ಬೆಂಗಳೂರು: ರಾಜಕಾಲುವೆ ಒತ್ತುವರಿ ಮಾಡಿ ಕಟ್ಟಿದ ಕಟ್ಟಡ, ಮನೆ, ಬಂಗಲೆಗಳನ್ನು ಒಡೆದು ಹಾಕುವ ನಿಟ್ಟಿನಲ್ಲಿ ಆರಂಭಿಸಿರುವ ಬುಲ್ಡೋಜರ್ ಕಾರ್ಯಾಚರಣೆ ಮೂರು ದಿನಗಳ ಬ್ರೇಕ್‌ನ ನಂತರ ಸೋಮವಾರ ಮತ್ತೆ ಶುರುವಾಗಲಿದೆ. ಈ ಬಾರಿಯೂ ಬಡವರ ಮನೆಗಳನ್ನು ಮಾತ್ರ ಒಡೀತಾರಾ ಅಥವಾ ಬಂಗಲೆಗಳು ಕೂಡಾ ಉರುಳುತ್ತವಾ ಎಂದು ಕಾದು ನೋಡಬೇಕು.
ಎಲ್ಲರ ಕಣ್ಣು ರೈನ್ ಬೋ ವಿಲ್ಲಾಗಳ ಮೇಲೆ
ರಾಜಕಾಲುವೆ ಒತ್ತುವರಿ ಮಾಡಿ ಕಟ್ಟಿದ ರೈನ್ ಬೋ ಲೇಔಟ್‌ನ ೧೩ ಮನೆಗಳಿಗೆ ಕಳೆದ ಸೆ.೧೨ರಂದು ನೋಟಿಸ್ ನೀಡಲಾಗಿತ್ತು. ಒಂದು ವಾರದ ಒಳಗೆ ತೆರವಿಗೆ ಬೆಂಗಳೂರು ಪೂರ್ವ ವಲಯದ ತಹಸೀಲ್ದಾರ್ ಸೂಚನೆ ನೀಡಿದ್ದರು. ಆ ಗಡುವು ಸೋಮವಾರಕ್ಕೆ ಮುಕ್ತಾಯವಾಗಿದೆ. ಹಾಗಿದ್ದರೆ ಈ ವಿಲ್ಲಾಗಳನ್ನು ಏನು ಮಾಡುತ್ತಾರೆ ಎನ್ನುವ ಕುತೂಹಲ ಜೋರಾಗಿದೆ. ಈ ಬಾರಿ ಅತಿ ಹೆಚ್ಚು ಸಮಸ್ಯೆ ಅನುಭವಿಸಿದ ಪ್ರದೇಶಗಳಲ್ಲಿ ರೈನ್ ಬೋ ಲೇಔಟ್ ಕೂಡಾ ಒಂದು. ಆಗ ಅಧಿಕಾರಿಗಳು ಈ ನಿರ್ಮಾಣಗಳೇ ಅಕ್ರಮ ಎಂದು ಹೇಳಿದ್ದರು. ಮತ್ತು ತೆರವುಗೊಳಿಸಿ ಎಂದು ನೋಟಿಸ್ ನೀಡಿದ್ದರು.
ನೋಟಿಸ್‌ನಲ್ಲಿ ಏನಿತ್ತು?
ರಾಜಕಾಲುವೆ ಒತ್ತುವರಿ ಮಾಡಿ ಕಟ್ಟಿದ್ದ ದೊಡ್ಡ ಬಂಗಲೆಗಳಿಗೆ ನೋಟಿಸ್ ನೀಡಲಾಗಿದ್ದು, ಒತ್ತುವರಿ ಜಾಗ ತೆರವುಗೊಳಿಸುವಂತೆ ಸೂಚಿಸಲಾಗಿತ್ತು. ಒಂದು ವೇಳೆ ತೆರವು ಮಾಡದಿದ್ದರೆ ನಾವೇ ತೆರವು ಮಾಡುತ್ತೇವೆ. ಆದರೆ, ತೆರವು ಕಾರ್ಯಾಚರಣೆಯ ವೆಚ್ಚವನ್ನು ನೀವೇ ಭರಿಸಬೇಕು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ಪೂರ್ಣ ಮನೆ ಅಲ್ಲದಿದ್ದರೂ ಮನೆಗಳ ಹೆಚ್ಚಿನ ಭಾಗ ಒತ್ತುವರಿ ಆಗಿರುವ ಹಲವು ಪ್ರಕರಣಗಳಿವೆ.
ಬಡವರ ಮನೆಗಳ ಮೇಲೆ ಸವಾರಿ
ವಿಧಾನ ಮಂಡಲ ಅಧಿವೇಶನ ನಡೆಯುತ್ತಿರುವುದರಿಂದ ಒತ್ತುವರಿ ತೆರವಿನ ಕಾರ್ಯಾಚರಣೆ ನಡೆಯುತ್ತಿದೆ. ಆದರೆ, ಇದೆಲ್ಲವೂ ನಾಟಕ. ಕೇವಲ ಹೆಸರಿಗಷ್ಟೇ ಒತ್ತುವರಿ ತೆರವು ನಡೆಯುತ್ತಿದೆ. ಅದರಲ್ಲೂ ಬಡವರ ಮನೆಗಳು, ಕೇವಲ ಕಾಂಪೌಂಡ್‌ಗಳನ್ನು ಮಾತ್ರ ತೆಗೆಯಲಾಗುತ್ತಿದೆ ಎಂಬ ಆರೋಪವಿದೆ.
ಇವತ್ತು ಎಲ್ಲೆಲ್ಲಿ ಬಿಬಿಎಂಪಿಯಿಂದ ತೆರವು ಕಾರ್ಯಾಚರಣೆ?
ಕಸವನಹಳ್ಳಿಯಲ್ಲಿ ವಿಪ್ರೋ ಹಾಗೂ ಸಲಾರ್ಪುರಿಯಾ ಮಾಡಿರುವ ಒತ್ತುವರಿ
ಮಹಾದೇವಪುರದ ಸಾಖ್ರಾ ಆಸ್ಪತ್ರೆ ಮುಖ್ಯ ರಸ್ತೆಯಲ್ಲಿರುವ ಸ್ಟೆರ್ಲಿಂಗ್ ಹಿಂಭಾಗ
ಮಹಾದೇವಪುರದ ಪೂರ್ವ ಪಾರ್ಕ್ ರಿಡ್ಜ್ ಹಿಂಭಾಗದಲ್ಲಿ ಒತ್ತುವರಿ ತೆರವು
ಕಾಡುಗೋಡಿ ವಿಜಯಲಕ್ಷ್ಮಿ ಕಾಲೋನಿ ವಾರ್ಡ್ 83 ರಲ್ಲಿ ರಾಜಕಾಲುವೆ ಒತ್ತುವರಿ ತೆರವು
ಇದನ್ನೂ ಓದಿ | Lake encroachment | ಹೇಳುವುದು ಒಂದು ಮಾಡುವುದು ಇನ್ನೊಂದು; ಸರ್ಕಾರಿ ಸಂಸ್ಥೆಗಳಿಂದಲೇ ಕೆರೆ ಒತ್ತುʼವರಿʼ