ಯಾದಗಿರಿ: ತಾಲೂಕಿನಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಸಿಡಿಲು ಬಡಿದು ನಾಲ್ಕು ಜನ ಮೃತಪಟ್ಟು, ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಜರಕೋಟೆ ಗ್ರಾಮದ ಒಂದೇ ಕುಟುಂಬದ ಮೊನಮ್ಮ (35), ಭಾನು (4), ಶ್ರೀನಿವಾಸ (2) ಮೃತರು. ಜಿಲ್ಲಾಸ್ಪತ್ರೆಗೆ ಬಂದಿದ್ದ ಇವರು, ಆಸ್ಪತ್ರೆಯಿಂದ ಮರಳಿ ಗಾಜರಕೋಟೆಗೆ ವಾಪಸ್ ಬೈಕ್‌ನಲ್ಲಿ ತೆರಳುತ್ತಿದ್ದಾಗ ಮಳೆ ಬಂದಿದೆ. ಹೀಗಾಗಿ ತಾಲೂಕಿನ ಎಸ್.ಹೊಸಳ್ಳಿ ಗ್ರಾಮದ ಹೊರಭಾಗದಲ್ಲಿ ಮರದ ಕೆಳಗೆ ಆಸರೆ ಪಡೆಯುತ್ತಿದ್ದಾಗ ಸಿಡಿಲು ಬಡಿದು ಮೂವರು ಮೃತಪಟ್ಟಿದ್ದು, ಗಾಯಾಳುವನ್ನು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅದೇ ರೀತಿ ಇದೇ ಎಸ್. ಹೊಸಳ್ಳಿ ಗ್ರಾಮದ ಹೊಲದಲ್ಲಿ ಬಿತ್ತನೆ ಮಾಡಲು ತೆರಳುತ್ತಿದ್ದಾಗ ಸಿಡಿಲು ಬಡಿದು ರೈತ ಸಾಬಣ್ಣ (18) ಎಂಬುವವರು ಮೃತಪಟ್ಟಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಒಂದೇ ದಿನ ಸಿಡಿಲಿಗೆ ನಾಲ್ವರು ಬಲಿಯಾದಂತಾಗಿದೆ.
ಇದನ್ನೂ ಓದಿ | ಕಂದಕಕ್ಕೆ ಬಿದ್ದು ಇಬ್ಬರು ಯುವಕರು ಸಾವು: ಮಳೆ ಹಾನಿ ಸರಿಪಡಿಸದ ಗದಗ ಜಿಲ್ಲಾಡಳಿತದ ನಿರ್ಲಕ್ಷ್ಯದ ವಿರುದ್ಧ ಜನರ ಆಕ್ರೋಶ