Site icon Vistara News

Self Harming : ಕೋಲಾರದಲ್ಲಿ ಅರಣ್ಯ ಒತ್ತುವರಿ ಗಲಾಟೆ; ರೈತ ಪತಿ ಬಂಧನ ಖಂಡಿಸಿ ವಿಷ ಸೇವಿಸಿದ ಪತ್ನಿಯರು!

womens consume poison kolar and get treatment in hospital

ಕೋಲಾರ: ರಾಜ್ಯದಲ್ಲಿ ಅರಣ್ಯ ಇಲಾಖೆ (Forest Department) ಹಾಗೂ ರೈತರ ಸಂಘರ್ಷ ಮುಂದುವರಿದಿದೆ. ಅರಣ್ಯ ಒತ್ತುವರಿ (Forest encroachment) ತೆರವು ಕಾರ್ಯಾಚರಣೆ ವೇಳೆ ಅಡ್ಡಿಪಡಿಸಿದ, ಹಲ್ಲೆ ನಡೆಸಿದ ಆರೋಪದ ಮೇಲೆ 19 ಜನರನ್ನು ಪೊಲೀಸರು (Farmers Arrest) ಬಂಧಿಸಿದ್ದರು. ಬಂಧನಕ್ಕೊಳಗಾದವರಲ್ಲಿ ಇಬ್ಬರು ರೈತರ ಪತ್ನಿಯರು ಭಾನುವಾರ (ಸೆಪ್ಟೆಂಬರ್‌ 10) ವಿಷ ಸೇವಿಸಿ ಆತ್ಮಹತ್ಯೆಗೆ (Self Harming) ಯತ್ನಿಸಿದ್ದಾರೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನಾರಮಾಕಲಹಳ್ಳಿ ಹಾಗೂ ಪಾಳ್ಯ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನಾರಮಾಕಲಹಳ್ಳಿ ಗ್ರಾಮದ ರೈತ ಮಹಿಳೆ ಲಕ್ಷ್ಮೀದೇವಮ್ಮ ವೆಂಕಟರೆಡ್ಡಿ, ಪಾಳ್ಯ ಗ್ರಾಮದ ರೈತ ಮಹಿಳೆ ಶಾಮಲಾ ಗೋಪಾಲರೆಡ್ಡಿ ಅವರು ವಿಷ ಸೇವನೆ ಮಾಡಿದ ಮಹಿಳೆಯರಾಗಿದ್ದಾರೆ.

ಇದನ್ನೂ ಓದಿ: Lok Sabha Election 2024 : ಸೀಟು ಹಂಚಿಕೆ ಚರ್ಚೆ ಆಗಿಲ್ಲ; ಸುಮಲತಾ ʼಅತಂತ್ರʼದ ಬಗ್ಗೆ ಎಚ್‌ಡಿಕೆ ಹೇಳಿದ್ದೇನು?

ತಮ್ಮ ಪತಿಯನ್ನು ಪೊಲೀಸರು ಬಂಧಿಸಿದ್ದನ್ನು ಖಂಡಿಸಿ ರೈತ ಮಹಿಳೆಯರು ವಿಷ ಸೇವನೆ ಮಾಡಿದ್ದಾರೆ. ಈದೀಗ ಸರ್ಕಾರದ ಕ್ರಮಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ವಿಷ ಸೇವನೆ ಮಾಡಿರುವ ಮಹಿಳೆಯರನ್ನು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಅವರಿಬ್ಬರೂ ಅಪಾಯದಿಂದ ಪಾರಾಗಿದ್ದಾರೆ.

ಜೆಸಿಬಿ ಪುಡಿಗಟ್ಟಿದ್ದ ರೈತರು

ಅರಣ್ಯ ಒತ್ತುವರಿ ಕಾರ್ಯಾಚರಣೆ ಸ್ಥಳಕ್ಕೆ ಕೋಲಾರ ಸಂಸದ ಮುನಿಸ್ವಾಮಿ ಭೇಟಿ ನೀಡಿದ್ದರು. ಈ ವೇಳೆ ರೈತರು, ರೈತ ಮಹಿಳೆಯರು ಸೇರಿದಂತೆ ಹಲವು ಮುಖಂಡರು ಆಕ್ರೋಶಗೊಂಡಿದ್ದರು. ಅರಣ್ಯ ಒತ್ತುವರಿ ಜಾಗವನ್ನು ತೆರವು ಮಾಡುವ ವೇಳೆ ರೈತರೆಲ್ಲರು ಸೇರಿ ಜೆಸಿಬಿಗಳ ಮೇಲೆ ದಾಳಿ ಮಾಡಿದ್ದರು. ಕಲ್ಲು, ದೊಣ್ಣೆ ಯಿಂದ ಹೊಡೆದು ಪುಡಿಪುಡಿ ಮಾಡಿದ್ದರು.

19 ಜನರ ಬಂಧನ

ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಹಾಗೂ ಜೆಸಿಬಿ ಮಾಲೀಕರಿಂದ 3 ಎಫ್‌ಐಆರ್ ದಾಖಲು ಮಾಡಲಾಗಿತ್ತು. ಎಫ್‌ಐಆರ್‌ ದಾಖಲಾಗುತ್ತಿದ್ದಂತೆ ರಾತ್ರೋ ರಾತ್ರಿ 19 ಜನರನ್ನು ಪೊಲೀಸರು ಬಂಧಿಸಿದ್ದರು. ಬಂಧಿತರನ್ನು ಹೊರ ಜಿಲ್ಲೆಯ ಜೈಲಿಗೆ ಸ್ಥಳಾಂತರ ಮಾಡಿದ್ದರು.

ಇದನ್ನೂ ಓದಿ: ‌CM Siddaramaiah : ಸಿದ್ದರಾಮಯ್ಯ ವಿರುದ್ಧ ಅಹಿಂದ ಪಾಲಿಟಿಕ್ಸ್; ಸೆಡ್ಡು ಹೊಡೆದ ಬಿ.ಕೆ. ಹರಿಪ್ರಸಾದ್!

ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಭೂಮಿಯೂ ಇಲ್ಲ, ಪತಿಯೂ ಇಲ್ಲ ಎಂದು ನೊಂದ ರೈತ ಮಹಿಳೆಯರಿಬ್ಬರು ವಿಷ ಸೇವನೆ ಮಾಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Exit mobile version