ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನ ವಡೂರು ಗ್ರಾಮದ ಬಳಿ ಕಾಡಾನೆ ದಾಳಿಗೆ (Elephant attack) ಮಹಿಳೆಯೊಬ್ಬರು ಮೃತಪಟ್ಟಿದ್ದರು. ಮಹಿಳೆ ಕೊಂದಿದ್ದ ಒಂಟಿ ಸಲಗವು ಮತ್ತೆ ಅದೇ ಮನೆ ಬಳಿಯೇ ಪ್ರತ್ಯಕ್ಷವಾಗಿದೆ. ಕಳೆದ ಆಗಸ್ಟ್ 18ರಂದು ಕವಿತಾ ಎಂಬಾಕೆಯನ್ನು ಕಾಡಾನೆ ತುಳಿದು ಸಾಯಿಸಿತ್ತು.
ಸದ್ಯ ಗ್ರಾಮದಲ್ಲೆ ಬೀಡು ಬಿಟ್ಟಿರುವ ಆನೆ ಮನೆಗಳ ಸುತ್ತಮುತ್ತ ಓಡಾಡುತ್ತಿದೆ. ಹೀಗಾಗಿ ಆತಂಕ ಸೃಷ್ಟಿಸಿರುವ ಕಾಡಾನೆ ಸೆರೆಗೆ ಜನರು ಒತ್ತಾಯಿಸಿದ್ದಾರೆ. ನಾಟಿ ಮಾಡಿದ್ದ ಭತ್ತದ ಗದ್ದೆ ಹಾನಿ ಮಾಡಿ, ಭತ್ತದ ಪೈರನ್ನು ತಿಂದು ಹಾಕಿದೆ. ಶಿವಣ್ಣ ಎಂಬುವವರ ಭತ್ತದ ಗದ್ದೆ ಹಾನಿ ಮಾಡಿದೆ. ಕಾಡಾನೆಗಳ ಉಪಟಳದಿಂದ ಜನರಿಗೆ ದಿಕ್ಕು ತೋಚದಂತಾಗಿದೆ.
ಆನೆ ಬಂತ್ತೊಂದು ಆನೆ
ರಾಮನಗರದ ಚನ್ನಪಟ್ಟಣ ನಗರ ಸಮೀಪ ಕಾಡಾನೆಗಳು ಪ್ರತ್ಯಕ್ಷವಾಗಿವೆ. ಅಪ್ಪಗೆರೆ ಗ್ರಾಮದ ಬಳಿ ಕಾಡಾನೆ ಹಿಂಡು ಕಾಣಿಸಿಕೊಂಡಿದ್ದು ತಿಳಿದಾಕ್ಷಣ ಕಾಡಾನೆ ನೋಡಲು ಜನರು ಮುಗಿಬಿದ್ದರು. ಚನ್ನಪಟ್ಟಣ ನಗರದಿಂದ ಕೇವಲ 1 ಕಿ.ಮೀ ದೂರದಲ್ಲಿ ಕಾಡಾನೆಗಳು ಪ್ರತ್ಯಕ್ಷವಾಗಿವೆ. ತೆಂಗಿನ ಕಲ್ಲಿ ಅರಣ್ಯ ಪ್ರದೇಶದಿಂದ ನಗರದತ್ತ ಗಜಪಡೆ ಬಂದಿಚೆ. ನಗರ ಸಮೀಪ 6 ಕಾಡಾನೆಗಳು ಆಗಮಿಸಿದರೆ, ಅಪ್ಪಗೆರೆ ಕೆರೆಯಲ್ಲಿ ಉಳಿದ ಕಾಡಾನೆಗಳು ಬೀಡು ಬಿಟ್ಟಿವೆ.
ಚಿರತೆ ದಾಳಿಗೆ ಹಸು ಬಲಿ
ಚಿರತೆ ದಾಳಿ ಮುಂದುವರಿದಿದ್ದು, ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುವಿನ ಮೇಲೆ ದಾಳಿ ಮಾಡಿದೆ. ಚಿರತೆಯಿಂದ ತಪ್ಪಿಸಿಕೊಳ್ಳಲು ಆಗದೆ ಚಿರತೆ ಜೀವ ಬಿಟ್ಟಿರುವ ಘಟನೆ ಮಂಡ್ಯ ಜಿಲ್ಲೆ ಕೆಆರ್‌ಪೇಟೆ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ. ರೈತ ಪುಟ್ಟರಾಜು ಎಂಬುವವರಿಗೆ ಸೇರಿದ ಹಸು ಮೃತಪಟ್ಟಿದೆ. ಚಿರತೆ ದಾಳಿಯಿಂದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದ್ದು, ಕೂಡಲೇ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆ ಅಧಿಕಾರಿಗಳಲೂ ಮನವಿ ಮಾಡಿದ್ದಾರೆ.
ದನದ ಕೊಟ್ಟಿಗೆಯಲ್ಲಿ ಎತ್ತುಗಳು ಸಜೀವ ದಹನ
ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ತಂಬೂರು ಗ್ರಾಮದಲ್ಲಿ ಅಗ್ನಿ ಅವಘಡದಲ್ಲಿ (Fire Accident) ಎರಡು ಎತ್ತುಗಳು ಸಜೀವ ದಹನವಾಗಿವೆ. ತಂಬೂರು ಗ್ರಾಮದ ರೈತ ಯಲ್ಲಪ್ಪ ಹುಡೇದ ಎಂಬುವವರಿಗೆ ಸೇರಿದ ಎತ್ತುಗಳಾಗಿವೆ. ಹೊಲದಲ್ಲಿನ ದನದ ಕೊಟ್ಟಿಗೆಗೆ ಬೆಂಕಿ ತಗುಲಿ ಈ ಅವಘಡ ಸಂಭವಿಸಿದೆ.
ಸೊಳ್ಳೆ ಕಾಟವೆಂದು ರಾತ್ರಿ ಹಾಕಿದ್ದ ಹೊಗೆಯಿಂದಾಗಿ ಬೆಂಕಿ ಹತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ದನದ ಕೊಟ್ಟಿಗೆ ಕ್ಷಣಾರ್ಧದಲ್ಲೇ ಹೊತ್ತಿ ಉರಿದ ಕಾರಣಕ್ಕೆ ಎರಡು ಎತ್ತುಗಳು ಸಜೀವ ದಹನವಾಗಿದೆ. ಕಲಘಟಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