farm bills will be repealed in karnataka says ministersFarm Bills: ಮೋದಿ ಸರ್ಕಾರದ 3 ಕೃಷಿ ಕಾಯ್ದೆ ವಾಪಸ್‌: ಇವುಗಳಿಂದ ದಲ್ಲಾಳಿಗಳಿಗೇ ಲಾಭ ಎಂದ ರಾಜ್ಯ ಸರ್ಕಾರ - Vistara News

ಕರ್ನಾಟಕ

Farm Bills: ಮೋದಿ ಸರ್ಕಾರದ 3 ಕೃಷಿ ಕಾಯ್ದೆ ವಾಪಸ್‌: ಇವುಗಳಿಂದ ದಲ್ಲಾಳಿಗಳಿಗೇ ಲಾಭ ಎಂದ ರಾಜ್ಯ ಸರ್ಕಾರ

ಜುಲೈ 3 ರಿಂದ ಆರಂಭ ಆಗುವ ಸದನದಲ್ಲಿ ಈ ಬಗ್ಗೆ ಬಿಲ್ ಮಂಡಿಸಲಿದ್ದೇವೆ ಮತ್ತಷ್ಟು ಸುಧಾರಿತ ರೂಪದಲ್ಲಿ ಈ ಬಿಲ್ ಬರಲಿದೆ ಎಂದು ಸಚಿವರಾದ ಎಚ್‌.ಕೆ. ಪಾಟೀಲ್‌ ಹಾಗೂ ಶಿವಾನಂದ ಪಾಟೀಲ್‌ ಹೇಳಿದ್ದಾರೆ.

VISTARANEWS.COM


on

HK Patil and Shivananda Patil
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಕೇಂದ್ರ ಸರ್ಕಾರ 2020ರಲ್ಲಿ ಜಾರಿಗೆ ತಂದು, ನಂತರ ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಹಿಂಪಡೆದಿದ್ದ ಮೂರು ಕೃಷಿ ಕಾಯ್ದೆಗಳನ್ನು ಕರ್ನಾಟಕದಲ್ಲಿಯೂ ಹಿಂಪಡೆಯಲು ಕಾಂಗ್ರೆಸ್‌ ಸರ್ಕಾರ ನಿರ್ಧರಿಸಿದೆ. ಈ ಕುರಿತು ಎಪಿಎಂಸಿ ಸಚಿವ ಶಿವಾನಂದ ಪಾಟೀಲ್‌ ಅಧ್ಯಕ್ಷತೆಯಲ್ಲಿ, ಕಾನೂನು ಮತ್ತು ಸಂಸದೀಯ ಸಚಿವ ಎಚ್‌.ಕೆ. ಪಾಟೀಲ್‌ ಅವರನ್ನೂ ಒಳಗೊಂಡು ಸಭೆ ನಡೆಯಿತು.

ವಿಧಾನಸೌಧದಲ್ಲಿ ನಡೆದ ಸಭೆಯ ನಂತರ ಇಬ್ಬರೂ ಸಚಿವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ದೇಶಗಳಲ್ಲಿ ರೈತರ ಕಲ್ಯಾಣವನ್ನು ಬದಿಗೊತ್ತಿ ಕೃಷಿ ಮಾರುಕಟ್ಟೆಗಳಿಗೆ ಶಕ್ತಿಯನ್ನು ತೆಗೆದುಹಾಕುವ ಎಪಿಎಂಸಿ ಕಾನೂನು ಸಡಿಲಗೊಳಿಸಬೇಕಿತ್ತು. ಸಂಸದೀಯ ವ್ಯವಹಾರಗಳ ಇಲಾಖೆ, ಕಾನೂನು ಇಲಾಖೆ ಹಾಗೂ ಕೃಷಿ ಇಲಾಖೆ ಸಭೆ ಮಾಡಿದ್ದೇವೆ. ದೇಶದ ಹಿತಾಸಕ್ತಿ ಬದಿಗೊತ್ತಿ ಕೆಲವು ಕಾನೂನು ಜಾರಿ ತರಲಾಗಿತ್ತು. ಅದನ್ನು ತೆಗೆದು ಹಾಕುವ ಸಲುವಾಗಿ ಹೋರಾಟಗಳು ನಡೆದಿದ್ದವು. ಈ ಬಿಲ್‌ ಜಾರಿ ಆಗಿದ್ದರಿಂದ ರೈತರ ಆದಾಯ ದುಪ್ಪಟ್ಟು ಆಗುವುದು ಒಂದೆಡೆ ಇರಲಿ, ಇದರಿಂದ ಮಧ್ಯವರ್ತಿಗಳಿಗೇ ಲಾಭ ಆಗಿತ್ತು.

ಕೊನೆಗೆ ಕೇಂದ್ರದಲ್ಲಿ ಈ ಕಾಯ್ದೆ ವಾಪಸ್ ಪಡೆಯಲಾಗಿತ್ತು. ರಾಜ್ಯದಲ್ಲಿ ಮಾತ್ರ ಇದನ್ನು ವಾಪಸ್ ಪಡೆದಿರಲಿಲ್ಲ. ಸಿಎಂ ಸಿದ್ದರಾಮಯ್ಯ ಅವರು ರೈತರ ಹಿತಕ್ಕಾಗಿ ಇದನ್ನು ವಾಪಸ್ ಪಡೆಯಲು ಸೂಚನೆ ನೀಡಿದ್ದರು. ನಾವು ಇದರ ಬಗ್ಗೆ ಐಪಚಾರಿಕತೆ ಫೂರ್ತಿ ಮಾಡಿದ್ದೇವೆ. ಕೆಲವು ವಿಚಾರಗಳಿಗೆ ತಜ್ಞರ ಸಲಹೆ ಪಡೆಯಬೇಕಿದೆ

ಜುಲೈ 3 ರಿಂದ ಆರಂಭ ಆಗುವ ಸದನದಲ್ಲಿ ಈ ಬಗ್ಗೆ ಬಿಲ್ ಮಂಡಿಸಲಿದ್ದೇವೆ ಮತ್ತಷ್ಟು ಸುಧಾರಿತ ರೂಪದಲ್ಲಿ ಈ ಬಿಲ್ ಬರಲಿದೆ. ಈ ಬಿಲ್ ವಾಪಸ್ ರೈತರನ್ನು ಶಕ್ತರಾಗಿ ಮಾಡಬಹುದು. ವ್ಯಾಪಾರದಲ್ಲಿ ಈ ಎಲೆಕ್ಟ್ರಾನಿಕ್ ತೂಕದಲ್ಲಿ ಗೊಂದಲ ಮಾತು ಇರಲ್ಲ ಎಂದರು.

