Site icon Vistara News

Election 2023 | ಜಿ.ಟಿ. ದೇವೇಗೌಡ ನಡೆ, ಮೀನಿನ ಹೆಜ್ಜೆಯ ಕಂಡುಹಿಡಿಯಲಾಗೋಲ್ಲ: ಎಸ್‌.ಟಿ. ಸೋಮಶೇಖರ್

ಡಿಸಿಸಿ ಬ್ಯಾಂಕ್‌

ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡರ ನಡೆ ಹಾಗೂ ಮೀನಿನ ಹೆಜ್ಜೆ ಎರಡನ್ನೂ ಕಂಡು ಹಿಡಿಯೋಕೆ ಆಗುವುದಿಲ್ಲವೆಂದು ನಾನು ಮೊದಲೇ ಹೇಳಿದ್ದೆ. ಅವರು ಜೆಡಿಎಸ್‌ನಲ್ಲೇ ಉಳಿದಿರುವುದರಲ್ಲಿ ವಿಶೇಷತೆ ಏನೂ ಇಲ್ಲ. ಬಿಜೆಪಿಗೆ ಎಲ್ಲ ಕ್ಷೇತ್ರಗಳಲ್ಲಿಯೂ (Election 2023) ಸೂಕ್ತ ಅಭ್ಯರ್ಥಿ ಇದ್ದಾರೆ ಎಂದು ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.

ಜಿ.ಟಿ. ದೇವೇಗೌಡರನ್ನು ಬಿಜೆಪಿಯವರು ಅವರನ್ನು ಕರೆದಿರಲಿಲ್ಲ. ಕಾಂಗ್ರೆಸ್‌ನವರ ಬಗ್ಗೆ ನನಗೆ ಗೊತ್ತಿಲ್ಲ. ಆದರೆ, ನಾನಂತೂ ಅವರನ್ನು ಸಂಪರ್ಕ ಮಾಡಿಲ್ಲ. ಪಕ್ಷಕ್ಕೆ ಬನ್ನಿ ಎಂದು ಆಹ್ವಾನ ನೀಡಿಲ್ಲ. ಉಸ್ತುವಾರಿ ಸಚಿವನಾಗಿ ಎಲ್ಲ ಶಾಸಕರ ಜತೆ ನಾನು ಆತ್ಮೀಯವಾಗಿಯೇ ಇದ್ದೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಸಚಿವ ಸೋಮಶೇಖರ್‌ ಉತ್ತರಿಸಿದರು.

ಜೆಡಿಎಸ್ ಶಾಸಕನಾಗಿ ಜಿ.ಟಿ. ದೇವೇಗೌಡ ಅವರು ಜೆಡಿಎಸ್‌ನಲ್ಲಿಯೇ ಉಳಿದಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾತ್ರವಲ್ಲ, ರಾಜ್ಯದ 224 ಕ್ಷೇತ್ರದಲ್ಲೂ ನಮಗೆ ಸಮರ್ಥ ಅಭ್ಯರ್ಥಿಗಳು ಇದ್ದಾರೆ. ಮುಂದಿನ ಬಾರಿ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ, ಸರ್ಕಾರ ರಚಿಸಲಿದೆ ಎಂದು ಎಸ್.ಟಿ. ಸೋಮಶೇಖರ್ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ | ಜಿ.ಟಿ. ದೇವೇಗೌಡ ಮನೆ ಬಾಗಿಲಿಗೆ ಎಚ್‌.ಡಿ. ದೇವೇಗೌಡ; ಕಾಲಿಗೆ ಬಿದ್ದು ಕಣ್ಣೀರಿಟ್ಟ ಜಿಟಿಡಿ, ಮುಗಿದ ಮುನಿಸು

Exit mobile version