Site icon Vistara News

BBMP : ಬಿಬಿಎಂಪಿಯ 5 ಕಾಮಗಾರಿಗಳ ಜನ್ಮ ಜಾಲಾಡಲು ಐವರು IAS ಅಧಿಕಾರಿಗಳ ನೇಮಕ

BBMP investigation

Govt. orders for investigation into BBMP works

ಬೆಂಗಳೂರು: ಬಿಜೆಪಿ ಸರ್ಕಾರದ (BJP Government) ಅವಧಿಯಲ್ಲಿ ಬಿಬಿಎಂಪಿಯಲ್ಲಿ (BBMP) ನಡೆದ ಐದು ಕಾಮಗಾರಿಗಳ ಮೇಲೆ ತನಿಖಾಸ್ತ್ರ ಪ್ರಯೋಗಿಸಲಾಗಿದೆ. ಇದಕ್ಕಾಗಿ ಐದು ಸಮಿತಿಗಳನ್ನು (Five committees) ನೇಮಕ ಮಾಡಲಾಗಿದ್ದು, ಐದು ಜನ ಖಡಕ್‌ ಐಎಎಸ್‌ (Five IAS officers) ಅಧಿಕಾರಿಗಳ ತಂಡ ಎಲ್ಲ ಕಾಮಗಾರಿಗಳ ಜನ್ಮ ಜಾಲಾಡಲಿದೆ.

ವಿಧಾನಸಭಾ ಚುನಾವಣೆಗೂ (Karnataka Assembly Elections 2023) ಮುನ್ನ ಕಾಂಗ್ರೆಸ್‌ ಬಿಜೆಪಿ ಸರ್ಕಾರದ ವಿರುದ್ಧ 40% ಕಮಿಷನ್‌ ಅಸ್ತ್ರವನ್ನು ಪ್ರಯೋಗಿಸಿತ್ತು. ಬಿಜೆಪಿ ಕಾಲದಲ್ಲಿ ಆದೇಶವಾದ ಎಲ್ಲ ಸಂಶಯಿತ ಕಾಮಗಾರಿಗಳ ಬಗ್ಗೆ ತನಿಖೆ ನಡೆಸುವುದಾಗಿ ಪ್ರಕಟಿಸಿತ್ತು. ಇದೀಗ ಅದರ ಮೊದಲನೇ ಹಂತವಾಗಿ ಬಿಬಿಎಂಪಿಯಲ್ಲಿ ಕೈಗೊಳ್ಳಲಾದ ಕಾಮಗಾರಿಗಳ ತನಿಖೆಗೆ ಸರ್ಕಾರ ಸಮಿತಿಗಳನ್ನು ರಚನೆ ಮಾಡಿದೆ. ಪ್ರತಿ ತನಿಖಾ ಸಮಿತಿಗೂ ಒಬ್ಬ ಐಎಎಸ್ ಅಧಿಕಾರಿ ಸೇರಿದಂತೆ 10-13 ಜನ ಅಧಿಕಾರಿಗಳ ತಂಡ ರಚನೆ ಮಾಡಿದೆ. ವಿಶೇಷವೆಂದರೆ, ಬಿಜೆಪಿ ಸರ್ಕಾರವಿದ್ದಾಗ ಪವರ್ ಲೆಸ್ ಆಗಿದ್ದ ಅಧಿಕಾರಿಗಳೇ ಈಗ ತನಿಖಾ ತಂಡದ ಅಧ್ಯಕ್ಷರಾಗಿದ್ದಾರೆ.

