ವಿಜಯಪುರ: ಸರ್ಕಾರಿ ಶಾಲೆಯಲ್ಲಿ ಪ್ರತಿ ವರ್ಷ ಆಚರಣೆ ಮಾಡುತ್ತಿದ್ದ ಗಣೇಶ ಚತುರ್ಥಿಯನ್ನು (Ganesh Chaturthi) ಈ ಬಾರಿ ಮಾಡಿಲ್ಲ ಎಂದು ಆಕ್ರೋಶಗೊಂಡ ವಿದ್ಯಾರ್ಥಿಗಳು ಹಾಗೂ ಪಾಲಕರು ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ ಘಟನೆ ನಿಡಗುಂದಿ ತಾಲೂಕಿನ ಯಲಗೂರ ಗ್ರಾಮದಲ್ಲಿ ನಡೆದಿದೆ.
ಪ್ರತಿವರ್ಷ ಗಣೇಶ ಮೂರ್ತಿ ತಂದು ಪ್ರತಿಷ್ಠಾಪಿಸಲಾಗುತ್ತಿತ್ತು. ಆದರೆ, ಈ ವರ್ಷ ಮುಖ್ಯ ಶಿಕ್ಷಕ ಎಫ್.ಆರ್. ದರ್ಗಾ ಅವರು ಆಚರಣೆಗೆ ಮುಂದಾಗಿಲ್ಲ ಎನ್ನಲಾಗಿದ್ದು, ಇದು ಗ್ರಾಮಸ್ಥರ, ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಹಿನ್ನೆಲೆಯಲ್ಲಿ ಮಕ್ಕಳನ್ನು ಕರೆತಂದು ಶಾಲೆಗೆ ಬೀಗ ಹಾಕಿ ಪ್ರತಿಭಟನೆ ಮಾಡಿದ್ದಾರೆ. ಇದರಿಂದ ಕೆಲವು ಮಕ್ಕಳು ಶಾಲೆಯ ಹೊರಗಡೆಯೇ ಕುಳಿತು ತರಗತಿ ಕೇಳುತ್ತಿದ್ದಾರೆ. ಸ್ಥಳಕ್ಕೆ ನಿಡಗುಂದಿ ಠಾಣೆ ಪೊಲೀಸರು ಭೇಟಿ ನೀಡಿ, ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.
ಇದನ್ನೂ ಓದಿ | ಗಣೇಶ ಮಂಟಪದಲ್ಲಿ ಸಾವರ್ಕರ್ ಚಿತ್ರ ಇಡೋದಕ್ಕೇಕೆ ಪರ್ಮಿಷನ್? ಪ್ರಮೋದ್ ಮುತಾಲಿಕ್ ತರಾಟೆ