ಗದಗ: ಬೈಕ್ ಸವಾರ ಹಳ್ಳದ ಸೇತುವೆ ರಸ್ತೆ ದಾಟುವ ವೇಳೆ ನೀರಿನಲ್ಲಿ ಕೊಚ್ಚಿಹೋದವನು (Accident news) ಶವವಾಗಿ ಪತ್ತೆವಾಗಿ ಪತ್ತೆಯಾಗಿದ್ದಾನೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ನಾಗರಹಳ್ಳಿ ಮತ್ತು ಬೆಣ್ಣೆಹಳ್ಳಿ ಮಾರ್ಗಮಧ್ಯೆ ಘಟನೆ ನಡೆದಿದೆ. ರವಿಕುಮಾರ ಸುತಾರಿ (32) ಮೃತ ದುರ್ದೈವಿ. ವಿಜಯನಗರ ಜಿಲ್ಲೆ ಏಣಗಿ ಬಸಾಪುರ ಗ್ರಾಮದ ನಿವಾಸಿ ರವಿಕುಮಾರ ಜತೆಗೆ ಮತ್ತೊಬ್ಬ ಸ್ನೇಹಿತ ಬೈಕ್ ಮೂಲಕ ಸೇತುವೆ ದಾಟುತ್ತಿದ್ದರು.
ಈ ವೇಳೆ ಕಾಲು ಜಾರಿದ್ದು ನೀರಿನ ರಭಸಕ್ಕೆ ಕೊಚ್ಚಿ ಹೋಗುತ್ತಿದ್ದ ರವಿಕುಮಾರನನ್ನು ನೀರಿನಿಂದ ಮೇಲೆತ್ತಲು ಮತ್ತೋರ್ವ ಸವಾರನಿಂದ ಪ್ರಯತ್ನ ಮಾಡಿದ್ದಾನೆ. ನೀರಿನ ರಭಸಕ್ಕೆ ಮೇಲೆ ಬರಲಾಗದೇ ರವಿಕುಮಾರ ಕೊಚ್ಚಿ ಹೋಗಿದ್ದಾನೆ. ತಡರಾತ್ರಿ ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದು, ಮೃತದೇಹವನ್ನು ಪತ್ತೆ ಮಾಡಿದ್ದಾರೆ.
ಸೇತುವೆ ಕಿರಿದಾದದ ಹಿನ್ನೆಲೆ ಹಲವು ವರ್ಷಗಳಿಂದ ಇಂತಹ ಅವಘಡ ಸಂಭವಿಸುತ್ತಿದೆ ಎಂದು ಗ್ರಾಮಸ್ಥರು ಕಿಡಿಕಾಡಿದ್ದಾರೆ. ನಾಗರಹಳ್ಳಿ ಹಾಗೂ ಬೆಣ್ಣಿಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿದ್ದು, ಹಳ್ಳಕ್ಕಿಂತ ಸೇತುವೆ ಕೆಳಮಟ್ಟದಲ್ಲಿರುವ ಕಾರಣ ಸಾವು-ನೋವು ಸಂಭವಿಸುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಅರಭಾವಿ ಚಳ್ಳಕೇರೆ ರಾಜ್ಯ ಹೆದ್ದಾರಿ ತಡೆದು ಪ್ರತಿಭಟಿಸಿದರು. ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸ್ಕಿಡ್ ಆಗಿ 20 ಅಡಿ ಎತ್ತರದಿಂದ ಕೆಳಗೆ ಬಿದ್ದ ಗೂಡ್ಸ್ ಗಾಡಿ
ಚಿಕ್ಕಮಗಳೂರು: ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಜಲದುರ್ಗ ಗ್ರಾಮದ ಬಳಿ ಸ್ಕಿಡ್ ಆಗಿ 20 ಅಡಿ ಎತ್ತರದಿಂದ ಗೂಡ್ಸ್ ಗಾಡಿ ಕೆಳಗೆ ಬಿದ್ದಿದೆ. ಗಾಡಿಯಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಳೆಯಿಂದಾಗಿ ಭೂಮಿಯ ತೇವಾಂಶ ಹೆಚ್ಚಾಗಿತ್ತು. ತಿರುವಿನಲ್ಲಿ ಗಾಡಿ ಸ್ಕಿಡ್ ಆಗಿದೆ. ಗುಡ್ಡದ ಮರ-ಗಿಡಗಳಿಗೆ ಸಿಲುಕಿ ನಿಧಾನವಾಗಿ ಗೂಡ್ಸ್ ಗಾಡಿ ಬಿದ್ದಿದೆ. ತಿರುವು ಇದ್ದ ಕಾರಣ ಗಾಡಿಯೂ ನಿಧಾನವಾಗಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಗಾಡಿಯಲ್ಲಿದ್ದ ನಾಲ್ವರಿಗೂ ಸಣ್ಣ-ಪುಟ್ಡ ಗಾಯವಾಗಿದೆ. ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸವಾರರ ಮೇಲೆ ಬಿದ್ದ ಮರದ ಕೊಂಬೆ
ಇದ್ದಕ್ಕಿದ್ದಂತೆ ಧರೆಗುರುಳಿದ ಮರದ ಕೊಂಬೆಯಿಂದಾಗಿ ಕಾರು ಜಖಂಗೊಂಡಿದೆ. ಮೈಸೂರಿನ ದೇವರಾಜ ಮೊಹಲ್ಲಾದ ದಿವಾನ್ಸ್ ರಸ್ತೆಯಲ್ಲಿ ಘಟನೆ ನಡೆದಿದೆ. ರಭಸವಾಗಿ ಮರದ ಕೊಂಬೆ ಬಿದ್ದು ಕಾರಿನ ಮುಂಭಾಗ ಜಖಂಗೊಂಡಿದೆ. ವಾಹನ ಸವಾರರ ಮೇಲೂ ಕೊಂಬೆ ಉರುಳಿದೆ. ತಕ್ಷಣ ಸಹಾಯಕ್ಕೆ ಧಾವಿಸಿದ ದಿ ಜಗ್ಗಿಗೌಡ ಯುವಕದ ಬಳಗದ ಯುವಕರು, ತಾವೇ ಖುದ್ದು ಮರದ ಕೊಂಬೆ ಸರಿಸಿ ಸಹಾಯ ಮಾಡಿದ್ದಾರೆ. ಗಾಯಳುಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ರಸ್ತೆಗೆ ಅಡ್ಡಲಾಗಿ ಬಿದ್ದಿದ ಕೊಂಬೆ ಸರಿಸಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