Site icon Vistara News

Ganesh Chaturthi 2022 | ತೋಟದ ಮನೆಯಲ್ಲಿ ಗಣಪನ ಪೂಜಿಸಿದ ಮಾಜಿ ಸಿಎಂ ಕುಮಾರಸ್ವಾಮಿ

Ganesh Chaturthi 2022

ರಾಮನಗರ: ಪರಿಸರಕ್ಕೆ ಪೂರಕವಾದ ಮಣ್ಣಿನ ಗಣಪನನ್ನು ಪೂಜಿಸುವಂತೆ (Ganesh Chaturthi 2022) ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮನವಿ ಮಾಡಿದ್ದಾರೆ. ಬಿಡದಿಯ ಕೇತಗಾನಹಳ್ಳಿಯ ತಮ್ಮ ತೋಟದ ಮನೆಯಲ್ಲಿ ಗಣೇಶ ಹಬ್ಬವನ್ನು ಅದ್ಧೂರಿಯಿಂದ ಆಚರಿಸಿದರು.

ತೋಟದಲ್ಲಿ ಹಸಿರು ಚಪ್ಪರ ನಿರ್ಮಿಸಿ ಜತೆಗೆ ಹೂವುಗಳಿಂದ ಸಿಂಗರಿಸಿ ಅದರ ಮಧ್ಯೆ ಜೇಡಿ ಮಣ್ಣಿನ ಗಣಪನನ್ನು ಇಟ್ಟು ಪೂಜೆ-ಪುನಸ್ಕಾರವನ್ನು ನೆರವೇರಿಸಿದರು. ವಾದ್ಯಗೋಷ್ಠಿಗಳನ್ನು ಸಹ ಆಯೋಜಿಸುವ ಮೂಲಕ ಮತ್ತಷ್ಟು ಮೆರಗನ್ನು ನೀಡಲಾಗಿತ್ತು. ವಿಘ್ನೇಶ್ವರನ ಪೂಜೆ ಬಳಿಕ ಕುಮಾರಸ್ವಾಮಿ ಅವರು, ಗೋವುಗಳಿಗೆ ಅರಿಶಿನ-ಕುಂಕುಮ ಹಚ್ಚಿ, ಹೂ ಮೂಡಿಸಿ ಪೂಜೆ ನೆರವೇರಿಸಿ, ನೈವೇದ್ಯ ಅರ್ಪಿಸಿದರು.

ಪಿಒಪಿ ಗಣೇಶ ಬಳಸಬೇಡಿ
ನಾಡಿನ ಜನತೆಗೆ ಗೌರಿ ಗಣೇಶ ಹಬ್ಬದ ಶುಭ ಕೋರಿದ ಎಚ್‌.ಡಿ. ಕುಮಾರಸ್ವಾಮಿ, ಪಿಒಪಿ ಗಣೇಶ ಮೂರ್ತಿಯನ್ನು ಬಳಸಬಾರದು. ಪರಿಸರಕ್ಕೆ ಮಾರಕವಾಗಿವಾಗಿರುವ ಪಿಒಪಿ ಗಣೇಶ ಮೂರ್ತಿಯನ್ನು ಯಾರೂ ಸಹ ಮನೆಗೆ ತರದೇ ಮಣ್ಣಿನ ಗಣಪನನ್ನು ಪೂಜಿಸಬೇಕು. ಇದರಿಂದ ಪರಿಸರಕ್ಕೆ ಯಾವುದೇ ಹಾನಿಯಾಗದೆ, ನೀರಿನಲ್ಲಿ ಕರಗುತ್ತದೆ ಎಂದು ಹೇಳಿದರು.

ಎಲ್ಲರೂ ಪರಿಸರಕ್ಕೆ ಪೂರಕವಾದ ಪರಿಸರ ಗಣಪನನ್ನು ಪೂಜಿಸಿ ಬಳಿಕ ಕೆರೆಗೆ ವಿರ್ಸಜಿಸುವ ಬದಲು ಮನೆಯಲ್ಲಿರುವ ಬಕೆಟ್‌ನಲ್ಲಿ ವಿರ್ಸಜಿಸಿ. ಆ ನೀರನ್ನು ಮನೆಗೆ ಗಿಡಗಳಿಗೆ ಹಾಕಿ ಎಂದು ಮನವಿ ಮಾಡಿದರು.

ಇದನ್ನೂ ಓದಿ | ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ, ಪೂಜೆ ಪ್ರಾರಂಭ

Exit mobile version