ಎಪಿಎಂಸಿ ದಲ್ಲಾಳಿಗಳ ದರ್ಬಾರ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರನ್ನು ಕಂಟ್ರೋಲ್‌ಗೆ ತರುವ ಸಲುವಾಗಿ ಬಿಲ್ ಮಂಡನೆ ಮಾಡಲಾಗುತ್ತಿದೆ. ಹೊರಗಡೆ ವ್ಯಾಪಾರ ಮಾಡಿದ್ರೂ ರೈತರಿಗೆ ಅದೇ ಬೆಲೆ ಸಿಗಲಿದೆ, ಅದೇ ರೀತಿಯಲ್ಲಿ ಒಳಗಡೆ ವ್ಯಾಪಾರ ಮಾಡಿದ್ರು ಅದೇ ಬಿಲ್ ಸಿಗಲಿದೆ ಎಂಂದರು.

ರೈತರಿಗೆ ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗಲ್ಲ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಶಿವಾನಂದ ಪಾಟೀಲ್‌, ಇದು ಹಿಂದಿನ ಸರ್ಕಾರದಲ್ಲಿ ಆಗಿರುವ ಸಮಸ್ಯೆ. ನಮ್ಮ ಸರ್ಕಾರದಲ್ಲಿ ಅದರೆ ಇನ್ಮುಂದೆ ನಮಗೆ ಹೇಳಿ. ಈಗಾಗಲೇ ಬಿಲ್ ಅಂತಿಮ ರೂಪಕ್ಕೆ ಬಂದಿದೆ, ಮುಂದಿನ ದಿನಗಳಲ್ಲಿ ಸದನದ ಮುಂದೆ ಇಡುತ್ತೇವೆ ಎಂದರು.

ಇದನ್ನೂ ಓದಿ: Farmers Protest: ಲೋಕಸಭೆ ಚುನಾವಣೆ ಹೊತ್ತಲ್ಲೇ ದೆಹಲಿ ಸಮೀಪ ಮತ್ತೆ ಶುರು ರೈತರ ಪ್ರತಿಭಟನೆ, ಸರ್ಕಾರಕ್ಕೆ ತಲೆಬೇನೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

NEET UG 2024: ವಿದ್ಯಾರ್ಥಿಗಳಿಗೆ ಅನ್ಯಾಯ; ನೀಟ್ ಮರು ಪರೀಕ್ಷೆ, ತನಿಖೆಗೆ ಸಿಎಂ ಆಗ್ರಹ

NEET UG 2024: ಕೃಪಾಂಕ ಕೊಟ್ಟು ಉತ್ತೀರ್ಣ ಮಾಡುವುದು ಕೆಟ್ಟ ಅಭ್ಯಾಸ. ಎನ್‌ಟಿಎ ಪರೀಕ್ಷೆಯನ್ನು ಸರಿಯಾಗಿ ನಡೆಸದೇ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅಸಮಾಧಾನ ಹೊರಹಾಕಿದ್ದಾರೆ.

VISTARANEWS.COM


on

NEET UG 2024
Koo

ಮೈಸೂರು: ನೀಟ್ ಪರೀಕ್ಷೆಯಲ್ಲಿ ರ‍್ಯಾಂಕ್ ನೀಡುವುದರಲ್ಲಿ ಹಾಗೂ ನಿರಂತರ ಅಭ್ಯಾಸ ಮಾಡಿ ಬರೆದ ವಿದ್ಯಾರ್ಥಿಗಳಿಗೆ ದೊಡ್ಡ ಅನ್ಯಾಯವಾಗಿದೆ. ಈ ಬಗ್ಗೆ ತನಿಖೆಯಾಗಬೇಕು ಹಾಗೂ ಮರು ಪರೀಕ್ಷೆ (NEET UG 2024) ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೃಪಾಂಕ ಕೊಟ್ಟು ಉತ್ತೀರ್ಣ ಮಾಡುವುದು ಕೆಟ್ಟ ಅಭ್ಯಾಸ. ಎನ್‌ಟಿಎ ಪರೀಕ್ಷೆಯನ್ನು ಸರಿಯಾಗಿ ನಡೆಸದೇ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂದು ತಿಳಿಸಿದರು.

ಬರ ಪರಿಹಾರದ ಬಗ್ಗೆ ಪ್ರತಿಕ್ರಿಯಿಸಿ, ಬರ ಪರಿಹಾರದ ಬಾಕಿ ಮೊತ್ತವನ್ನು ರೈತರಿಗೆ ವಿತರಿಸಲಾಗುತ್ತಿದೆ ಎಂದು ಉತ್ತರಿಸಿದರು.

ದಕ್ಷಿಣ ಭಾರತದಲ್ಲಿ ಜನ ಬಿಜೆಪಿಯನ್ನು ಬೆಂಬಲಿಸುವುದಿಲ್ಲ

ದಕ್ಷಿಣ ಭಾರತದ ಏಳು ಜನರು ಕೇಂದ್ರದಲ್ಲಿ ಸಚಿವರಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಏನು ಮಾಡಿದರೂ ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಜನ ಬೆಂಬಲಿಸುವುದಿಲ್ಲ. ಏಕೆಂದರೆ ಬಿಜೆಪಿಯು ಆರ್‌ಎಸ್‌ಎಸ್‌ನ ರಾಜಕೀಯ ಮುಖವಾಡ. ಹಾಗಾಗಿ ಉತ್ತರ ಭಾರತದಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. ಆರ್‌ಎಸ್‌ಎಸ್‌ನ ಮುಖ್ಯಸ್ಥರು ಅಹಂಕಾರಕ್ಕೆ ಜನ ಸರಿಯಾದ ಪಾಠ ಕಲಿಸಿದ್ದಾರೆ ಎಂದು ಹೇಳಿದ್ದಾರೆ ಎಂದರು.

