ಬೆಂಗಳೂರು: ನಗರದ ಹೊರವಲಯದ ಕುಂಬಳಗೋಡು ಸಮೀಪದ ರಾಮಸಂದ್ರದ ಪರ್ಫ್ಯೂಮ್ ಫ್ಯಾಕ್ಟರಿಯಲ್ಲಿ ಅಗ್ನಿ ದುರಂತ ಸಂಭವಿಸಿ ಮೂವರು ಸಜೀವ ದಹನವಾಗಿ, ಐವರು ಗಂಭೀರವಾಗಿ ಗಾಯಗೊಂಡ ಘಟನೆ (Fire accident) ಭಾನುವಾರ ನಡೆದಿದೆ.
ಬೆಂಕಿ ಬಿದ್ದ ತಕ್ಷಣ ಇಡೀ ಕಾರ್ಖಾನೆಯನ್ನು ಆವರಿಸಿಕೊಂಡಿದ್ದರಿಂದ ಮಾಲೀಕ ಸಲೀಂ ಸೇರಿ ಮೂವರು ಸಜೀವ ದಹನವಾಗಿದ್ದಾರೆ. ಅಲ್ಲಾಬಕ್ಷು, ಅಬ್ರಾಜ್, ರಿಯಾಜ್, ಸಾಧಿಕ್, ಇಮ್ರಾನ್ ಗಾಯಾಳುಗಳು. ಬೆಂಕಿಯ ತೀವ್ರತೆ ಹೆಚ್ಚಾಗಿದ್ದರಿಂದ ಸಿಬ್ಬಂದಿ ಹೊರಗೆ ಬರಲಾಗದೆ ಬೆಂಕಿಗಾಹುತಿಯಾಗಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವ ಕೆಲಸ ಮಾಡುತ್ತಿದ್ದಾರೆ.
ಇದನ್ನೂ ಓದಿ | ಶಿವಮೊಗ್ಗದಲ್ಲಿ ಆತಂಕ ಹುಟ್ಟಿಸಿದ್ದ ಸಿಡಿಮದ್ದು ಸ್ಫೋಟ! ದಂಪತಿ ವಶಕ್ಕೆ, ವಿಚಾರಣೆ
ಕುಂಬಳಗೋಡು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಮೃತರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಒಟ್ಟು 8 ಸಿಬ್ಬಂದಿ ಪರ್ಫ್ಯೂಮ್ ಕೆಮಿಕಲ್ ಫಿಲ್ಲಿಂಗ್ ಮಾಡುತ್ತಿದ್ದರು. ಫಿಲ್ಲಿಂಗ್ ವೇಳೆ ಸ್ಫೋಟ ಸಂಭವಿಸಿ, ಬೆಂಕಿಯು ಇಡೀ ಮನೆಯನ್ನು ಆವರಿಸಿದೆ. ಈ ವೇಳೆ ಮೂವರು ಸಜೀವ ದಹನವಾಗಿದ್ದು, ಉಳಿದ ಐವರು ಹೊರಗಡೆ ಓಡಿಬಂದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಐವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಮರಣೋತ್ತರ ಪರೀಕ್ಷೆಗಾಗಿ ಮೂವರ ಮೃತದೇಹಗಳನ್ನು ಆರ್.ಆರ್. ನಗರ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳೀಯರ ಮಾಹಿತಿ ಪ್ರಕಾರ ಒಂದು ತಿಂಗಳ ಹಿಂದೆ ಪರ್ಫ್ಯೂಮ್ ಫ್ಯಾಕ್ಟರಿ ಪ್ರಾರಂಭವಾಗಿತ್ತು ಎನ್ನಲಾಗಿದೆ.
ರಾಮನಗರ ಎಸ್ಪಿ ಕಾರ್ತಿಕ್ ರೆಡ್ಡಿ ಪ್ರತಿಕ್ರಿಯಿಸಿ, ಸಂಜೆ ಐದು ಗಂಟೆಗೆ ರಾಮಸಂದ್ರದಲ್ಲಿ ಬೆಂಕಿ ಅವಘಡವಾಗಿದ್ದು, ಮೂವರ ಸಾವಾಗಿದೆ. ಸಲೀಂ ಎಂಬುವವರ ಗುರುತು ಪತ್ತೆಯಾಗಿದ್ದು, ಉಳಿದ ಇಬ್ಬರ ಗುರುತು ಪತ್ತೆಯಾಗಿಲ್ಲ. ಐದು ಮಂದಿ ಗಾಯಾಳುಗಳು ವಿಕ್ಟೋರಿಯಾ ಆಸ್ಪತ್ರೆಗೆ ಸೇರಿದ್ದಾರೆ. ಗಾಯಾಳುಗಳಲ್ಲಿ ಒಬ್ಬ 15 ವರ್ಷದ ಅಪ್ರಾಪ್ತ ಬಾಲಕನಾಗಿದ್ದಾನೆ ಎಂದು ತಿಳಿಸಿದ್ದಾರೆ.
