ಕೊಪ್ಪಳ: ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ತ್ರಿವಳಿ ತಲಾಕ್ ಪ್ರಕರಣವೊಂದು ದಾಖಲಾಗಿದೆ. ಕೊಪ್ಪಳದ ಮಹಿಳಾ ಪೊಲೀಸ್ ಠಾಣೆಯಲ್ಲಿ ಖಾಲೀದಾ ಬೇಗಂ ಎಂಬುವವರು ಪತಿ ಸೈಯ್ಯದ್ ವಾಹೀದ್ ವಿರುದ್ಧ ಸೆ.೧೮ ರಂದು ತ್ರಿವಳಿ ತಲಾಕ್ ಪ್ರಕರಣ ದಾಖಲಿಸಿದ್ದಾರೆ.
ಕೊಪ್ಪಳದ ಖಾಲೀದಾ ಬೇಗಂ, ಗಜೇಂದ್ರಗಡ ಮೂಲದ ಪತಿ ಸೈಯ್ಯದ್ ವಾಹಿದ್ ಅತ್ತಾರ ಎಂಬಾತನ ಜತೆ ವಿವಾಹವಾಗಿದ್ದರು. ಗಂಡ ಹಾಗೂ ಅವರ ಕುಟುಂಬಸ್ಥರು ಕಿರುಕುಳ ನೀಡುತ್ತಿರುವ ಕುರಿತಂತೆ ಖಾಲೀದಾ ಬೇಗಂ ಅವರು ೨೦೨೧ರಲ್ಲಿ ಕೊಪ್ಪಳ ನಗರದಲ್ಲಿರುವ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈಗ ಮತ್ತೊಮ್ಮೆ ದೂರು ದಾಖಲಾಗಿದೆ.
ಇದನ್ನೂ ಓದಿ | ಪೊಲೀಸ್ ನಿಯಮಾವಳಿಯಲ್ಲಿ ಮೇಲ್ಮನವಿಗೆ ಅವಕಾಶ ಇಲ್ಲ: ಡಿಜಿಪಿ ವಿರುದ್ಧ ಸಿಡಿದೆದ್ದ ಅಧಿಕಾರಿ, ಆಡಿಯೊ ವೈರಲ್
ಪ್ರಕರಣದ ಕುರಿತಂತೆ ಕೊಪ್ಪಳದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಸೆ.೧೫ ರಂದು ನ್ಯಾಯಾಲಯಕ್ಕೆ ವಿಚಾರಣೆ ಹಿನ್ನೆಲೆಯಲ್ಲಿ ಖಾಲೀದಾ ಬೇಗಂ ತಂದೆಯೊಂದಿಗೆ ಬಂದಿದ್ದಾಗ, ಪತಿ ಸಯ್ಯದ್ ವಾಹೀದ್ ಅತ್ತಾರ ಷರಿಯತ್ ಪ್ರಕಾರ ನಾನು ನಿನಗೆ ತಲಾಕ್ ನೀಡುತ್ತೇನೆ ಎಂದು ಮೂರು ಬಾರಿ ತಲಾಕ್ ಹೇಳಿ, ನನಗೂ ನಿನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿ ಕೊಲೆ ಬೆದರಿಕೆ ಹಾಕಿದ್ದಾರೆ.
ಹೀಗಾಗಿ ಖಾಲೀದಾ ಬೇಗಂ ಸೆ.೧೮ ರಂದು ಕೊಪ್ಪಳದ ಮಹಿಳಾ ಪೊಲೀಸ್ ಠಾಣೆಯಲ್ಲಿ ಮತ್ತೊಮ್ಮೆ ಗಂಡನ ವಿರುದ್ಧ ತ್ರಿವಳಿ ತಲಾಕ್ ದೂರು ದಾಖಲಿಸಿದ್ದಾರೆ. ಮುಸ್ಲಿಂ ಮಹಿಳೆಯರ ಮದುವೆ ರಕ್ಷಣೆ ಕಾಯ್ದೆ ಅಡಿಯಲ್ಲಿ ಸಯ್ಯದ್ ವಾಹೀದ್ ಅತ್ತಾರ ವಿರುದ್ಧ ದೂರು ದಾಖಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ | ಡಿಕೆಶಿಗೆ ಡಬಲ್ ಸಂಕಷ್ಟ: ಒಂದು ಕಡೆ ಇ.ಡಿ ಗ್ರಿಲ್, ಇನ್ನೊಂದು ಕಡೆ ಐಟಿ ತನಿಖೆಗೆ ಸುಪ್ರೀಂಕೋರ್ಟ್ ಅಸ್ತು