Site icon Vistara News

Gadag Election Results: ಗದಗ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಎಚ್.ಕೆ ಪಾಟೀಲ್‌ ಜಯಭೇರಿ

gadag constituency assembly elcetion winner congress party hk patil

ಗದಗ: ಗದಗ ಜಿಲ್ಲೆಯ ಗದಗ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಕೆ.ಪಾಟೀಲ್ ಅವರು 88,986 ಮತ ಗಳಿಸಿ ಗೆಲುವು ಸಾಧಿಸಿದ್ದಾರೆ. ಅವರ ಪ್ರತಿಸ್ಪರ್ಧಿಯಾಗಿದ್ದ ಬಿಜೆಪಿ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ 73,820 ಮತಗಳನ್ನು ಗಳಿಸಿದ್ದು, 15,166 ಮತಗಳ ಅಂತರದಲ್ಲಿ ಹೆಚ್.ಕೆ.ಪಾಟೀಲ್ ಗೆಲುವು ಸಾಧಿಸಿದ್ದಾರೆ.

ಈ ಬಾರಿ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಚ್‌.ಕೆ. ಪಾಟೀಲ, ಜೆಡಿಎಸ್‌ ಅಭ್ಯರ್ಥಿಯಾಗಿ ವೆಂಕನಗೌಡ ಗೋವಿಂದಗೌಡರ, ಆಪ್‌ನಿಂದ ಪೀರ್‌ಸಾಬ್‌ ಶೇಖ್‌ ದೊಡ್ಡಮನಿ, ಬಿಜೆಪಿಯಿಂದ ಅನಿಲ್‌ ಮೆಣಸಿನಕಾಯಿ ಕಣದಲ್ಲಿದ್ದರು.

2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಹನುಮಂತಗೌಡ ಪಾಟೀಲ (ಎಚ್. ಕೆ ಪಾಟೀಲ) 77,699 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಭಾರತೀಯ ಜನತಾ ಪಾರ್ಟಿಯ ಅನಿಲ್ ಮೆಣಸಿನಕಾಯಿ 1,868 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು. 2013ರಲ್ಲಿಯೂ ಇಲ್ಲಿ ಎಚ್.ಕೆ ಪಾಟೀಲ್‌ ಗೆದ್ದಿದ್ದರು.

ಇಲ್ಲಿ ಇರುವ ಒಟ್ಟು ಮತಗಳು 215,621. ಪುರುಷರ ಸಂಖ್ಯೆ 107,937 ಹಾಗೂ ಸ್ತ್ರೀಯರ ಸಂಖ್ಯೆ 107,661.

Read more: Karnataka Election Results 2023 : ಹಾಸನದ ಜಿದ್ದಾಜಿದ್ದಿಯಲ್ಲಿ ಜೆಡಿಎಸ್‌ಗೆ ಗೆಲುವು; ಪ್ರೀತಂ ಸೋಲಿಸಿದ ಸ್ವರೂಪ್‌

Exit mobile version