ಅರುಂಧತಿ ರಾಯ್ ವಿರುದ್ಧ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿ, ಬಿಜೆಪಿಯದ್ದು ದ್ವೇಷದ ರಾಜಕಾರಣ. ಹೆದರಿಸುವುದು ಬೆದರಿಸುವುದು, ಇಡಿ, ಸಿಬಿಐ ಬಳಕೆ ಮಾಡುವುದನ್ನು ಮೊದಲಿನಿಂದಲೂ ಮಾಡಿಕೊಂಡು ಬರುತ್ತಿದ್ದಾರೆ. ಅದಕ್ಕಾಗಿ ಜನ ಈ ಬಾರಿ ಅವರಿಗೆ ಬಹುಮತ ಕೊಡಲಿಲ್ಲ ಎಂದರು.

ದ್ವೇಷದ ರಾಜಕಾರಣ ಬಿಜೆಪಿ ಕೆಲಸ

ದೇವೇಗೌಡರ ಕುಟುಂಬದ ನಂತರ ಯಡಿಯೂರಪ್ಪ ಅವರ ಕುಟುಂಬವನ್ನು ಗುರಿಮಾಡಲಾಗಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ನಮ್ಮ ಮೇಲೆ, ಡಿ.ಕೆ. ಶಿವಕುಮಾರ್, ರಾಹುಲ್ ಗಾಂಧಿ ಅವರ ಮೇಲೆ ಕೇಸು ಹಾಕಿರುವುದನ್ನು ಏನೆಂದು ಕರೆಯಬೇಕು. ರಾಹುಲ್ ಗಾಂಧಿ ಅವರ ಸಂಸದ ಸ್ಥಾನವನ್ನೇ ರದ್ದುಗೊಳಿಸಿದ್ದನ್ನು ಏನೆಂದು ಕರೆಯುವುದು ಎಂದು ಪ್ರಶ್ನಿಸಿದರು.

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಜೈಲಿಗೆ ಕಲಿಸಿದ್ದನ್ನು ಏನೆಂದು ಕರೆಯಬೇಕು. ದ್ವೇಷದ ರಾಜಕಾರಣವೂ ಇಲ್ಲ, ಪ್ರೀತಿಯ ರಾಜಕಾರಣ ಎಂದು ಕರೆಯಬೇಕೋ. ಸೇಡಿನ ರಾಜಕಾರಣ ಮಾಡುವುದು ಅವರು, ನಾವು ಯಾವತ್ತೂ ಸೇಡಿನ ರಾಜಕಾರಣ ಮಾಡುವುದಿಲ್ಲ ಎಂದರು.

ದ್ವೇಷದ ರಾಜಕಾರಣವನ್ನು ಯಾರ ಮೇಲೂ ಮಾಡಿಲ್ಲ

ನಾನು ನಿನ್ನೆ ಮೊನ್ನೆ ರಾಜಕೀಯಕ್ಕೆ ಬಂದಿಲ್ಲ. ದ್ವೇಷದ ರಾಜಕಾರಣವನ್ನು ನಾನು ಇಂದಿನವರೆಗೆ ಯಾರ ಮೇಲೂ ಮಾಡಿಲ್ಲ. ಅದು ಬಿಜೆಪಿಯವರ ಕೆಲಸ ಎಂದರು.

ಎಸ್‌ಸಿ- ಎಸ್‌ಟಿ ವಿದ್ಯಾರ್ಥಿ ವೇತನದ ಸೀಲಿಂಗ್ ಬಗ್ಗೆ ಚರ್ಚೆ

ಎಸ್.ಸಿ.ಎಸ್.ಟಿ ಮೆರಿಟ್ ವಿದ್ಯಾರ್ಥಿ ವೇತನವನ್ನು ಶೇ. 60ರಿಂದ ಶೇ 75 ಕ್ಕೆ ಏರಿಸಿದ್ದು, 6 ಲಕ್ಷ ಸೀಲಿಂಗ್ ಲಿಮಿಟ್ ನಿಗದಿಪಡಿಸಿರುವುದರಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ ಎಂಬ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.

ಇದನ್ನೂ ಓದಿ | NEET UG 2024: ನೀಟ್ ಯುಜಿ ವಿವಾದದ ಬಗ್ಗೆ ಸಿಬಿಐ ತನಿಖೆಗೆ ಮನವಿ; ಕೇಂದ್ರ, ಎನ್‌ಟಿಎಗೆ ಸುಪ್ರೀಂ ಕೋರ್ಟ್‌ ನೋಟಿಸ್

ಎಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜಿನ ಶುಲ್ಕ ಶೇ.10%ರಷ್ಟು ಹೆಚ್ಚಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ಬಗ್ಗೆ ನನಗೆ ಗೊತ್ತಿಲ್ಲ ವಿಚಾರ ಮಾಡುವುದಾಗಿ ತಿಳಿಸಿದರು.

ಶೀಘ್ರದಲ್ಲೇ ಜಿ.ಪಂ, ತಾ.ಪಂ ಚುನಾವಣೆ

ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿಗಳ ಚುನಾವಣೆ ಬಗ್ಗೆ ಪ್ರತಿಕ್ರಿಯೆ ನೀಡಿ, ಚುನಾವಣೆಯನ್ನು ಆದಷ್ಟೂ ಶೀಘ್ರದಲ್ಲಿ ಮಾಡುತ್ತೇವೆ ಎಂದರು.

