇಕು. ಆ ಟಿಸಿಯನ್ನು ಸೇರ್ಪಡೆ ಮಾಡುವ ಶಾಲೆಗೆ ಕೊಟ್ಟು ದಾಖಲಾಗಬೇಕು. ಆದರೆ, ಇಲ್ಲಿ ಟಿಸಿ ಕೇಳಿದರೆ ಶಿಕ್ಷಕರು (Education News) ಕೊಟ್ಟಿಲ್ಲ ಎನ್ನಲಾಗಿದೆ. ಇದಕ್ಕೆ ಸಡ್ಡು ಹೊಡೆದಿರುವ ಪಾಲಕರು, ನೀವು ಟಿಸಿ ಕೊಡದಿದ್ದರೇನಂತೆ ಎಂದು ಮಕ್ಕಳನ್ನು ಕರೆದೊಯ್ದು ಖಾಸಗಿ ಶಾಲೆಗೆ ದಾಖಲು ಮಾಡಿದ್ದಾರೆ. ಸದ್ಯ ಮಕ್ಕಳಿಲ್ಲದೆ ಶಾಲೆಗೆ ಬೀಗ ಹಾಕಲಾಗಿದೆ.

ಇದನ್ನೂ ಓದಿ: Kempegowda Jayanti: ಬೆಂಗಳೂರು ನಂದು; ಸ್ವಾಮೀಜಿ ಸಮ್ಮುಖದಲ್ಲೇ ಡಿಕೆಶಿ-ಅಶ್ವತ್ಥನಾರಾಯಣ ಫೈಟ್‌

ಈಗ ಮತ್ತೊಬ್ಬ ಶಿಕ್ಷಕರ ನೇಮಕ

ಒಂದೂವರೆ ವರ್ಷದಿಂದ ಒಬ್ಬ ಶಿಕ್ಷಕರು (Education News) ಕರ್ತವ್ಯ ನಿರ್ವಹಿಸುತ್ತಿದ್ದರು. ಈಗ ವಾರದ ಹಿಂದಷ್ಟೇ ಮತ್ತೊಬ್ಬ ಶಿಕ್ಷಕನನ್ನು ನಿಯೋಜನೆ ಮಾಡಲಾಗಿದೆ. ಶಾಲೆಯಲ್ಲಿ ಮಕ್ಕಳಿಲ್ಲ ಎಂದು ತಿಳಿದಿದ್ದರೂ ಶಿಕ್ಷಕರೊಬ್ಬರನ್ನು ಶಿಕ್ಷಣ (Education News) ಇಲಾಖೆ ನಿಯೋಜನೆ ಮಾಡಿದೆ. ಈಗ ಬೀಗ ಹಾಕಿರುವ ಶಾಲೆಗೆ ಇಬ್ಬರು ಶಿಕ್ಷಕರಾದಂತೆ ಆಗಿದೆ.

Exit mobile version