ಮೇಲ್ನೋಟಕ್ಕೆ ಪರ್ಫ್ಯೂಮ್ ಫಿಲ್ಲಿಂಗ್ ಮಾಡ್ತಿರೋದು ಕಂಡುಬಂದಿದೆ. ಎಫ್‌ಎಸ್‌ಎಲ್ ವರದಿ ಬಂದ ಬಳಿಕ ಘಟನೆಗೆ ಕಾರಣ ಏನು ಅಂತಾ ಗೊತ್ತಾಗಲಿದೆ. ಗ್ರಾಮ ಪಂಚಾಯಿತಿಯಿಂದ ಅನುಮತಿ ಪಡೆದಿದ್ದರೋ, ಇಲ್ಲವೋ ಎಂಬ ಬಗ್ಗೆ ಪರಿಶೀಲನೆ ನಡೆಸಬೇಕಿದೆ. ವಿಠ್ಠಲ್ ಎಂಬುವವರ ಜಾಗ ಇದಾಗಿದ್ದು, ಸಲೀಂ ಅನ್ನೋ ವ್ಯಕ್ತಿ ಕಾರ್ಖಾನೆ ನಡೆಸುತ್ತಿದ್ದ. ಕಳೆದ ಒಂದು ತಿಂಗಳ ಹಿಂದಷ್ಟೆ ಇಲ್ಲಿ ಗೋಡೌನ್ ಆರಂಭವಾಗಿದೆ. ಗೋಡೌನ್‌ನ ಚಿಕ್ಕ ಕೋಣೆಯಲ್ಲಿ ಮೂವರ ಶವ ಪತ್ತೆಯಾಗಿದೆ ಎಂದು ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಆತಂಕ ಹುಟ್ಟಿಸಿದ್ದ ಸಿಡಿಮದ್ದು ಸ್ಫೋಟ! ದಂಪತಿ ವಶಕ್ಕೆ, ವಿಚಾರಣೆ
ಶಿವಮೊಗ್ಗ : ಶಿವಮೊಗ್ಗದ ಶಿರಾಳಕೊಪ್ಪದಲ್ಲಿ ಸಿಡಿಮದ್ದು ಸ್ಫೋಟಗೊಂಡು ಇಬ್ಬರು ವ್ಯಕ್ತಿಗಳು ಗಾಯಗೊಂಡಿದ್ದಾರೆ. ಶಿರಾಳಕೊಪ್ಪದ ಬಸ್ ಸ್ಟ್ಯಾಂಡ್ ಬಳಿ ಈ ಘಟನೆ ನಡೆದಿದೆ. ಸಿಡಿಮದ್ದು ತಂದಿದ್ದ ದಂಪತಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಶಿರಾಳಕೊಪ್ಪದಲ್ಲಿ ನಡೆಯುವ ಸಂತೆಗಾಗಿ ಹಾವೇರಿ ಮೂಲದ ಉಮೇಶ್ ಹಾಗೂ ರೂಪ ದಂಪತಿ ಬ್ಯಾಗ್‌ವೊಂದರಲ್ಲಿ ಸಿಡಿಮದ್ದು ತಂದಿದ್ದರು. ಅಂಗಡಿ ಬಳಿ ಇಟ್ಟಿದ್ದ ಸಿಡಿಮದ್ದು ಏಕಾಏಕಿ ಸ್ಫೋಟಗೊಂಡಿದೆ. ಈ ವೇಳೆ ಸಮೀಪದಲ್ಲಿದ್ದ ಇಬ್ಬರು ಗಾಯಗೊಂಡಿದ್ದರು.
