Site icon Vistara News

BBMP: ಕಾಮಗಾರಿ ನಡೆಸದೇ ಕೋಟ್ಯಂತರ ರೂಪಾಯಿ ಬಿಲ್ ಸೃಷ್ಟಿ! ಬಿಬಿಎಂಪಿಯ 8 ಅಧಿಕಾರಿಗಳು ಸಸ್ಪೆಂಡ್

BBMP Office

BBMP Prohibits Animal Slaughter, Meat Sale On Ganesh Chaturthi

ಬೆಂಗಳೂರು, ಕರ್ನಾಟಕ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP) ಇತಿಹಾಸದಲ್ಲೇ ಮೊದಲ ಬಾರಿಗೆ 8 ಅಧಿಕಾರಿಗಳನ್ನು ಏಕಕಾಲಕ್ಕೆ ಅಮಾನುತು (Officers Suspend) ಮಾಡಲಾಗಿದೆ. ಅಕ್ರಮ ಆರೋಪ ಎಸಗಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಲೋಕಾಯುಕ್ತ ವರದಿಯ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಇಲಾಖೆ ಈ ಕಠಿಣ ಕ್ರಮ ಕೈಗೊಂಡಿದೆ.

ಕಾಂಗ್ರೆಸ್ ನೇತೃತ್ವದ ಸರ್ಕಾರವು ಅಧಿಕಾರಕ್ಕೆ ಬಂದ ಹಿನ್ನೆಲೆಯಲ್ಲಿ ಕ್ಲೀನ್ ಬಿಬಿಎಂಪಿ ಅಭಿಯಾನವನ್ನು ಕೈಗೊಂಡಿದೆ. ರಾಜರಾಜೇಶ್ವರಿ ನಗರ ವಲಯದಲ್ಲಿ ನಡೆದಿರುವ ಅಕ್ರಮದ ಕುರಿತಂತೆ ಅಧಿಕಾರಿಗಳ ಅಮಾನತು ಮಾಡಲಾಗಿದೆ. ಆರ್ ಆರ್ ನಗರ ವಲಯದಲ್ಲಿ ನಡೆದಿದ್ದ ಅಕ್ರಮ ಕಾಮಗಾರಿಗಳ ವಿರುದ್ಧ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ತನಿಖೆ ನಡೆಸಿದ್ದ ಲೋಕಾಯುಕ್ತ ವರದಿಯಲ್ಲಿ 8 ಅಧಿಕಾರಿಗಳ ತಪ್ಪೆಸಗಿರುವುದು ಸಾಬೀತಾಗಿತ್ತು. ಆರ್ ಆರ್ ನಗರ ವಲಯದಲ್ಲಿ ಸುಮಾರು 118 ಕೋಟಿ ರೂಪಾಯಿ ಕಾಮಗಾರಿಯಲ್ಲಿ ಅಕ್ರಮ ಕಂಡು ಬಂದಿತ್ತು. KRIDLಗೆ ವಹಿಸಿದ್ದ ಕಾಮಗಾರಿಯಲ್ಲಿ ಅಕ್ರಮವಾಗಿದೆ ಎಂದು ಡಿ ಕೆ ಸುರೇಶ್ ದೂರು ನೀಡಿದ್ದರು.

BBMP: ಅಮಾನತುಗೊಂಡಿರುವ ಬಿಬಿಎಂಪಿಯ ಅಧಿಕಾರಿಗಳು

ಡಿ ಕೆ ಸುರೇಶ್ ಅವರು ನೀಡಿದ್ದ ದೂರಿನಲ್ಲಿ ಏನಿತ್ತು?

ರಾಜರಾಜೇಶ್ವರಿ ವಲಯದಲ್ಲಿ ನಡೆದ ಕಾಮಗಾರಿಗಳಲ್ಲಿ ಅಕ್ರಮ ನಡೆದಿದೆ. ಕೆಆರ್‌ಐಡಿಎಲ್‌ಗೆ ಕಾಮಗಾರಿಗಳನ್ನು ವಹಿಸಲಾಗಿತ್ತು. ಕಾಮಗಾರಿಗಳನ್ನು ಅನುಷ್ಠಾನಗೊಳಿಸದೇ 250 ಕೋಟಿ ಕಾಮಗಾರಿ ಬಿಲ್‌ಗಳನ್ನು ಸೃಷ್ಟಿಸಿದ್ದಾರೆ. ಅಕ್ರಮದ ಹಿಂದೆ ಕ್ಷೇತ್ರದ ಶಾಸಕರ ಕೈವಾಡವಿರುವ ಬಗ್ಗೆ ಅನುಮಾನ ಇದೆ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿ ಕೆ ಸುರೇಶ್ ಅವರು ಲೋಕಾಯಕ್ತ ದೂರು ನೀಡಿದ್ದರು.

Exit mobile version