ಬೆಂಗಳೂರು: ಕೇಂದ್ರ ಸರ್ಕಾರ 2020ರಲ್ಲಿ ಜಾರಿಗೆ ತಂದು, ನಂತರ ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಹಿಂಪಡೆದಿದ್ದ ಮೂರು ಕೃಷಿ ಕಾಯ್ದೆಗಳನ್ನು ಕರ್ನಾಟಕದಲ್ಲಿಯೂ ಹಿಂಪಡೆಯಲು ಕಾಂಗ್ರೆಸ್ ಸರ್ಕಾರ ನಿರ್ಧರಿಸಿದೆ. ಈ ಕುರಿತು ಎಪಿಎಂಸಿ ಸಚಿವ ಶಿವಾನಂದ ಪಾಟೀಲ್ ಅಧ್ಯಕ್ಷತೆಯಲ್ಲಿ, ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ. ಪಾಟೀಲ್ ಅವರನ್ನೂ ಒಳಗೊಂಡು ಸಭೆ ನಡೆಯಿತು.
ವಿಧಾನಸೌಧದಲ್ಲಿ ನಡೆದ ಸಭೆಯ ನಂತರ ಇಬ್ಬರೂ ಸಚಿವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ದೇಶಗಳಲ್ಲಿ ರೈತರ ಕಲ್ಯಾಣವನ್ನು ಬದಿಗೊತ್ತಿ ಕೃಷಿ ಮಾರುಕಟ್ಟೆಗಳಿಗೆ ಶಕ್ತಿಯನ್ನು ತೆಗೆದುಹಾಕುವ ಎಪಿಎಂಸಿ ಕಾನೂನು ಸಡಿಲಗೊಳಿಸಬೇಕಿತ್ತು. ಸಂಸದೀಯ ವ್ಯವಹಾರಗಳ ಇಲಾಖೆ, ಕಾನೂನು ಇಲಾಖೆ ಹಾಗೂ ಕೃಷಿ ಇಲಾಖೆ ಸಭೆ ಮಾಡಿದ್ದೇವೆ. ದೇಶದ ಹಿತಾಸಕ್ತಿ ಬದಿಗೊತ್ತಿ ಕೆಲವು ಕಾನೂನು ಜಾರಿ ತರಲಾಗಿತ್ತು. ಅದನ್ನು ತೆಗೆದು ಹಾಕುವ ಸಲುವಾಗಿ ಹೋರಾಟಗಳು ನಡೆದಿದ್ದವು. ಈ ಬಿಲ್ ಜಾರಿ ಆಗಿದ್ದರಿಂದ ರೈತರ ಆದಾಯ ದುಪ್ಪಟ್ಟು ಆಗುವುದು ಒಂದೆಡೆ ಇರಲಿ, ಇದರಿಂದ ಮಧ್ಯವರ್ತಿಗಳಿಗೇ ಲಾಭ ಆಗಿತ್ತು.
ಕೊನೆಗೆ ಕೇಂದ್ರದಲ್ಲಿ ಈ ಕಾಯ್ದೆ ವಾಪಸ್ ಪಡೆಯಲಾಗಿತ್ತು. ರಾಜ್ಯದಲ್ಲಿ ಮಾತ್ರ ಇದನ್ನು ವಾಪಸ್ ಪಡೆದಿರಲಿಲ್ಲ. ಸಿಎಂ ಸಿದ್ದರಾಮಯ್ಯ ಅವರು ರೈತರ ಹಿತಕ್ಕಾಗಿ ಇದನ್ನು ವಾಪಸ್ ಪಡೆಯಲು ಸೂಚನೆ ನೀಡಿದ್ದರು. ನಾವು ಇದರ ಬಗ್ಗೆ ಐಪಚಾರಿಕತೆ ಫೂರ್ತಿ ಮಾಡಿದ್ದೇವೆ. ಕೆಲವು ವಿಚಾರಗಳಿಗೆ ತಜ್ಞರ ಸಲಹೆ ಪಡೆಯಬೇಕಿದೆ
ಜುಲೈ 3 ರಿಂದ ಆರಂಭ ಆಗುವ ಸದನದಲ್ಲಿ ಈ ಬಗ್ಗೆ ಬಿಲ್ ಮಂಡಿಸಲಿದ್ದೇವೆ ಮತ್ತಷ್ಟು ಸುಧಾರಿತ ರೂಪದಲ್ಲಿ ಈ ಬಿಲ್ ಬರಲಿದೆ. ಈ ಬಿಲ್ ವಾಪಸ್ ರೈತರನ್ನು ಶಕ್ತರಾಗಿ ಮಾಡಬಹುದು. ವ್ಯಾಪಾರದಲ್ಲಿ ಈ ಎಲೆಕ್ಟ್ರಾನಿಕ್ ತೂಕದಲ್ಲಿ ಗೊಂದಲ ಮಾತು ಇರಲ್ಲ ಎಂದರು.
ಎಪಿಎಂಸಿ ದಲ್ಲಾಳಿಗಳ ದರ್ಬಾರ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರನ್ನು ಕಂಟ್ರೋಲ್‌ಗೆ ತರುವ ಸಲುವಾಗಿ ಬಿಲ್ ಮಂಡನೆ ಮಾಡಲಾಗುತ್ತಿದೆ. ಹೊರಗಡೆ ವ್ಯಾಪಾರ ಮಾಡಿದ್ರೂ ರೈತರಿಗೆ ಅದೇ ಬೆಲೆ ಸಿಗಲಿದೆ, ಅದೇ ರೀತಿಯಲ್ಲಿ ಒಳಗಡೆ ವ್ಯಾಪಾರ ಮಾಡಿದ್ರು ಅದೇ ಬಿಲ್ ಸಿಗಲಿದೆ ಎಂಂದರು.
ರೈತರಿಗೆ ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗಲ್ಲ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಶಿವಾನಂದ ಪಾಟೀಲ್, ಇದು ಹಿಂದಿನ ಸರ್ಕಾರದಲ್ಲಿ ಆಗಿರುವ ಸಮಸ್ಯೆ. ನಮ್ಮ ಸರ್ಕಾರದಲ್ಲಿ ಅದರೆ ಇನ್ಮುಂದೆ ನಮಗೆ ಹೇಳಿ. ಈಗಾಗಲೇ ಬಿಲ್ ಅಂತಿಮ ರೂಪಕ್ಕೆ ಬಂದಿದೆ, ಮುಂದಿನ ದಿನಗಳಲ್ಲಿ ಸದನದ ಮುಂದೆ ಇಡುತ್ತೇವೆ ಎಂದರು.
ಇದನ್ನೂ ಓದಿ: Farmers Protest: ಲೋಕಸಭೆ ಚುನಾವಣೆ ಹೊತ್ತಲ್ಲೇ ದೆಹಲಿ ಸಮೀಪ ಮತ್ತೆ ಶುರು ರೈತರ ಪ್ರತಿಭಟನೆ, ಸರ್ಕಾರಕ್ಕೆ ತಲೆಬೇನೆ