Site icon Vistara News

ಸ್ವಾಮೀಜಿ ರೀತಿ ಪೋಸ್ ಕೊಟ್ಟು ವಂಚನೆ ಮಾಡಿ ಹಲ್ಲೆ ಆರೋಪ; ಖತರ್ನಾಕ್ ವಂಚಕನ ಬಂಧನ

ಮೋಸ ಮಾಡಿ ಹಲ್ಲೆ ಆರೋಪಿ ಅಲ್ಲಮಪ್ರಭು ಹಿರೇಮಠ

ಚಿಕ್ಕೋಡಿ: ಸರ್ಕಾರಿ ನೌಕರಿ ಕೊಡಿಸುತ್ತೇನೆ ಎಂದು ಸ್ವಾಮೀಜಿ ರೀತಿ ಪೋಸ್ ಕೊಟ್ಟು ಜನರನ್ನು ವಂಚಿಸುತ್ತಿದ್ದ ಆರೋಪಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಜಿಲ್ಲೆಯ ಮೂಡಲಗಿ ತಾಲೂಕಿನ ಹಳ್ಳೂರ ಗ್ರಾಮದ ಅಲ್ಲಮಪ್ರಭು ಹಿರೇಮಠ ಬಂಧಿತ ಆರೋಪಿಯಾಗಿದ್ದಾನೆ. ಜತೆಗೆ ಇದೇ ಆರೋಪಿ ವಿರುದ್ಧ ಇನ್ನೊಂದು ದೂರು ಸಹ ದಾಖಲು ಆಗಿದೆ.

ಎಸ್‌ಸಿ ಕೋಟಾದಡಿ ಡಿ ದರ್ಜೆ ಸರ್ಕಾರಿ ನೌಕರಿ ಕೊಡಿಸುವುದಾಗಿ 6 ತಿಂಗಳ ಹಿಂದೆ ಮೂಡಲಗಿಯ ಸಂತೋಷ ಹವಳೆವ್ವಗೋಳ ಎಂಬಾತನಿಂದ ಆರೋಪಿ ಅಲ್ಲಮಪ್ರಭು ಹಿರೇಮಠ 4 ಲಕ್ಷ ರೂ. ಹಣ ಪಡೆದಿದ್ದ ಎನ್ನಲಾಗಿದೆ. ಬಳಿಕ ಸಂತೋಷ್‌ ಹಣ ವಾಪಸ್ ಕೇಳಿದಾಗ ಅವಾಚ್ಯ ಶಬ್ದಗಳಿಂದ ಬೈಯ್ದಿದ್ದ ಎಂದು ಹೇಳಲಾಗಿದೆ.

ಇದನ್ನೂ ಓದಿ | ಗಂಗಾ ಕಲ್ಯಾಣದ ಹೆಸರಿನಲ್ಲಿ ಜನರನ್ನು ಮಂಗ ಮಾಡಿದವರು ಅಂದರ್‌

ಆಗಸ್ಟ್ 15ರಂದು ಸಂತೋಷ್‌ ಪುನಃ ಹಣ ಕೇಳಲು ಹೋದಾಗ, ಆರೋಪಿ ಸಂಗಡಿಗರ ಜತೆಗೂಡಿ ಸಂತೋಷ ಹವಳೆವ್ವಗೋಳ ಬೆನ್ನಿಗೆ, ಕಾಲಿಗೆ ಚಾಕುವಿನಿಂದ ಚುಚ್ಚಿ ಹಲ್ಲೆ ಮಾಡಿದ್ದಾನೆ. ಮೂಡಲಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಅಲ್ಲಮಪ್ರಭು ಹಿರೇಮಠನನ್ನು ಬಂಧಿಸಿದ್ದಾರೆ.

ಮೊತ್ತೊಂದು ಆರೋಪದಲ್ಲಿ ಅಲ್ಲಮಪ್ರಭು ಹಿರೇಮಠ!

ಆರೋಪಿ ಅಲ್ಲಮಪ್ರಭು ಹಿರೇಮಠ ವಿರುದ್ಧ ಮತ್ತೊಂದು ದೂರು ಸಹ ದಾಖಲಾಗಿದೆ. ಬಿಬಿಎಂಪಿ ಚುನಾವಣೆಯಲ್ಲಿ ಇವಿಎಂ‌ ಹ್ಯಾಕ್ ಮಾಡಿ ಗೆಲ್ಲಿಸಿಕೊಡುವುದಾಗಿ 5 ಲಕ್ಷ ಹಣ ಪಡೆದ ಆರೋಪ ಕೂಡ ಕೇಳಿ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸದಂತೆ ಬೆಂಗಳೂರು ನಿವಾಸಿ ಪ್ರಶಾಂತಕುಮಾರ ನೀಡಿದ ದೂರಿನ ಮೇರೆಗೆ ಅಲ್ಲಮಪ್ರಭು ವಿರುದ್ಧ ಮೂಡಲಗಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಆಗಿದೆ.

ಇದನ್ನೂ ಓದಿ | ಆನ್​ಲೈನ್​ನಲ್ಲಿ ಕೆಲಸಕ್ಕೆ ಅಪ್ಲೈ ಮಾಡಿದ, ಇವನೇ ₹48 ಲಕ್ಷ ಕೊಟ್ಟು ಕೈಸುಟ್ಟುಕೊಂಡ!

Exit mobile version