Continue Reading

ವಿಜಯನಗರ

Vijayanagara News: ಪೌರ ಕಾರ್ಮಿಕರ ಉತ್ತಮ ಆರೋಗ್ಯಕ್ಕಾಗಿ ಆರೋಗ್ಯ ಶಿಬಿರ ನಡೆಸಲು ಸೂಚನೆ

Vijayanagara News: ಸಫಾಯಿ ಕರ್ಮಚಾರಿ ರಾಷ್ಟ್ರೀಯ ಆಯೋಗದ ಅಧ್ಯಕ್ಷ ಎಂ.ವೆಂಕಟೇಶನ್ ಶುಕ್ರವಾರ ವಿಜಯನಗರ ಜಿಲ್ಲೆಗೆ ಭೇಟಿ ನೀಡಿ, ಜಿಲ್ಲೆಯ ವಿವಿಧ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸಫಾಯಿ ಕರ್ಮಚಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

VISTARANEWS.COM


on

Progress Review Meeting by Safai Karmachari National Commission Chairman M Venkatesan at hosapete
Koo

ಹೊಸಪೇಟೆ: ಸಫಾಯಿ ಕರ್ಮಚಾರಿ ರಾಷ್ಟ್ರೀಯ ಆಯೋಗದ ಅಧ್ಯಕ್ಷ ಎಂ. ವೆಂಕಟೇಶನ್, ಶುಕ್ರವಾರ ವಿಜಯನಗರ ಜಿಲ್ಲೆಗೆ ಭೇಟಿ ನೀಡಿ ಜಿಲ್ಲೆಯ ವಿವಿಧ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸಫಾಯಿ ಕರ್ಮಚಾರಿಗಳ ಪ್ರಗತಿ ಪರಿಶೀಲನಾ ಸಭೆ (Vijayanagara News) ನಡೆಸಿದರು.

ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ನಡೆದ ಸಭೆಯಲ್ಲಿ ಹೊಸಪೇಟೆ, ಕಮಲಾಪುರ, ಹಡಗಲಿ, ಹಗರಿಬೊಮ್ಮನಹಳ್ಳಿ ಸೇರಿದಂತೆ ಬೇರೆ ಬೇರೆ ಭಾಗಗಳಿಂದ ಬಂದಿದ್ದ ಪೌರ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು.

ಅಧ್ಯಕ್ಷರು ಮೊದಲಿಗೆ ಪೌರ ಕಾರ್ಮಿಕರ, ಬಳಿಕ ಪೌರ ಕಾರ್ಮಿಕ ಯೂನಿಯನ್ ಪದಾಧಿಕಾರಿಗಳ ಮತ್ತು ಹೊರಗುತ್ತಿಗೆ ಏಜೆನ್ಸಿದಾರರೊಂದಿಗೆ ನಾನಾ ವಿಷಯಗಳನ್ನು ಚರ್ಚಿಸಿದರು. ವಿಜಯನಗರ ಜಿಲ್ಲೆಯ ವಿವಿಧ ನಗರಸಭೆ, ಪುರಸಭೆ ಮತ್ತು ಪ.ಪಂ ಅಧಿಕಾರಿಗಳು, ಮುಖ್ಯಾಧಿಕಾರಿಗಳ ಸಮ್ಮುಖದಲ್ಲಿ ಪೌರ ಕಾರ್ಮಿಕರ ಅಹವಾಲು ಆಲಿಸಿದರು.

ಇದನ್ನೂ ಓದಿ: T20 World Cup 2024 Super 8: ಸೂಪರ್​-8 ಪಂದ್ಯಗಳ ವೇಳಾಪಟ್ಟಿ ಪ್ರಕಟ; ಭಾರತಕ್ಕೆ ಆಫ್ಘಾನ್​ ಮೊದಲ ಎದುರಾಳಿ

ನಿಮ್ಮ ಪಿಎಫ್ ನಂಬರ್, ಇಎಸ್‌ಐ ನಂಬರ್ ಗೊತ್ತಿದೆಯಾ? ಮೆಡಿಕಲ್ ಇನ್ಶೂರನ್ಸ್ ಇದೆಯಾ? ಎಂದು ಅಧ್ಯಕ್ಷರು ಪೌರ ಕಾರ್ಮಿಕರಿಗೆ ಪ್ರಶ್ನಿಸಿ ಮಾಹಿತಿ ಪಡೆದುಕೊಂಡರು. ಪೌರ ಕಾರ್ಮಿಕರಿಗೆ ಕೊನೆಯ ಬಾರಿ ಆರೋಗ್ಯ ಶಿಬಿರ ಯಾವಾಗ ನಡಿಸಿದ್ದೀರಿ? ಎಂದು ನಗರಸಭೆ ಅಧಿಕಾರಿಗಳಿಗೆ ಪ್ರಶ್ನಿಸಿದರು.

ವೇತನ ಪಾವತಿ ಸರಿಯಾದ ಸಮಯಕ್ಕೆ ಆಗುತ್ತಿದೆಯೇ? ನೀವು ಪ್ರತಿದಿನ ಕೆಲಸ ಮಾಡುವ ಅವಧಿ ಎಷ್ಟು? ಎಂದು ಕೇಳಿದ ಅಧ್ಯಕ್ಷರು, ಪೌರ ಕಾರ್ಮಿಕ ನೌಕರೊಬ್ಬರ ಮೆಸೇಜ್‌ಗೆ ಬಂದಿರುವ ಸಂದೇಶವನ್ನು ವೀಕ್ಷಿಸಿ ವೇತನವು ಬ್ಯಾಂಕಿನ ಖಾತೆಗೆ ಪ್ರತಿ ಮಾಹೆ ಸರಿಯಾದ ಸಮಯಕ್ಕೆ ಜಮಾ ಆಗುತ್ತಿರುವುದರ ಬಗ್ಗೆ ಖಚಿತಪಡಿಸಿಕೊಂಡರು.

ಟಿಶರ್ಟ್‌, ಪ್ಯಾಂಟ್, ರೇನ್‌ಕೋಟ್ ನೀಡುತ್ತಿರುವುದರ ಬಗ್ಗೆ ಸಹ ಪೌರ ಕಾರ್ಮಿಕರಿಗೆ ಕೇಳಿ ಖಚಿತಪಡಿಸಿಕೊಂಡರು. ಕೈತೊಳೆಯಲು ಸೋಪು ಕೊಡುತ್ತಾರಾ ಎಂದು ಕೇಳಿ ಸೌಲಭ್ಯಗಳ ಬಗ್ಗೆ ಪರಿಶೀಲಿಸಿದರು. ಹೊರಗುತ್ತಿಗೆ ಆಧಾರಡಿ ಕೆಲಸ ಮಾಡುವ ಪೌರ ಕಾರ್ಮಿಕ ನೌಕರರಿಗೆ ಪ್ರತಿ ಮಾಹೆ 14,800 ಮತ್ತು ಪೌರ ಕಾರ್ಮಿಕ ವಾಹನ ಚಾಲಕರಿಗೆ ಪ್ರತಿ ಮಾಹೆ 12,800 ರೂ ಸಿಗುತ್ತಿದೆ ಎಂದು ಅಧಿಕಾರಿಗಳು ಅಧ್ಯಕ್ಷರಿಗೆ ಮಾಹಿತಿ ನೀಡಿದರು.

