ಮೈಸೂರು: ಮೈಸೂರು ಅರಮನೆಯಲ್ಲಿ ಗೌರಿ-ಗಣೇಶ ಹಬ್ಬದ ಸಂಭ್ರಮ (Ganesh Chaturthi 2022) ಕಳೆಗಟ್ಟಿದೆ. ರಾಜವಂಶಸ್ಥೆ ತ್ರಿಷಿಕಾ ಕುಮಾರಿ ಒಡೆಯರ್ ಗೌರಿ ಪೂಜೆಯನ್ನು ಅರಮನೆಯಲ್ಲಿ ನೆರವೇರಿಸಿದ್ದಾರೆ. ಗೌರಿ ಪೂಜೆ ಬಳಿಕ ಮುತ್ತೈದೆಯರಿಗೆ ಬಾಗಿನ ನೀಡಿದರು.
ಹಸಿರು ಮಿಶ್ರಿತ ಕುಂಕುಮ ಬಣ್ಣದ ಸೀರೆಯನ್ನುಟ್ಟು, ಕೈಗಳಿಗೆ ಗಾಜಿನ ಬಳೆ ತೊಟ್ಟು, ಮುತ್ತಿನ ಹಾರದಲ್ಲಿ ಮಿಂಚಿರುವ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಮ್ಮನ ಗೌರಿಗೆ ಪೂಜೆಗೆ ಮಗ ಆದ್ಯವೀರ ನರಸಿಂಹರಾಜ ಒಡೆಯರ್ ಸಾಥ್ ನೀಡಿದ್ದಾರೆ.
ಇದನ್ನೂ ಓದಿ | ಈ ಬಾರಿ ಅದ್ಧೂರಿ ಮೈಸೂರು ದಸರಾ; 50 ಕೋಟಿ ರೂ. ವೆಚ್ಚಕ್ಕೆ ನಿರ್ಧಾರ!