Site icon Vistara News

Assault Case : ಬಾಸುಂಡೆ ಬರುವಂತೆ ಪೊಲೀಸರಿಗೆ ಬಾರಿಸಿ ಪರಾರಿಯಾದರು ಅಕ್ಕಿ ಕಳ್ಳರು!

Rice thieves flee after attacking cops

ಗದಗ: ಪೊಲೀಸರ ಮೇಲೆ ಹಲ್ಲೆ ಮಾಡಿ ಅಕ್ಕಿ ಕಳ್ಳರು ಮಾಲು ಸಮೇತ ಪರಾರಿ (Theft Case) ಆಗಿದ್ದಾರೆ. ಈ ಘಟನೆ ಗದಗದ ಲಕ್ಷ್ಮೇಶ್ವರ ತಾಲೂಕಿನ ರಾಮಗಿರಿ ಚೆಕ್ ಪೋಸ್ಟ್ ಬಳಿ ನಡೆದಿದೆ. ಲಕ್ಷ್ಮೇಶ್ವರ ಠಾಣೆಯ ಪೊಲೀಸ್ ಪೇದೆ ಎಚ್.ಎನ್.ಗೊರವರ್ ಎಂಬುವವರು (Assault Case) ಹಲ್ಲೆಗೊಳಗಾದವರು.

ಗೊರವರ್‌ ಅವರು ರಾಮಗೇರಿ ಚೆಕ್ ಪೋಸ್ಟ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಚೆಕ್‌ ಪೋಸ್ಟ್‌ನಲ್ಲಿ ಅನ್ನಭಾಗ್ಯ ಅಕ್ಕಿ ವಾಹನ ತಪಾಸಣೆ ಮಾಡುವಾಗ ಕರ್ತವ್ಯ ನಿರತ ಪೇದೆಯ ಮೇಲೆಯೇ ಪುಂಡರು ಹಲ್ಲೆ ಮಾಡಿದ್ದಾರೆ.

ಪೊಲೀಶ್‌ ಸಿಬ್ಬಂದಿ ಒಬ್ಬರೇ ಇದ್ದಾಗ ಸಮವಸ್ತ್ರ ಹರಿದು, ಮೈ-ಕೈ ಮೇಲೆ ಬಾಸುಂಡೆ ಬೀಳುವಂತೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಮಾರಣಾಂತಿಕವಾಗಿ ಹಲ್ಲೆ ಮಾಡಿ ವಾಹನ ಸಮೇತವಾಗಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಲಕ್ಷ್ಮೇಶ್ವರ ಪೋಲಿಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ : Bengaluru News : ಛೇ.. ಇವಳೆಂಥಾ ತಾಯಿ? ಬುದ್ಧಿ ಕಲಿಸಲು 3 ವರ್ಷದ ಮಗುವನ್ನು ಕೂಡಿಹಾಕಿದ್ದಳಂತೆ!

ಒಂಟಿ ಮನೆಯಲ್ಲಿ ಫೈರಿಂಗ್‌ ಸೌಂಡ್‌, ನಿಗೂಢವಾಗಿ ಕೊಲೆ ಮಾಡಿ ಹೋದವರು ಯಾರು?

ಉಡುಪಿ: ಉಡುಪಿ ಜಿಲ್ಲೆಯ (Udupi News) ಬ್ರಹ್ಮಾವರ ತಾಲೂಕಿನ ಹನೇಹಳ್ಳಿಯಲ್ಲಿ ಶನಿವಾರ ರಾತ್ರಿ ಶೂಟೌಟ್ (Shoot out at Hanehalli) ಪ್ರಕರಣವೊಂದು ನಡೆದಿದೆ. ಒಂಟಿ ಮನೆಯಲ್ಲಿ ಒಬ್ಬ ವ್ಯಕ್ತಿಯನ್ನು ನಿಗೂಢವಾಗಿ ಕೊಲೆ (Murder Case) ಮಾಡಲಾಗಿದೆ.

ಮಣಿಪಾಲದಲ್ಲಿ ಕೆಲಸ ಮಾಡುತ್ತಿರುವ ಕೃಷ್ಣ ಎಂಬವರು ಕೊಲೆಯಾದವರು. ಅವರು ಹನೆಹಳ್ಳಿಯ ಒಂಟಿ ಮನೆಯಲ್ಲಿ ಏಕಾಂಗಿಯಾಗಿ ವಾಸ ಮಾಡುತ್ತಿದ್ದರು. ಶನಿವಾರ ರಾತ್ರಿ 9.30ರ ಸುಮಾರಿಗೆ ಈ ಮನೆಯಿಂದ ಗುಂಡಿನ ಸದ್ದು (Firing sound) ಕೇಳಿಬಂದಿತ್ತು. ಅದು ಪ್ರಾಣಿಗಳನ್ನು ಓಡಿಸಲು ಪಟಾಕಿ ಬಿಟ್ಟಿರಬಹುದು ಎಂದು ಆಸುಪಾಸಿನವರು ಸುಮ್ಮನಿದ್ದರು. ಆದರೆ, ಬೆಳಗ್ಗೆ ಹೋಗಿ ನೋಡಿದಾಗ ಕೃಷ್ಣ ಅವರು ರಕ್ತದ ಮಡುವಿನಲ್ಲಿ ಶವವಾಗಿ ಮಲಗಿದ್ದರು.

ಹಾಗಿದ್ದರೆ ರಾತ್ರಿ ಆ ಮನೆಗೆ ಬಂದು ಶೂಟ್‌ ಮಾಡಿ ಕೃಷ್ಣ ಅವರನ್ನು ಸಾಯಿಸಿದ್ದು ಯಾರು ಎನ್ನುವುದು ನಿಗೂಢವಾಗಿದೆ. ಕೃಷ್ಣ ಅವರು ತಾವೇ ಗುಂಡು ಹಾರಿಸಿಕೊಂಡು ಪ್ರಾಣ ಕಳೆದುಕೊಂಡಂತೆ ಕಾಣುತ್ತಿಲ್ಲ. ಬದಲಾಗಿ ಯಾರೋ ಬಂದು ಅವರಿಗೆ ಗುಂಡಿಕ್ಕಿದಂತೆ ಕಾಣುತ್ತಿದೆ ಎಂದು ಹೇಳಲಾಗಿದೆ.

ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ ಭೇಟಿ ಭೇಟಿ ನೀಡಿದ್ದಾರೆ. ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡುವ ಹನೆಹಳ್ಳಿಯಲ್ಲಿ ನಡೆದ ಘಟನೆ ಘಟನೆ ಇದಾಗಿದ್ದು, ಕೃಷ್ಣ ಅವರ ಹಿನ್ನೆಲೆ, ಅವರನ್ನು ಯಾರು ಕೊಲೆ ಮಾಡಿರಬಹುದು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಶೂಟ್ ಔಟ್ ನಡೆಸಿದವರಿಗಾಗಿ ಪೊಲೀಸರು ಕಾರ್ಯಾಚರಣೆ ಶುರು ಮಾಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version