ಇದನ್ನೂ ಓದಿ: Gold Rate Today: ಮತ್ತೆ ಏರಿಕೆಯ ಹಾದಿಯಲ್ಲಿ ಚಿನ್ನದ ಬೆಲೆ; ಆಭರಣ ಖರೀದಿಯ ಮುನ್ನ ಇಂದಿನ ದರ ಗಮನಿಸಿ

ಉತ್ತಮವಾದ ಆರೋಗ್ಯ ಪ್ರತಿಯೊಬ್ಬರ ಹಕ್ಕಾಗಿದೆ. ಪ್ರತಿಯೊಬ್ಬ ಪೌರ ಕಾರ್ಮಿಕರಿಗೆ ಉತ್ತಮವಾದ ಆರೋಗ್ಯ ಸಿಗುವ ನಿಟ್ಟಿನಲ್ಲಿ ಎಲ್ಲಾ ಪುರಸಭೆ, ನಗರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ವಾರದೊಳಗೆ ಆರೋಗ್ಯ ಶಿಬಿರಗಳು ನಡೆಯಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಗುರುತಿನ ಚೀಟಿ ನೀಡಿ

ಇನ್ಸೂರೆನ್ಸ್ ನಂಬರ್, ರಕ್ತದ ಗುಂಪು, ಇಎಸ್‌ಐ ನಂಬರ್ ಸೇರಿದಂತೆ ಮಹತ್ವದ ಮಾಹಿತಿ ಇರುವ ಗುರುತಿನ ಚೀಟಿಗಳನ್ನು ಮುದ್ರಿಸಿ ಪ್ರತಿಯೊಬ್ಬ ಪೌರ ಕಾರ್ಮಿಕರಿಗೆ ನೀಡುವಂತೆ ಅಧ್ಯಕ್ಷರು ಅಧಿಕಾರಿಗಳಿಗೆ ಮತ್ತು ಹೊರಗುತ್ತಿಗೆ ನೌಕರರನ್ನು ಒದಗಿಸುವ ಏಜೆನ್ಸಿಗಳಿಗೆ ನಿರ್ದೇಶನ ನೀಡಿದರು.

ನಿವೇಶನ ನೀಡಲು ಕ್ರಮ

ನಮಗಿನ್ನು ಮನೆಯಿಲ್ಲ. ನಮಗೆ ಮನೆ ಕೊಡಿ ಎಂದು ಕೆಲವು ಪೌರ ಕಾರ್ಮಿಕರು ಸಭೆಯಲ್ಲಿ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಮನೋಹರ ಅವರು, ಪೌರ ಕಾರ್ಮಿಕರಿಗೆ ಮನೆ ಬೇಕು ಎನ್ನುವ ಬೇಡಿಕೆಯನ್ನು ಪರಿಗಣಿಸಿ ಆರು ತಿಂಗಳೊಳಗೆ ನಿವೇಶನ ನೀಡಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: India Coach: ಕೋಚ್​ ಆಗುವ ಮುನ್ನವೇ ಗಂಭೀರ್​ಗೆ ಕಿವಿಮಾತು ಹೇಳಿದ ಅನಿಲ್ ಕುಂಬ್ಳೆ

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಸದಾಶಿವ ಪ್ರಭು ಬಿ., ಅಪರ ಜಿಲ್ಲಾಧಿಕಾರಿ ಅನುರಾಧ ಜಿ., ಸಹಾಯಕ ಆಯುಕ್ತ ಮೊಹಮ್ಮದ್ ಅಲಿ ಅಕ್ರಮ ಷಾಹ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಲಿಂ ಪಾಷಾ, ಹೊಸಪೇಟೆ ನಗರಸಭೆ ಪೌರಾಯುಕ್ತ ಚಂದ್ರಪ್ಪ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಶಾಷು ಮೋದ್ದೀನ್, ನಗರಸಭೆಯ ಸಹಾಯಕ ಅಭಿಯಂತರೆ ಆರತಿ, ಹಿರಿಯ ಆರೋಗ್ಯ ನಿರೀಕ್ಷಕಿ ಲತಾ ಸೇರಿದಂತೆ ವಿವಿಧ ಪುರಸಭೆ ಮತ್ತು ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿಗಳು ಮತ್ತು ಇತರರು ಇದ್ದರು.

Continue Reading

ಬಾಗಲಕೋಟೆ

Bhandara Fair : ಲೋಕಾಪುರದ ಭಂಡಾರ ಜಾತ್ರೆಗೆ ಅದ್ಧೂರಿ ಚಾಲನೆ; ಭಂಡಾರದಲ್ಲಿ ಮಿಂದೆದ್ದ ಭಕ್ತ ಸಮೂಹ

Bhandara Fair : 27 ಗ್ರಾಮಗಳ ಸಮ್ಮುಖದಲ್ಲಿ ನಡೆಯುವ ವಿಶಿಷ್ಟ ಭಂಡಾರ ಜಾತ್ರೆಗೆ ಅದ್ಧೂರಿ ಚಾಲನೆ ನೀಡಲಾಗಿದ್ದು, ಭಕ್ತ ಸಮೂಹವು ಭಂಡಾರದಲ್ಲಿ ಮಿಂದೆದ್ದಿದ್ದಾರೆ.

