ನವದೆಹಲಿ: ತೈವಾನ್ ಮೂಲದ ಫಾಕ್ಸ್‌ಕಾನ್ (Foxconn) ಬೆಂಗಳೂರಲ್ಲಿ ಬೃಹತ್ ಐಫೋನ್ ಘಟಕ ತೆರಯಲಿದೆ ಮತ್ತು ಸುಮಾರು ಒಂದು ಲಕ್ಷ ಉದ್ಯೋಗ ಸೃಷ್ಟಿಸಲಿದೆ ಎಂದು ಒಂದು ದಿನದ ಹಿಂದೆ ವರದಿಯಾಗಿತ್ತು. ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ಈ ಮಾಹಿತಿಯನ್ನು ಟ್ವಿಟರ್‌ನಲ್ಲಿ ಷೇರ್ ಮಾಡಿಕೊಂಡಿದ್ದರು. ಆದರೆ, ಈಗ ಫಾಕ್ಸ್‌ಕಾನ್ ಕಂಪನಿಯು, ಇತ್ತೀಚೆಗೆ ಕಂಪನಿಯ ಅಧ್ಯಕ್ಷರು ಭಾರತದ ಪ್ರವಾಸ ಕೈಗೊಂಡಾಗ ಭಾರತದಲ್ಲಿ ಹೊಸ ಹೂಡಿಕೆಯ ಬಗ್ಗೆ ಯಾವುದೇ ಒಪ್ಪಂದವಾಗಲೀ ನಡೆದಿಲ್ಲ. ಮಾತುಕತೆಗೆ ಒಳಪಟ್ಟಿಲ್ಲ ಎಂದು ಹೇಳಿರುವುದನ್ನು ಎಎಫ್‌ಪಿ ವರದಿ ಮಾಡಿದೆ.
ಕಂಪನಿಯ ಅಧ್ಯಕ್ಷರ ಈ ಪ್ರವಾಸದ ಸಮಯದಲ್ಲಿ ಹೊಸ ಹೂಡಿಕೆಗಳಿಗೆ ಫಾಕ್ಸ್‌ಕಾನ್ ಮಾತುಕತೆಯಾಗಲೀ, ನಿರ್ಣಾಯಕ ಒಪ್ಪಂದಗಳನ್ನು ಮಾಡಿಕೊಂಡಿಲ್ಲ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಆ್ಯಪಲ್ ಕಂಪನಿ ಐಫೋನ್ ನಿರ್ಮಾಣದ ಬೃಹತ್ ಗುತ್ತಿಗೆದಾರ ಕಂಪನಿಯಾಗಿರುವ ಫಾಕ್ಸ್‌ಕಾನ್, ಭಾರತದಲ್ಲಿನ ಹೊಸ ಹೂಡಿಕೆಯ ಬಗ್ಗೆ ವರದಿಯಾಗಿರುವುದನ್ನು ಅಲ್ಲಗಳೆದಿದೆ. ಕರ್ನಾಟಕದ ರಾಜಧಾನಿ ಬೆಂಗಳೂರು ಬಳಿ ಫಾಕ್ಸ್‌ಕಾನ್ ಬೃಹತ್ ಉತ್ಪಾದನಾ ಘಟಕ ತೆರೆಯಲಿದ್ದು, ಸುಮಾರು 700 ಮಿಲಿಯನ್ ಡಾಲರ್ ಹೂಡಿಕೆ ಮಾಡಲಿದೆ. ಒಂದು ಲಕ್ಷ ಉದ್ಯೋಗ ಸೃಷ್ಟಿಸಲಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿತ್ತು.
ಇದನ್ನೂ ಓದಿ: ಬೆಂಗಳೂರಿನಲ್ಲೇ ಆ್ಯಪಲ್ ಫೋನ್ ನಿರ್ಮಾಣ, 300 ಎಕರೆಯಲ್ಲಿ ಫಾಕ್ಸ್‌ಕಾನ್ ಘಟಕ, ಚೀನಾಗೆ ಹಿನ್ನಡೆ
ಕಂಪನಿಯ ಚೇರ್ಮನ್ ಯಂಗ್ ಲಿಯು ಅವರೊಂದಿಗೆ ವಿವರವಾದ ಚರ್ಚೆಯ ನಂತರ ರಾಜ್ಯದಲ್ಲಿ ಪ್ರಮುಖ ಹೂಡಿಕೆ ಮಾಡಲು ಪ್ರಮುಖ ಎಲೆಕ್ಟ್ರಾನಿಕ್ಸ್ ಮೇಜರ್ ಫಾಕ್ಸ್‌ಕಾನ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಇದು 1 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ. ಬೆಂಗಳೂರು ವಿಮಾನ ನಿಲ್ದಾಣದ ಬಳಿ 300 ಎಕರೆ ಭೂಮಿಯನ್ನು ಹಂಚಿಕೆ ಮಾಡಲಾಗಿದೆ ಕರ್ನಾಟಕ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದರು ಎಂದು ಮನಿ ಕಂಟ್ರೋಲ್ ವರದಿ ಮಾಡಿದೆ. ಮತ್ತೊಂದಡೆ, ತೆಲಂಗಾಣ ಸರ್ಕಾರ ಫಾಕ್ಸ್‌ಕಾನ್ ಜತೆಗೆ ಹೂಡಿಕ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಹೇಳಿಕೊಂಡಿತ್ತು. ಫಾಕ್ಸ್‌ಕಾನ್ ಅಧ್ಯಕ್ಷ ಯಂಗ್ ಲಿಯು ಅವರು ಫೆಬ್ರವರಿ 27 ರಿಂದ ಮಾರ್ಚ್ 4 ರವರೆಗೆ ಭಾರತಕ್ಕೆ ಭೇಟಿ ನೀಡಿದ್ದರು.