ರಾಮನಗರ: ರಾಮನಗರ ಭಾಗದಲ್ಲಿ ಆನೆಗಳ ದಾಳಿ ವಿಪರೀತವಾಗಿದೆ. ಇಲ್ಲಿನ ಹೊಲಗಳಿಗೆ ಆನೆಗಳು ಆಗಾಗ ಬಂದು ಬೆಳೆ ಹಾನಿ ಮಾಡುವುದು ಸಾಮಾನ್ಯವಾಗಿದೆ. ಹೀಗೆ ಬೆಳೆ ತಿನ್ನಲು ಬಂದ ಕಾಡಾನೆಯೊಂದು ಈಗ ಬಾವಿಗೆ ಬಿದ್ದು (Elephant trapped) ಒದ್ದಾಡುತ್ತಿದೆ.
ಚನ್ನಪಟ್ಟಣ ತಾಲೂಕಿನ ಅಮ್ಮಳ್ಳಿದೊಡ್ಡಿ ಗ್ರಾಮದಲ್ಲಿ ಆಹಾರ ಅರಸಿ ಬಂದಿದ್ದ ಕಾಡಾನೆ ಬಾವಿಯಲ್ಲಿ ಸಿಲುಕಿ ಒದ್ದಾಡುತ್ತಿರುವ ವಿಡಿಯೊ ವೈರಲ್ ಆಗಿದೆ. ಗ್ರಾಮದ ತಮ್ಮಯ್ಯ ಎಂಬುವವರ ಬಾವಿಯಲ್ಲಿ ಸಿಲುಕಿರುವ ಒಂಟಿ ಸಲಗ ಮೇಲೆ ಬರಲಾಗದೆ ಸಂಕಷ್ಟಪಡುತ್ತಿದೆ.
ಪಕ್ಕದ ತೆಂಗಿನಕಲ್ಲು ಅರಣ್ಯ ಪ್ರದೇಶದಿಂದ ರೈತರ ಜಮೀನಿಗೆ ಲಗ್ಗೆ ಇಟ್ಟಿದ್ದ ಆನೆ. ಡರಾತ್ರಿ ಬೆಳೆ ತಿನ್ನುವಾಗ ಆಯತಪ್ಪಿ ಬಾವಿಗೆ ಬಿದ್ದಿದೆ ಎನ್ನಲಾಗಿದೆ. ಬೆಳಗ್ಗೆ ಜಮೀನಿಗೆ ಬಂದ ರೈತರು ಬಾವಿಯಲ್ಲಿ ಆನೆ ನೋಡಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಇನ್ನು ಅರಣ್ಯ ಇಲಾಖೆ ಸಿಬ್ಬಂದಿ ಇದನ್ನು ಮೇಲೆತ್ತಬೇಕಾಗಿದೆ. ಹೊಲದಲ್ಲಿ ನೂರಾರು ಮಂದಿ ನೆರೆದಿದ್ದಾರೆ.
ಇದನ್ನೂ ಓದಿ | Elephant attack | ಹಾಸನದಲ್ಲಿ ಆನೆ ದಾಳಿ: ದೇವರ ದರ್ಶನ ಮಾಡಿ ಬರುತ್ತಿದ್ದ ಯುವಕ ದಾರುಣ ಮೃತ್ಯು