ಕೂಡಲೇ ಸ್ಥಳೀಯರು ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದರು. ಸಿಡಿಮದ್ದು ತಂದಿದ್ದ ಹಾವೇರಿ ಮೂಲದ ಉಮೇಶ್ ಹಾಗೂ ರೂಪ ದಂಪತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೂಡಲೇ ಸ್ಥಳೀಯರು ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದರು. ಸಿಡಿಮದ್ದು ತಂದಿದ್ದ ಹಾವೇರಿ ಮೂಲದ ಉಮೇಶ್ ಹಾಗೂ ರೂಪ ದಂಪತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಿಚಾರ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ನೂರಾರು ಜನರು ಜಮಾಯಿಸಿದ್ದರು. ಇದರಿಂದಾಗಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಜೋರಾಗಿ ಕೇಳಿ ಬಂತು ಶಬ್ಧ
ಶಿರಾಳಕೊಪ್ಪ ಬಸ್ ನಿಲ್ದಾಣದ ಬಳಿ ಜೋರಾದ ಶಬ್ಧ ಬಂತು. ಶಬ್ಧ ಬಂದ ಜಾಗದಲ್ಲಿ ಸ್ಟವ್ ಮೇಲೆ ಹಾರಿತ್ತು.
ನಾವು ಓಡಿ ಹೋಗಿ ನೋಡಿದಾಗ, ಬೆಡ್ ಶೀಟ್ ಮಾರುವ ವ್ಯಾಪಾರಿಗಳಿಗೆ ಗಾಯಗಳಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು ಎಂದು ಪ್ರತ್ಯಕ್ಷದರ್ಶಿ ಶಾರುಖ್ ಎಂಬುವವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಜೋರಾಗಿ ಶಬ್ಧ ಬಂದಾಗ ಎಲ್ಲರೂ ಭಯಭೀತರಾಗಿದ್ದರು. ನೋಡನೋಡುತ್ತಿದ್ದಂತೆ ಸ್ಫೋಟಗೊಂಡ ಜಾಗದಲ್ಲಿ ಜನರು ಸೇರಿದ್ದರು. ಸದ್ಯ ಯಾವುದೇ ಹೆಚ್ಚು ಅನಾಹುತ ನಡೆದಿಲ್ಲ ಎಂದರು.
ಶಿವಮೊಗ್ಗದ ಶಿಕಾರಿಪುರದಲ್ಲಿ ಎಸ್‌ಪಿ ಮಿಥುನ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ. ಆಕಸ್ಮಿಕವಾಗಿ ಸಿಡಿಮದ್ದು ಸ್ಫೋಟವಾಗಿದೆ. ಘಟನೆಯಲ್ಲಿ ಅಂಥೋನಿ ದಾಸ್ ಎಂಬುವರಿಗೆ ಗಾಯವಾಗಿದೆ. ಪ್ರಕರಣ ಸಂಬಂಧ ಈಗಾಗಲೇ ಶಿರಾಳಕೊಪ್ಪ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸಿಡಿಮದ್ದು ಎಲ್ಲಿಂದ ತಂದಿದ್ದಾರೆ ಎಂಬುದನ್ನು ತನಿಖೆ ನಡೆಯುತ್ತಿದೆ. ಸಿಡಿಮದ್ದು ಬ್ಯಾಗಿನಲ್ಲಿಟ್ಟು ಉಮೇಶ್ ಹಾಗೂ ರೂಪ ದಂಪತಿ ಸಂತೆಗೆ ತೆರಳಿದ್ದರು. ಈ ವೇಳೆ ಸ್ಫೋಟಗೊಂಡು ಅಂಥೋನಿ ದಾಸ್ ಕಾಲಿಗೆ ತಗುಲಿದೆ. ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ್ದು, ಎಲ್ಲಾ ಆಯಾಮದಲ್ಲೂ ತನಿಖೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | Road Accident : ಬಸ್‌ನಿಂದ ಜಾರಿ ಬಿದ್ದ ಮಹಿಳೆ; ನೆರವಿಗೆ ಧಾವಿಸಿದ ಶಾಸಕ ಬಸವಂತಪ್ಪ
ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳು ಅಂಥೋಣಿ ದಾಸ್ ಅವರನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಶಿರಾಳಕೊಪ್ಪದಲ್ಲಿ ಸಿಡಿಮದ್ದು ಸ್ಫೋಟ ಹಿನ್ನೆಲೆಯಲ್ಲಿ ಎಸ್‌ಪಿ ಮಿಥುನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳೀಯ ಪೊಲೀಸರಿಂದ ಮಾಹಿತಿ ಪಡೆದರು.