Site icon Vistara News

Karnataka Elections 2023: ಮಧುಗಿರಿ ಮತದಾರರನ್ನು ಧರ್ಮಸ್ಥಳ ಪ್ರವಾಸಕ್ಕೆ ಕರೆದೊಯ್ದಿದ್ದ 4 ಬಸ್‌ ಜಪ್ತಿ

Four buses carrying voters from Madhugiri to Dharmasthala on a tour of Dharmasthala seized Karnataka Elections 2023 updates

ತುಮಕೂರು: ವಿಧಾನಸಭಾ ಚುನಾವಣೆ (Karnataka Elections 2023) ಹಿನ್ನೆಲೆಯಲ್ಲಿ ಮತದಾರರನ್ನು ಸೆಳೆಯಲು ನಾನಾ ತಂತ್ರಗಳನ್ನು ಹೆಣೆಯಲಾಗುತ್ತಿದೆ. ಇದೇ ವೇಳೆ ಜೆಡಿಎಸ್ ವತಿಯಿಂದ ಮತದಾರರಿಗೆ ಮತ್ತು ಮುಖಂಡರಿಗೆ ಧರ್ಮಸ್ಥಳ ಸೇರಿದಂತೆ ಸುತ್ತಮುತ್ತಲ ಪುಣ್ಯಕ್ಷೇತ್ರಗಳಿಗೆ ಪ್ರವಾಸ ಭಾಗ್ಯವನ್ನು ಕಲ್ಪಿಸಲಾಗಿತ್ತು. ಈಗ ಪ್ರವಾಸ ಮುಗಿಸಿ ವಾಪಸಾಗುವಾಗ ನಾಲ್ಕು ಬಸ್‌ ಅನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದು ಜಪ್ತಿ ಮಾಡಿದ್ದಾರೆ.

ಧರ್ಮಸ್ಥಳ ಪ್ರವಾಸ ಮುಗಿಸಿ ವಾಪಸ್ ಆಗುತ್ತಿದ್ದ ಬಸ್‌ಗಳನ್ನು ಮಧುಗಿರಿ ತಾಲೂಕಿನ ಗಿಡದಾಗಲಹಳ್ಳಿ ಸಮೀಪ ಚುನಾವಣಾಧಿಕಾರಿಗಳು ಜಪ್ತಿ ಮಾಡಿದ್ದಾರೆ. ಒಟ್ಟು ನಾಲ್ಕು ಬಸ್‌ಗಳನ್ನು ಜಪ್ತಿ ಮಾಡಿದ್ದಾರೆ. ಮಧುಗಿರಿ ಜೆಡಿಎಸ್ ಅಭ್ಯರ್ಥಿ ವೀರಭದ್ರಯ್ಯ ಅವರಿಂದ ಪ್ರವಾಸ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಈ ಸಂಬಂಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಕೆಯಾಗಿತ್ತು.

ಇದನ್ನೂ ಓದಿ: Karnataka Elections : ಟಿಕೆಟ್‌ ಆಕಾಂಕ್ಷಿಗಳ ಪ್ರತಿಭಟನೆ ಭೀತಿ; ಬಿಜೆಪಿ ನಾಯಕರ ಸಭೆ ಪಕ್ಷ ಕಚೇರಿಯಿಂದ ರೆಸಾರ್ಟ್‌ಗೆ ಶಿಫ್ಟ್‌

ಹೋಗದಿದ್ದರೆ ಬಲವಂತ ಆರೋಪ

ಕಸಬಾ ವ್ಯಾಪ್ತಿಯ ಜೆಡಿಎಸ್ ಗ್ರಾ.ಪಂ ಸದಸ್ಯರೊಬ್ಬರು ಪ್ರವಾಸ ಹೊರಟಿರುವ ತಂಡದ ಬಸ್‌ನಲ್ಲಿ ಮಾತನಾಡಿರುವುದು ವೈರಲ್ ಆಗಿದ್ದು, ಜತೆಗೆ ಪ್ರವಾಸ ಹೊರಟಿರುವವರೇ ವಿಡಿಯೊ ಮಾಡಿ ಹರಿಬಿಟ್ಟಿದ್ದರಿಂದ ಇದು ಜೆಡಿಎಸ್‌ ಅಭ್ಯರ್ಥಿ ವೀರಭದ್ರಯ್ಯ ಅವರು ಏರ್ಪಡಿಸಿದ್ದ ಪ್ರವಾಸ ಕಾರ್ಯಕ್ರಮ ಎಂಬುದು ಗೊತ್ತಾಗಿತ್ತು.