ಕಾಂಗ್ರೆಸ್ ಸರ್ಕಾರ ಅಧಿಕಾರ ಬಂದ ನಂತರ ಆರ್‌ ಆರ್‌ ನಗರದಲ್ಲಿ ಕಾಮಗಾರಿ ಅನುಷ್ಠಾನ ಮಾಡದ ಹಾಗೂ ಕಳಪೆ ಕಾಮಗಾರಿಗೆ ಬಿಲ್ ಬರೆಯಲಾಗಿದೆ ಎಂಬ ಆರೋಪದಡಿ 8 ಜನ ಎಂಜಿನಿಯರ್‌ಗಳನ್ನು ಸಸ್ಪೆಂಡ್ ಮಾಡಲಾಗಿತ್ತು. ಮುಂದುವರಿದಂತೆ ಬಿಬಿಎಂಪಿನಲ್ಲಿ ಕೆಆರ್ ಐಡಿಎಲ್ ಕೈಗೊಂಡ ಕಾಮಗಾರಿಗಳ ಬಗ್ಗೆ ತನಿಖೆ ನಡೆಸಲು ಪ್ರಾದೇಶಿಕ ಆಯುಕ್ತರಿಗೆ ಆದೇಶ ನೀಡಲಾಗಿತ್ತು. ಇದೀಗ ಇದೆಲ್ಲದರ ನಡುವೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಮತ್ತೊಂದು ಆದೇಶ ಮಾಡಿದ್ದಾರೆ.

ತನಿಖೆಗೆ ಮಾನದಂಡಗಳೇನು?

2019ರಿಂದ ನೀಡಲಾದ ಎಲ್ಲಾ ಟೆಂಡರ್, ಬಿಲ್ ಹಾಗೂ ಕಾಮಗಾರಿಗಳ ಸಂಪೂರ್ಣ ತನಿಖೆಗೆ ಆದೇಶಗೆ ಸಮಿತಿ ರಚಿಸಿದ ಟಿಪ್ಪಣಿ ವಿಸ್ತಾರ ನ್ಯೂಸ್ ಗೆ ಸಿಕ್ಕಿದೆ. ಬಿಜೆಪಿ ಸರ್ಕಾರವಿದ್ದಾಗ ಸ್ವಪಕ್ಷದ ಕ್ಷೇತ್ರಗಳಿಗೆ ಅನಗತ್ಯ ಯೋಜನೆಗಳಿಗೆ ಮನಸೋ ಇಚ್ಛೆ ಅನುದಾನ ನೀಡಿದ್ದು ತಮಗೆ ಬೇಕಾದವರಿಗೆ ಟೆಂಡರ್ ನೀಡಿ ಅವ್ಯವಹಾರ ಮಾಡಿದ್ದಾರೆ. ಕಾಮಗಾರಿ ಮಾಡದೆ ಬಿಲ್ ನೀಡಲಾಗಿದೆ ಎಂದು ಆರೋಪದಡಿ ತನಿಖೆ ನಡೆಸಲು ತನಿಖಾ ತಂಡಗಳನ್ನು ರಚನೆ ಮಾಡಿದ್ದಾರೆ.

ತನಿಖಾ ತಂಡಗಳ ಅಧ್ಯಕ್ಷರು ಯಾರೆಲ್ಲ?

ತನಿಖಾ ತಂಡ 1. ಘನತ್ಯಾಜ್ಯ ನಿರ್ವಹಣೆ ಕಾಮಗಾರಿಗಳ ಬಗ್ಗೆ ತನಿಖೆ

ಬೆಂಗಳೂರಿನಲ್ಲಿ ಘನ ತ್ಯಾಜ್ಯ ನಿರ್ವಹಣೆಯನ್ನು ಕೋಟ್ಯಂತರ ರೂಪಾಯಿಗೆ ಟೆಂಡರ್‌ ನೀಡಲಾಗಿದೆ. ಇದರ ಬಗ್ಗೆ ಸಂಪೂರ್ಣ ತನಿಖೆ ಮಾಡಲು ಸಮಿತಿಗೆ ಐಎಎಸ್ ಅಧಿಕಾರಿ ವಿ. ರಶ್ಮಿ ಮಹೇಶ್ ಅಧ್ಯಕ್ಷ ಮಾಡಲಾಗಿದೆ‌. ನಿವೃತ್ತ ಮುಖ್ಯ ಅಭಿಯಂತರ ಕ್ಯಾಫ್ಟನ್ ದೊಡ್ಡಿಹಾಳ್ ಸದಸ್ಯರಾಗಿದ್ದಾರೆ.

