Site icon Vistara News

Fire Accident: ಗ್ಯಾಸ್‌ ಸಿಲಿಂಡರ್‌ ಸೋರಿಕೆ, ನಾಲ್ವರಿಗೆ ಗಾಯ ; ಮೈಸೂರು ಹೈವೆಯಲ್ಲಿ ಹೊತ್ತಿ ಉರಿದ ಕಾರು

Cylinder Blast at belgavi

ಬೆಳಗಾವಿ: ಗ್ಯಾಸ್‌ ಸಿಲಿಂಡರ್‌ ಸೋರಿಕೆ (Gas cylinder leak) ಆಗಿದ್ದನ್ನು ಗಮನಿಸದೆ ಲೈಟರ್‌ ಆನ್‌ ಮಾಡಿದ ಪರಿಣಾಮ ನಾಲ್ವರಿಗೆ ಬೆಂಕಿ ತಗುಲಿದೆ. ಬೆಳಗಾವಿಯ ಸುಭಾಷ್ ಗಲ್ಲಿಯಲ್ಲಿ ಶನಿವಾರ (ಜು.1) ಬೆಳಗಿನ ಜಾವ ಘಟನೆ ನಡೆದಿದೆ. ಸಾರಿಗೆ ನೌಕರ ಮಂಜುನಾಥ ಅಥಣಿ, ಪತ್ನಿ ಲಕ್ಷ್ಮೀಗೆ ಗಂಭೀರ ಗಾಯವಾಗಿದ್ದು, ಮಕ್ಕಳಾದ ವೈಷ್ಣವಿ (13), ಸಾಯಿಪ್ರಸಾದ್‌(10)ಗೆ ಸಣ್ಣಪುಟ್ಟ ಗಾಯಗಳಾಗಿವೆ.

ಲಕ್ಷ್ಮೀ ಅವರು ಎಂದಿನಂತೆ ಬೆಳಗ್ಗೆ ಎದ್ದು ಟೀ ಮಾಡಲು ಹೋಗಿದ್ದಾರೆ. ಆದರೆ ಗ್ಯಾಸ್‌ ಸೋರಿಕೆಯಾಗದನ್ನು ಗಮನಿಸದೆ ಲೈಟರ್ ಆನ್ ಮಾಡಿದ್ದಾರೆ. ಈ ವೇಳೆ ಒಮ್ಮೆಲೆ ಮನೆಯಲ್ಲಿ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ತಗುಲಿ ಪತಿ-ಪತ್ನಿ ಗಂಭೀರ ಗಾಯಗೊಂಡಿದ್ದಾರೆ. ಅಕ್ಕ-ಪಕ್ಕದ ನಿವಾಸಿಗಳು ಕೂಡಲೇ ನಾಲ್ವರನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಈ ಅವಘಡದಿಂದ ಅಡುಗೆ ಮನೆಯಲ್ಲಿದ್ದ ಕಿಟಿಕಿಗಳೆಲ್ಲವೂ ಪುಡಿ ಪುಡಿಯಾಗಿದ್ದು, ಕೆಲ ವಸ್ತುಗಳೆಲ್ಲ ಬೆಂಕಿಗಾಹುತಿಯಾಗಿದೆ. ಸ್ಥಳಕ್ಕೆ ಮಾಳಮಾರುತಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಧಗ ಧಗನೆ ಹೊತ್ತಿ ಉರಿದ ಕಾರು

ತಾಂತ್ರಿಕ ದೋಷದಿಂದ ಹೊತ್ತಿ ಉರಿದ ಕಾರು

ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲೇ ಹೊತ್ತಿ ಉರಿದಿದೆ. ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪಿರಾನ್‌ ಎಂಬುವವರು ಬೆಂಗಳೂರಿನಿಂದ ಮೈಸೂರಿಗೆ ಮಕ್ಕಳ ಜತೆ ತೆರಳುತ್ತಿದ್ದರು.

ಬೆಂಕಿ ನಂದಿಸಿದ ಅಗ್ನಿಶಾಮಕ ಸಿಬ್ಬಂದಿ

ಇದನ್ನೂ ಓದಿ: Suicide Case : ಸ್ಮಶಾನದ ಮರದಲ್ಲಿ ನೇತಾಡುತ್ತಿತ್ತು ಕೊಳೆತ ಶವ!

ಶ್ರೀರಂಗಪಟ್ಟಣದ ಗೌರಿಪುರ ಗೇಟ್ ಸಮೀಪಿಸುತ್ತಿದ್ದಂತೆ ಕಾರಿನ ಇಂಜಿನ್ ಭಾಗದಲ್ಲಿ ಹೊಗೆ ಕಾಣಿಸಿಕೊಂಡಿದೆ. ಇದನ್ನೂ ಗಮನಿಸಿದ ಪಿರಾನ್‌ ಕೂಡಲೇ ಕಾರನ್ನು ನಿಲ್ಲಿಸಿ, ಮಕ್ಕಳನ್ನು ತಕ್ಷಣವೇ ಕೆಳಗೆ ಇಳಿಸಿದ್ದಾರೆ. ಆ ನಂತರ ಕಾರು ಹೊತ್ತಿ ಉರಿದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಇಲ್ಲ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದು, ಬೆಂಕಿ ನಂದಿಸಿದ್ದಾರೆ.

ಬೆಂಕಿಗಾಹುತಿಯಾದ ಕಾರು

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version