VISTARANEWS.COM


on

By

Bhandara Fair
Koo

ಬಾಗಲಕೋಟೆ: ಐತಿಹಾಸಿಕ ಲೋಕಾಪುರದ ಭಂಡಾರ ಜಾತ್ರೆಗೆ (Bhandara Fair) ಶನಿವಾರ ಅದ್ಧೂರಿ ಚಾಲನೆ ನೀಡಲಾಗಿದೆ. ಲಕ್ಷಾಂತರ ಭಕ್ತರ ಸಮೂಹವು ಭಂಡಾರದಲ್ಲಿ ಮಿಂದೆದ್ದರು. ಮುಧೋಳ ನಗರದಲ್ಲಿ ಪ್ರತಿ 7 ವರ್ಷಕ್ಕೊಮ್ಮೆ ಲೋಕಾಪುರ ದುರ್ಗಾದೇವಿ ಜಾತ್ರೆ ನಡೆಯಲಿದೆ.

ಭಂಡಾರ ಜಾತ್ರೆಯಲ್ಲಿ ಗ್ರಾಮ ದೇವತೆಗಳಾದ ದ್ಯಾಮವ್ವ, ದುರ್ಗವ್ವ ದೇವಿ ಜಾತ್ರೆ ಇದಾಗಿದ್ದು, ಸುಮಾರು 27 ಗ್ರಾಮಸ್ಥರ ಸಮ್ಮುಖದಲ್ಲಿ ನಡೆಯುವ ವಿಶಿಷ್ಟ ದೇವಿ ಜಾತ್ರೆ ಆಗಿದೆ. 5 ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಭಾಗಿಯಾಗಲಿದ್ದಾರೆ.

ಇನ್ನೂ ಆದಿ ಶಕ್ತಿ ದುರ್ಗಾದೇವಿ ರಥೋತ್ಸವಕ್ಕೆ 50 ಟನ್ ಭಂಡಾರವನ್ನು ಭಕ್ತರು ತೂರಲಿದ್ದಾರೆ. ಪಟ್ಟಣದ ರಥ ಬೀದಿ ಸೇರಿ ಪ್ರಮುಖ ಮಾರ್ಗಗಳಲ್ಲಿ ರಥೋತ್ಸವ ಸಂಚಾರಿಸಿದೆ. ಇನ್ನೂ ಯುವಕರು ಡೊಳ್ಳು ಕುಣಿತ, ಡಿಜೆ ಸದ್ದಿಗೆ ಭಂಡಾರ ಬಳಿದು ಹೆಜ್ಜೆ ಹಾಕಿದರು. ಕುಂಬ ಹೊತ್ತ ಸಾವಿರಾರು ಮಹಿಳೆರ ಮುಂಭಾಗ ದೇವಿಯ ಪಲ್ಲಕ್ಕಿ ಮೆರವಣಿಗೆ ನಡೆದಿದೆ.

ಟನ್ ಗಟ್ಟಲೆ ಭಂಡಾರ ಎರೆಚಿ ಜನರು ಸಂಭ್ರಮಿಸಿದರು. ದುರ್ಗವ್ವ ದೇವಿ ಓಣಿಯ ದೇವಸ್ಥಾನದಿಂದ ಭಂಡಾರ ಜಾತ್ರೆಯ ಮೆರವಣಿಗೆ ನಡೆಯಿತು. ದೇವಿಗೆ ಭಕ್ತರು ಉಡಿ ತುಂಬಿ ಪ್ರಾರ್ಥಿಸಿ ರಸ್ತೆ ಉದ್ದಕ್ಕೂ ಭಂಡಾರ ಎರಚುತ್ತಾ ದೇವಿಗೆ ಘೋಷಣೆ ಕೂಗುತ್ತಾ ಜಾತ್ರೆಯನ್ನು ಆಚರಿಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಉತ್ತರ ಕನ್ನಡ

Actor Darshan : ಸಂಕಷ್ಟ ನಿವಾರಣೆಗಾಗಿ ದೇವರ ಮೊರೆ ಹೋದ ನಟ ದರ್ಶನ್‌ ಕುಟುಂಬಸ್ಥರು

Actor Darshan : ಕೊಲೆ ಕೇಸ್‌ನಲ್ಲಿ (Renukaswamy murder case) ಬಂಧಿಯಾಗಿರುವ ನಟ ದರ್ಶನ್‌ ಸಂಕಷ್ಟದಿಂದ ದೂರ ಆಗಲಿ ಎಂದು ಕುಟುಂಬಸ್ಥರು ದೇವರ ಮೊರೆ ಹೋಗಿದ್ದಾರೆ. ದರ್ಶನ್‌ ಅವರ ಸಹೋದರಿಯ ಪತಿಯಿಂದ ವಿಶೇಷ ಪೂಜೆ ಸಲ್ಲಿಸಿದ್ದಾರೆ.

VISTARANEWS.COM


on

By

Actor darshan
Koo

ಕಾರವಾರ: ಚಿತ್ರನಟ ದರ್ಶನ್ (Actor Darshan) ರೇಣುಕಾಸ್ವಾಮಿ ಹತ್ಯೆ (Renukaswamy murder case) ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಪೊಲೀಸ್ ತನಿಖೆ ಎದುರಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಅವರ ಕುಟುಂಬಸ್ಥರು ಸಂಕಷ್ಟ ನಿವಾರಣೆಗಾಗಿ ದೇವರ ಮೊರೆ ಹೋಗಿದ್ದಾರೆ.

ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕೈಗಾದಲ್ಲಿ ಉದ್ಯೋಗದಲ್ಲಿರುವ ದರ್ಶನ್ ಸಹೋದರಿ ದಿವ್ಯಾ ಅವರ ಪತಿ ಮಂಜುನಾಥ, ದರ್ಶನ್ ಒಳಿತಿಗಾಗಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಕೈಗಾದ ಟೌನ್‌ಶಿಪ್‌ನಲ್ಲಿರುವ ರಾಮಲಿಂಗೇಶ್ವರ, ಶನೇಶ್ವರ ದೇವಸ್ಥಾನದಲ್ಲಿ ದರ್ಶನ್ ಹೆಸರಿನಲ್ಲಿ ನವಗ್ರಹ ಪೂಜೆ, ಶನಿಶಾಂತಿ ಪೂಜೆ ಹಾಗೂ ವಿಶೇಷ‌ ಹೂವಿನ ಅಲಂಕಾರ ಪೂಜೆ ನೆರವೇರಿಸಿದ್ದಾರೆ. ದರ್ಶನ್ ಆದಷ್ಟು ಬೇಗ ಆರೋಪ ಮುಕ್ತರಾಗಿ ಹೊರಬರಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಂಡಿದ್ದಾರೆ.