ತನಿಖಾ ತಂಡ 2. ರಸ್ತೆ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ತನಿಖೆ

ತನಿಖಾ ತಂಡದ ಅಧ್ಯಕ್ಷತೆಯನ್ನು ಐಎಎಸ್ ಅಧಿಕಾರಿ ಹರ್ಷ ಗುಪ್ತ ಅವರಿಗೆ ನೀಡಲಾಗಿದೆ. ಈ ತಂಡ
ರಸ್ತೆ ಅಭಿವೃದ್ಧಿಗಾಗಿ ಇಲ್ಲಿವರೆಗೂ ಕರೆಲಾದ ಟೆಂಡರ್, ಟೆಂಡರ್ ಯಾರಿಗೆ ನೀಡಲಾಗಿದೆ, ಕಾಮಗಾರಿ ಎಷ್ಟಾಗಿದೆ ಎಂದು ತನಿಖೆ ಮಾಡಲಿದೆ.

ತನಿಖಾ ತಂಡ 3. ಬೃಹತ್ ನೀರುಗಾಲುವೆ ಕಾಮಗಾರಿಗಳ ಬಗ್ಗೆ ತನಿಖೆ

ಐಎಎಸ್ ಅಧಿಕಾರಿ ಮನೀಶ್ ಮೌದ್ಗಿಲ್ ಈ ತನಿಖಾ ತಂಡದ ಮುಂದಾಳತ್ವ ವಹಿಸಲಿದ್ದು ರಾಜಕಾಲುವೆ ಹೆಸರಲ್ಲಿ ಏನೆಲ್ಲ ಅಕ್ರಮಗಳು ನಡೆದಿದೆ ಎಂದು ತನಿಖೆ ಮಾಡಲಿದ್ದಾರೆ.

ತನಿಖಾ ತಂಡ 4. ಕೆರೆ ಅಭಿವೃದ್ಧಿ ಕಾಮಗಾರಿ\ ಓಎಫ್‌ಸಿ ಅನುಮತಿ ಬಗ್ಗೆ ತನಿಖೆ

ಈ ಸಮಿತಿಗೆ ಐಎಎಸ್ ಅಧಿಕಾರಿ ವಿಶಾಲ್ ಆರ್ ಅಧ್ಯಕ್ಷರಾಗಿ ನೇಮಿಸಿದ್ದು, 10-13 ಜನ ಅಧಿಕಾರಿಗಳ ತಂಡ ಇರಲಿದೆ. 198 ವಾರ್ಡ್ ನಲ್ಲಿರುವ ಕೆರೆಗಳ ಅಭಿವೃದ್ಧಿ ಹೆಸರಲ್ಲಿ ಮಾಡಲಾದ ಕಾಮಗಾರಿ ಬಗ್ಗೆ ತನಿಖೆ ನಡೆಯಲಿದೆ.

ತನಿಖಾ ತಂಡ 5. ವಾರ್ಡ್ ಮಟ್ಟದ ಕಾಮಗಾರಿಗಳ ಬಗ್ಗೆ ತನಿಖೆ

ರಾಜೇಂದ್ರ ಕುಮಾರ್ ಕಠಾರಿಯಾ ಅಧ್ಯಕ್ಷ.

ತನಿಖಾ ತಂಡಗಳು 2019 ರಿಂದ ಇದೂವರೆಗೂ ಅಂದ್ರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೆ ತರಲಾದ ಹಾಗೂ ಅನುಷ್ಠಾನ ಮಾಡಲಾದ ಎಲ್ಲಾ ಕಾಮಗಾರಿಗಳ ಬಗ್ಗೆ ತನಿಖೆ ಮಾಡಿ 30 ದಿನದೊಳಗೆ ವರದಿ ನೀಡಲಿದೆ.

ಇದನ್ನೂ ಓದಿ: Karnataka Politics: ಬಿಜೆಪಿ ಕಾಲದ ಹಗರಣಗಳ SIT ತನಿಖೆ?; ಅಧಿವೇಶನದಲ್ಲಿ ಪ್ರತಿಪಕ್ಷ ಕಟ್ಟಿ ಹಾಕಲು ಪ್ಲ್ಯಾನ್‌?

Exit mobile version