Site icon Vistara News

Fire Accident: ಮಂಡ್ಯದಲ್ಲಿ 2 ಎಕರೆ ಕಬ್ಬಿನ ಗದ್ದೆಗೆ ಹಬ್ಬಿದ ಬೆಂಕಿ: ಹುಬ್ಬಳ್ಳಿ ವಿಮಾನ‌ ನಿಲ್ದಾಣದಲ್ಲಿ ಅಗ್ನಿ ಅವಘಡ

Fire breaks out in 2 acres of sugarcane field in Mandya, fire breaks out at Hubballi airport

Fire breaks out in 2 acres of sugarcane field in Mandya, fire breaks out at Hubballi airport

ಮಂಡ್ಯ/ಹುಬ್ಬಳ್ಳಿ/ಶಿರಸಿ: ಮಂಡ್ಯದ ಮಳವಳ್ಳಿಯ ಹಲಗೂರು ಗ್ರಾಮದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ (Fire Accident) ಕಬ್ಬಿನ ಗದ್ದೆ ಬೆಂಕಿಗೆ ಆಹುತಿಯಾಗಿದೆ. ಸುಮಾರು ಎರಡೂವರೆ ಎಕರೆ ಕಬ್ಬು ನಾಶವಾಗಿದೆ. ಚಂದ್ರಪ್ಪ ಎಂಬುವವರು ಎರಡೂವರೆ ಎಕರೆ ಜಮೀನಿನಲ್ಲಿ ಕಬ್ಬು ಬೆಳೆದಿದ್ದರು.

ಸುಟ್ಟು ಕರಕಲಾದ ಕಬ್ಬು

ಜಮೀನಿನಲ್ಲಿ ಸ್ವಲ್ಪ ಪ್ರಮಾಣದ ಕಬ್ಬು ಕಟಾವು ಮಾಡಿಸಿ, ಉಳಿದ ಎರಡು ಎಕರೆ ಕಬ್ಬನ್ನು ಹಾಗೆಯೇ ಬಿಟ್ಟಿದ್ದರು. ಆದರೆ ವಿದ್ಯುತ್‌ ಅವಘಡದಿಂದ ಕಬ್ಬು ಸುಟ್ಟು ಕರಕಲಾಗಿದೆ. ಸುಮಾರು ಒಂದೂವರೆ ಲಕ್ಷ ರೂಪಾಯಿ ನಷ್ಟವಾಗಿದ್ದು, ರೈತ ಚಂದ್ರಪ್ಪ ಕಂಗಾಲಾಗಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಿಂದಿಸಿದ್ದು, ಪರಿಹಾರಕ್ಕಾಗಿ ತಾಲೂಕು ಆಡಳಿತಕ್ಕೆ ಮನವಿ ಮಾಡಿದ್ದಾರೆ.

ಮೃತ ಜೂಜೆ ಸಿದ್ದಿ

ಕರೆಂಟ್‌ ಶಾಕ್‌ಗೆ ಫಾರೆಸ್ಟ್‌ ವಾಚರ್‌ ಸಾವು

ಕಾಡಿಗೆ ತಗುಲಿದ್ದ ಬೆಂಕಿ ನಂದಿಸಲು ಹೋಗಿ ವಿದ್ಯುತ್‌ ಆಘಾತದಿಂದ ಫಾರೆಸ್ಟ್‌ ವಾಚರ್‌ ಒಬ್ಬರು ಮೃತಪಟ್ಟಿರುವ ಘಟನೆ ಶಿರಸಿ ತಾಲೂಕಿನ ತೆಲಂಗಾರದಲ್ಲಿ ನಡೆದಿದೆ. ಜೂಜೆ ಸಿದ್ದಿ ಮೃತ ದುರ್ದೈವಿ. ಭಾನುವಾರ ಸಂಜೆ 7.30ರ ಸುಮಾರಿಗೆ ಕಾಡಿನಲ್ಲಿ ಹೈಟೆನ್ಷನ್‌ ವಿದ್ಯುತ್‌ ಲೈನ್‌ ಹರಿದು ಬಿದ್ದ ಕಾರಣ ಬೆಂಕಿ ಕಾಣಿಸಿಕೊಂಡಿತ್ತು.

ಹೀಗಾಗಿ ಕಾಲಿನಿಂದ ಬೆಂಕಿಯನ್ನು ನಂದಿಸುತ್ತಿದ್ದ ವೇಳೆ ತಿಳಿಯದೇ ವಿದ್ಯುತ್‌ ಲೈನ್‌ ಮೇಲೆ ಕಾಲಿಟ್ಟ ಕಾರಣ ದೇಹದಲ್ಲಿ ವಿದ್ಯುತ್‌ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸೋಮವಾರ ತಾಲೂಕಾಸ್ಪತ್ರೆಗೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಇದನ್ನೂ ಓದಿ: Bengaluru Murder case: ಅಪ್ಪನ ಕೊಲೆಗೆ 1 ಕೋಟಿ ರೂ. ಸುಪಾರಿ ಕೊಟ್ಟ ಮಗ ಸೇರಿ ಆರೋಪಿಗಳು ಅರೆಸ್ಟ್‌

ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಬೆಂಕಿ

ಹುಬ್ಬಳ್ಳಿ ವಿಮಾನ‌ ನಿಲ್ದಾಣದಲ್ಲಿ ಅಗ್ನಿ ಅವಘಡ

ಹುಬ್ಬಳ್ಳಿ ವಿಮಾನ‌ ನಿಲ್ದಾಣದ ರನ್ ವೇ ಸುತ್ತಲಿನ ಜಾಗದಲ್ಲಿ ಬೆಳದಿದ್ದ ಹುಲ್ಲು, ಗಿಡಗಳಿಗೆ ಬೆಂಕಿ ತಗುಲಿದ್ದು, ಕ್ಷಣಾರ್ಧದಲ್ಲಿಯೇ ಧಗಧಗನೆ ಹೊತ್ತಿ ಉರಿದಿದೆ. ಕಸ ಸುಡಲು ಹಚ್ಚಿದ್ದ ಬೆಂಕಿಯು ಒಣ ಹುಲ್ಲಿಗೆ ಆವರಿಸಿದೆ. ಪರಿಣಾಮ ವಿಮಾನ ನಿಲ್ದಾಣದ ಸುತ್ತಲು ದಟ್ಟಣೆಯ ಹೊಗೆ ಆವರಿಸಿದೆ. ಮುಗಿಲೆತ್ತರಕ್ಕೆ ಆವರಿಸಿದ ಹೊಗೆಯಿಂದ ವಿಮಾನಗಳ ಲ್ಯಾಂಡಿಂಗ್‌ಗೆ ತೊಂದರೆ ಉಂಟಾಯಿತು. ಅಗ್ನಿಶಾಮಕ‌ ಸಿಬ್ಬಂದಿ ಬೆಂಕಿ‌ ನಂದಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.

ರಾಜ್ಯದ ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version