ಹುಬ್ಬಳ್ಳಿ: ಇಲ್ಲಿನ ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿ ಸ್ಪಾರ್ಕ್ ಕ್ಯಾಂಡಲ್ ತಯಾರಿಕಾ ಘಟಕದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, 9 ಜನರಿಗೆ ಗಾಯವಾಗಿದೆ. ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇತ್ತ ಮೈಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಕಾರ್ಖಾನೆಯ ಕಾರ್ಮಿಕ ಮಹಿಳೆಯರು ಒದ್ದಾಡಿದರು. ಅಗ್ನಿಶಾಮಕ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ.
ಅವಘಡ ಸ್ಥಳಕ್ಕೆ ಪಶ್ಚಿಮ ಕ್ಷೇತ್ರ ಶಾಸಕ ಅರವಿಂದ್ ಬೆಲ್ಲದ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಶಾಸಕರು, ಈ ಫ್ಯಾಕ್ಟರಿ ಕೇವಲ 15 ದಿನದ ಹಿಂದಷ್ಟೇ ಆರಂಭವಾಗಿದ್ದು, ಅನಧಿಕೃತವೆಂದು ತಿಳಿದು ಬಂದಿದೆ. ಯಾರಿಗೂ ತಿಳಿಯದೇ ಆರಂಭ ಮಾಡಲಾಗಿದೆ. ಫ್ಯಾಕ್ಟರಿ ಮಾಲೀಕ ತಬಸ್ಸುಮ್ ಶೇಕ್ ಪ್ರಕರಣ ಬಳಿಕ ಹೆದರಿ ತಲೆ ಮರೆಸಿಕೊಂಡಿದ್ದಾನೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದ್ದು, ಸ್ಥಳೀಯರ ಸಮಯ ಪ್ರಜ್ಞೆಯಿಂದ ದೊಡ್ಡ ಅಪಾಯ ತಪ್ಪಿದೆ. ಹಲವರ ಪ್ರಾಣ ಉಳಿದಿದೆ. ಘಟನೆ ಕುರಿತಂತೆ ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿದೆ ಎಂದು ತಿಳಿಸಿದರು.
ಇದನ್ನೂ ಓದಿ | ಬಿಎಂಟಿಸಿ ಬಸ್ ಹೊತ್ತಿ ಉರಿದದ್ದಕ್ಕೆ ಶಿಕ್ಷೆ: ನೌಕರರ ಬುಡಕ್ಕೆ ಬೆಂಕಿ