ಇದನ್ನೂ ಓದಿ: Snake Bite : ನಿದ್ದೆಗೆ ಜಾರಿದ 3 ವರ್ಷದ ಬಾಲಕನನ್ನು ಕಚ್ಚಿ ಸಾಯಿಸಿದ ನಾಗರಹಾವು

ಸಸ್ಯಾಹಾರಿ ಅಂದ್ರೂ ರೇಣುಕಾಸ್ವಾಮಿ ಬಾಯಿಗೆ ಬಿರಿಯಾನಿ ಮೂಳೆ ತುರುಕಿದ್ದ ಆರೋಪಿಗಳು!

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ (Renuka Swamy murder case) ಇನ್ನಿಬ್ಬರು ಆರೋಪಿಗಳು ಪೊಲೀಸರಿಗೆ ಶರಣಾಗಿದ್ದಾರೆ. ಈ ನಡುವೆ ಪ್ರಕರಣದಲ್ಲಿ (Actor Darshan) ಹೇಗೆಲ್ಲಾ ರೇಣುಕಾಸ್ವಾಮಿಗೆ ಚಿತ್ರಹಿಂಸೆ ನೀಡಲಾಗಿತ್ತು ಎಂಬ ವಿಷಯಗಳು ಒಂದೊಂದಾಗೆ ಬೆಳಕಿಗೆ ಬರುತ್ತಿವೆ. ಕಿಡ್ನ್ಯಾಪ್‌ ಆಗಿದ್ದ ದಿನ ಊಟ ಕೊಡಿಸಿದ್ದ ಡಿ ಗ್ಯಾಂಗ್, ನಾನು ಶಾಖಾಹಾರಿ ಎಂದರೂ ಬಿಡದೇ ರೇಣುಕಾಸ್ವಾಮಿ ಬಾಯಿಗೆ ಬಿರಿಯಾನಿ ಮೂಳೆ ತುರುಕಿದ್ದರು ಎನ್ನಲಾಗಿದೆ.

ಚಿತ್ರದುರ್ಗದಿಂದ ಜೂನ್‌ 8ರಂದು ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್‌ ಮಾಡಿ ಬೆಂಗಳೂರಿಗೆ ಕರೆತರಲಾಗಿತ್ತು. ನಂತರ ಆತನನ್ನು ಪಟ್ಟಣಗೆರೆ ಶೆಡ್‌ನಲ್ಲಿ ಕೂಡಿಹಾಕಿ ಟಾರ್ಚರ್‌ ನೀಡಲಾಗಿದೆ. ಮಧ್ಯಾಹ್ನ ಊಟ ಕೊಡಿಸಿದಾಗ ನಾನು ಸಸ್ಯಹಾರಿ ಎಂದು ರೇಣುಕಾಸ್ವಾಮಿ ಹೇಳಿದ್ದಾನೆ. ಆದರೂ ಬಿಡದೆ ಆರೋಪಿಗಳು ಬಿರಿಯಾನಿ ತಿನ್ನಿಸಿದ್ದಾರೆ.

ಇದನ್ನೂ ಓದಿ | Actor Darshan: ಚಿನ್ನುಮರಿ ತಂಟೆಗೆ ಹೋದ್ರೆ ಒದೆ, ಪವಿತ್ರಾ ಗೌಡ ತಂಟೆಗೆ ಬಂದ್ರೆ ಕೊಲೆ; ಟ್ರೋಲ್ ಆಗುತ್ತಿದೆ ​ ದರ್ಶನ್​ ಕೊಲೆ ಕೇಸ್​​

ಬಲವಂತ ಮಾಡಿದಾಗ ಬಿರಿಯಾನಿ ತಿನ್ನದೆ ಕೆಳಗೆ ಉಗಿದಿದ್ದರಿಂದ ರೇಣುಕಾ ಸ್ವಾಮಿಯನ್ನು ಹಿಗ್ಗಾಮುಗ್ಗಾ ಥಳಿಸಿದ್ದ ಗ್ಯಾಂಗ್, ಬಾಸ್ ಬರುತ್ತಾರೆ ಒದೆ ತಿನ್ನಲು ರೆಡಿಯಾಗು. ಬಿರಿಯಾನಿ ತಿಂದ್ರೆ ಶಕ್ತಿ ಬರುತ್ತೆ ಎಂದು ಬಿರಿಯಾನಿ ತಿನ್ನಿಸಲು ಯತ್ನಿಸಿದ್ದಾರೆ. ಈ ಬಗ್ಗೆ ಪೊಲೀಸರ ಮುಂದೆ ಆರೋಪಿ ದೀಪಕ್ ಹೇಳಿಕೆ ಕೊಟ್ಟಿದ್ದಾನೆ.

ಕಿಡ್ನ್ಯಾಪ್ ಮಾಡಿಕೊಂಡು ಹೋಗುತ್ತಿದ್ದ ಸಿಸಿಟಿವಿ ಫುಟೇಜ್‌ ಲಭ್ಯ

ಡಿ ಗ್ಯಾಂಗ್‌ನಿಂದ ದುರ್ಗದ ಹುಡುಗನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್‌ ಮಾಡಿದ್ದ ಸಂದರ್ಭದ ಸ್ಫೋಟಕ ವಿಡಿಯೊ ವಿಸ್ತಾರ ನ್ಯೂಸ್‌ಗೆ ಲಭ್ಯವಾಗಿದೆ. KA-11-B-7939 ಕಾರಿನಲ್ಲಿ ಜೂನ್ 8 ಬೆಳಗ್ಗೆ 11:30ಕ್ಕೆ ಗುಯಿಲಾಳ್ ಟೋಲ್ ಅನ್ನು ಗ್ಯಾಂಗ್ ಕ್ರಾಸ್ ಮಾಡಿತ್ತು. ಕಾರಿನ ಮುಂಭಾಗ ಡ್ರೈವರ್ ರವಿ ಮತ್ತು ರಾಘವೇಂದ್ರ ಕೂತಿರುವ ದೃಶ್ಯ ಸೆರೆಯಾಗಿದೆ.

