Site icon Vistara News

Fraud | ಪ್ರಶಸ್ತಿ ಆಮಿಷ, ಅಧಿಕಾರಿಯೆಂದು ನಂಬಿಸಿ ರಾಜಭವನದಲ್ಲೇ ವಂಚನೆ!

online fraud

ಬೆಂಗಳೂರು: ರಾಜಭವನಕ್ಕೆ ಕರೆದುಕೊಂಡು ಹೋಗಿ ಅಲ್ಲಿನ ಅಧಿಕಾರಿಯಂತೆ ನಟಿಸಿ, ಪ್ರಶಸ್ತಿ ಕೊಡಿಸುವುದಾಗಿ ಲಕ್ಷಾಂತರ ರೂಪಾಯಿ ಪಡೆದು ವಂಚಿಸಿದ ಪ್ರಕರಣ ನಡೆದಿದೆ. ಬಿಗಿ ಸೆಕ್ಯುರಿಟಿಯ ರಾಜಭವನದಲ್ಲೇ ನಡೆದಿರುವ ಈ ವಂಚನೆ (crime news) ಕುತೂಹಲ ಕೆರಳಿಸಿದೆ.

ʻಯಾರಿಗೂ ಹೇಳಬೇಡಿ’ ಸಿನಿಮಾ ಮಾದರಿಯಲ್ಲಿ ನಡೆದಿರುವ ಈ ವಂಚನೆ ಬಿಜೆಪಿ ಯೂತ್ ಲೀಡರ್, ಸಾಮಾಜಿಕ ಕಾರ್ಯಕರ್ತನಿಗೆ ಆಗಿದೆ ಎಂಬುದು ವಿಶೇಷ. ಬಿಜೆಪಿ ಯೂತ್ ಲೀಡರ್ ವೆಂಕಟೇಶ್ ಗೌಡ ಎಂಬವರಿಗೆ ರಾಜ್ಯಪಾಲರಿಂದ ಸನ್ಮಾನ ಮಾಡಿಸುತ್ತೇನೆ, ಪ್ರಶಸ್ತಿ ಕೊಡಿಸುತ್ತೇನೆ ಎಂದು ನಂಬಿಸಿ ಒಂದು ಲಕ್ಷ ರೂಪಾಯಿ ಹಣವನ್ನು ವಂಚಿಸಲಾಗಿದೆ.

ವಂಚನೆಗೀಡಾದ ವೆಂಕಟೇಶ್‌ ಗೌಡ

ಇಂಡಿಯನ್ ಜರ್ನಲಿಸ್ಟ್ ಕಂಪೆಂಡಿಯಂ ಎಂಬ ಸಂಸ್ಥೆ ವತಿಯಿಂದ ನಿಮಗೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರಿಂದ ಸ್ವಾತಂತ್ರ್ಯೋತ್ಸವ ಅಂಗವಾಗಿ ಪುರಸ್ಕಾರ ನೀಡುತ್ತಿದ್ದೇವೆ. ಇದಕ್ಕೆ ನೀವು ಒಂದು ಲಕ್ಷ ದೇಣಿಗೆ ಕೊಡಬೇಕೆಂದು ಸುರೇಶ್ ಬಾಬು ಎಂಬಾತ ಕರೆ ಮಾಡಿದ್ದ. ಈ ಹಿನ್ನೆಲೆಯಲ್ಲಿ ವೆಂಕಟೇಶ್ ಗೌಡ ಅವರು ಸುರೇಶ್ ಬಾಬುಗೆ ಹಣ ಕಳಿಸಿದ್ದರು. ಆ ಹಣವನ್ನು ಗ್ಯಾನ್ ಪ್ರಕಾಶ್ ಹಾಗು ಗಿರಿಧರ್ ಎಂಬವರ ಅಕೌಂಟ್‌ಗೆ ಟ್ರಾನ್ಸ್‌ಫರ್ ಮಾಡಿರುವುದಾಗಿ ವೆಂಕಟೇಶ್ ಗೌಡ ಅವರಿಗೆ ಸುರೇಶ್ ಬಾಬು ಮಾಹಿತಿ ನೀಡಿದ್ದ.

ಇದನ್ನೂ ಓದಿ: ಸ್ವಾಮೀಜಿ ರೀತಿ ಪೋಸ್ ಕೊಟ್ಟು ವಂಚನೆ ಮಾಡಿ ಹಲ್ಲೆ ಆರೋಪ; ಖತರ್ನಾಕ್ ವಂಚಕನ ಬಂಧನ

ನಂತರ ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿದಾಗ ಅದೊಂದು ಸ್ವಾತಂತ್ರ್ಯೋತ್ಸವದ ಸಂಬಂಧ ಸಹಜ ಭೇಟಿಯಾಗಿದ್ದು ಯಾವುದೇ ಪ್ರಶಸ್ತಿ ಪ್ರದಾನ ಇರಲಿಲ್ಲ. ಆದರೆ ಐಜೆಕೆ ಸಂಸ್ಥೆಯ ಹೆಸರಿನಲ್ಲಿ ನಕಲಿ ಪ್ರಶಸ್ತಿಗಳನ್ನು ನೀಡಿ ವಂಚಿಸಲಾಗಿದೆ ಎನ್ನಲಾಗಿದೆ. ದೂರುದಾರರ ಮುಂದೆ ರಾಜ್ಯಪಾಲರನ್ನು ಭೇಟಿಯಾಗುವಂತೆ ಒಳಗೆ ಹೋಗಿ ನಟಿಸಿ, ನಂತರ ರಾಜ್ಯಪಾಲರು ನಿಮ್ಮನ್ನ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆಂದು ನಂಬಿಸಿ ವೆಂಕಟೇಶ್ ಗೌಡರನ್ನು ವಂಚನೆ ಮಾಡಲಾಗಿದೆ.

ವಿಧಾನಸೌಧ ಠಾನೆಯಲ್ಲಿ ಎಫ್‌ಐಆರ್ ಆಗುತ್ತಿದ್ದಂತೆ ಇದೇ ರೀತಿ ಹಲವೆಡೆ ವಂಚನೆ ಮಾಡಿದ್ದು ಪತ್ತೆಯಾಗಿದ್ದು, ಸಿಸಿಬಿ ಅಧಿಕಾರಿಗಳು ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ.

ಇದನ್ನೂ ಓದಿ | Loan App Fraud | 100 ಲೋನ್‌ ಅಪ್ಲಿಕೇಷನ್‌ ಬಳಸಿ 500 ಕೋಟಿ ರೂ. ವಂಚನೆ, ಕರ್ನಾಟಕದಲ್ಲೂ ಇತ್ತು ಈ ಜಾಲ!

Exit mobile version