ʻʻಪ್ರವಾಸಕ್ಕೆ ಹೊರಟಿರುವುದು ಯಾರಲ್ಲಿಯೂ ಹೇಳಿಕೊಳ್ಳಬೇಡಿ, ನಾವೇ ವೈಯಕ್ತಿಕವಾಗಿ ಪ್ರವಾಸಕ್ಕೆ ಹೋಗಿ ಬರುತ್ತಿದ್ದೇವೆ ಎಂದು ಹೇಳಿ. ಕಾಫಿ, ತಿಂಡಿ ಖರ್ಚಿಗೆ ಶಾಸಕರು 20 ಸಾವಿರ ನೀಡಿದ್ದು, ಹುಷಾರಾಗಿ ಹೋಗಿ ಬನ್ನಿ…! ಹೊರನಾಡು, ಧರ್ಮಸ್ಥಳ, ಕುಕ್ಕೆ ಸೌದಡ್ಕ ಗಣಪತಿ ಕ್ಷೇತ್ರಗಳನ್ನು ನೋಡಿಕೊಂಡು ವಾಪಸ್‌ ಬನ್ನಿʼʼ ಎಂದು ಮುಖಂಡರು ಹೇಳಿರುವುದು ವೈರಲ್ ಆಗಿದೆ.

ಈ ಹಿಂದೆ ಯುಗಾದಿ ಹಬ್ಬದ ಸಂದರ್ಭದಲ್ಲೂ ತಾಲೂಕಿನಾದ್ಯಂತ ಕೆಲ ಭಾಗಗಳಲ್ಲಿ ಮನೆ ಮನೆಗೆ ಪಕ್ಷದ ಕರಪತ್ರದೊಂದಿಗೆ 500 ರೂಪಾಯಿಗಳನ್ನು ಇಟ್ಟು ಹಂಚಿರುವುದೂ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಇದನ್ನೂ ಓದಿ: Karnataka Elections : ಬೊಮ್ಮಾಯಿ ಬಿಡಿ, ಮೋದಿನೇ ನನ್ನೆದುರು ನಿಂತರೂ ಗೆಲ್ಲೋದು ನಾನೇ: ಎಸ್ಸೆಸ್‌ ಮಲ್ಲಿಕಾರ್ಜುನ!

ಚುನಾವಣಾಧಿಕಾರಿಗಳಿಗೆ ದೂರು

ಮಧುಗಿರಿ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸುತ್ತಿರುವ ಎಂ.ವಿ.ವೀರಭದ್ರಯ್ಯರವರ ಪರವಾಗಿ ಮತ ಹಾಕಲು ಎಂ.ವಿ.ವೀರಭದ್ರಯ್ಯ ಮತ್ತು ಅವರ ಬೆಂಬಲಿಗರು ಇಡೀ ತಾಲೂಕಿನಲ್ಲಿ ಮತದಾರರಿಗೆ ತಮ್ಮ ಪರವಾಗಿ ಮತ ಹಾಕಲು ಒಂದು ದಿನ ಅಥವಾ ಎರಡು ದಿನ ಪ್ರವಾಸಗಳನ್ನು ಕೈಗೊಳ್ಳುತ್ತಿರುತ್ತಾರೆ ಮತ್ತು ಮತದಾರರು ಪ್ರವಾಸಕ್ಕೆ ಹೋಗದೆ ಇದ್ದರೆ ಅವರ ಮೇಲೆ ದೌರ್ಜನ್ಯ ಸಹ ಮಾಡುತ್ತಾರೆ ಮತ್ತು ಪ್ರತಿ ದಿನ ಗ್ರಾಮಗಳಿಗೆ ರಾತ್ರಿ ವೇಳೆ ಬಸ್‌ಗಳನ್ನು ಕಳುಹಿಸಿ ಈ ದಿನ ರಾತ್ರಿಯಿಂದ ಮುಂದಿನ ರಾತ್ರಿವರೆಗೆ ಪ್ರವಾಸಕ್ಕೆ ಕಳುಹಿಸುತ್ತಾರೆ. ಕಾನೂನು ಬಾಹಿರವಾಗಿ ಈ ರೀತಿ ಪ್ರವಾಸ ಕೈಗೊಳ್ಳುತ್ತಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಚುನಾವಣಾಧಿಕಾರಿಗಳಿಗೆ ದೊಡ್ಡೇರಿ ಹೋಬಳಿಯ ಮುಖಂಡರು ದೂರು ನೀಡಿದ್ದರು.

Exit mobile version