ಹಿರಿಯೂರು ಮಾರ್ಗವಾಗಿ ಬೆಂಗಳೂರು ಕಡೆ ಪ್ರಯಾಣ ಮಾಡಿದ್ದ ಟೀಂ, ಟೋಲ್‌ನಲ್ಲಿ ವಿಐಪಿ ಕಾರ್ಡ್ ಪ್ರದರ್ಶನ ಮಾಡಿ, ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ಎಂದು ರಾಘವೇಂದ್ರ ಬಿಲ್ಡಪ್ ಕೊಟ್ಟು ಹೋಗಿದ್ದರು. ಬೆಂಗಳೂರಿಗೆ ಬಿಟ್ಟು ವಾಪಸ್ ಹೋಗುವಾಗ ಡ್ರೈವರ್ ರವಿ ಮಾತ್ರ ವಾಹನದಲ್ಲಿ ಕಾಣಿಸಿಕೊಂಡಿದ್ದಾರೆ. ಜೂನ್‌ 9 ಬೆಳಗಿನ ಜಾವ 4:30 ಕ್ಕೆ ಚಿತ್ರದುರ್ಗದತ್ತ ರವಿ ತೆರಳಿದ್ದ. ಈತ ಇನ್ನುಳಿದ ನಾಲ್ಕು ಮಂದಿ ಜೊತೆ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಬಿಟ್ಟು ಹೋಗಿದ್ದ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
NEET UG 2024
ಕರ್ನಾಟಕ10 mins ago

NEET UG 2024: ವಿದ್ಯಾರ್ಥಿಗಳಿಗೆ ಅನ್ಯಾಯ; ನೀಟ್ ಮರು ಪರೀಕ್ಷೆ, ತನಿಖೆಗೆ ಸಿಎಂ ಆಗ್ರಹ

Paris Olympics 2024
ಕ್ರೀಡೆ20 mins ago

Paris Olympics 2024: ಒಲಿಂಪಿಕ್ಸ್ ಆಯೋಜನೆ; ಫ್ರಾನ್ಸ್​ ಅಧ್ಯಕ್ಷರಿಗೆ ಶುಭ ಕೋರಿದ ಪ್ರಧಾನಿ ಮೋದಿ

Maoists Killed
ದೇಶ22 mins ago

Maoists Killed: ಛತ್ತೀಸ್‌ಗಢದಲ್ಲಿ 8 ಮಾವೋವಾದಿಗಳನ್ನು ಹೊಡೆದುರುಳಿಸಿದ ಭದ್ರತಾ ಪಡೆ; ಓರ್ವ ಯೋಧ ಹುತಾತ್ಮ

Progress Review Meeting by Safai Karmachari National Commission Chairman M Venkatesan at hosapete
ವಿಜಯನಗರ25 mins ago

Vijayanagara News: ಪೌರ ಕಾರ್ಮಿಕರ ಉತ್ತಮ ಆರೋಗ್ಯಕ್ಕಾಗಿ ಆರೋಗ್ಯ ಶಿಬಿರ ನಡೆಸಲು ಸೂಚನೆ

Viral News
Latest27 mins ago

Viral News: 80ರ ಅಜ್ಜನನ್ನು ಪ್ರೀತಿಸಿ ಮದುವೆಯಾದ 23ರ ಸುಂದರಿ! ಆಕೆ ಕೊಟ್ಟ ಕಾರಣ ಮಜವಾಗಿದೆ!

James Wan
ಸಿನಿಮಾ33 mins ago

James Wan: ಜೇಮ್ಸ್‌ ವಾನ್‌ ನಿರ್ದೇಶನದ ಈ 6 ಥ್ರಿಲ್ಲರ್‌ ಚಿತ್ರಗಳನ್ನು ತಪ್ಪದೇ ನೋಡಿ!

Bhandara Fair
ಬಾಗಲಕೋಟೆ35 mins ago

Bhandara Fair : ಲೋಕಾಪುರದ ಭಂಡಾರ ಜಾತ್ರೆಗೆ ಅದ್ಧೂರಿ ಚಾಲನೆ; ಭಂಡಾರದಲ್ಲಿ ಮಿಂದೆದ್ದ ಭಕ್ತ ಸಮೂಹ

darshan give sopports to arrested people
ಸ್ಯಾಂಡಲ್ ವುಡ್47 mins ago

Actor Darshan: ಎಲ್ಲ ಖರ್ಚು ನೋಡಿಕೊಳ್ತೇನೆ, ನೀವು ಸರೆಂಡರ್‌ ಆಗಿ ಎಂದಿದ್ದ ದರ್ಶನ್ ತಾನೇ ಪೊಲೀಸ್‌ ಬೋನಿಗೆ ಬಿದ್ದ!

T20 World Cup 2024 Super 8
ಕ್ರಿಕೆಟ್1 hour ago

T20 World Cup 2024 Super 8: ಸೂಪರ್​-8 ಪಂದ್ಯಗಳ ವೇಳಾಪಟ್ಟಿ ಪ್ರಕಟ; ಭಾರತಕ್ಕೆ ಆಫ್ಘಾನ್​ ಮೊದಲ ಎದುರಾಳಿ

Indresh Kumar
Lok Sabha Election 20241 hour ago

Indresh Kumar: ರಾಮ ಭಕ್ತರು ಅಧಿಕಾರದಲ್ಲಿದ್ದಾರೆ, ರಾಮ ವಿರೋಧಿಗಳು ಸೋತಿದ್ದಾರೆ; ಆರ್‌ಎಸ್‌ಎಸ್‌ ನಾಯಕನ ಹೊಸ ಹೇಳಿಕೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ19 hours ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು20 hours ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು21 hours ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ21 hours ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

karnataka weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ4 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ4 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ4 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ4 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

ಟ್ರೆಂಡಿಂಗ್‌