ಯಾದಗಿರಿ: ಮಧ್ಯಪ್ರದೇಶದಿಂದ ಕರ್ನಾಟಕಕ್ಕೆ ಗಾಂಜಾ ಚಾಕೋಲೆಟ್ (Ganja Mafia) ತಂದು ಮಾರಾಟ ಮಾಡುತ್ತಿದ್ದವರ ಅಂಗಡಿಗಳ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಲ್ಲಿನ ಸುರಪುರ ಪಟ್ಟಣದ ಜಲಾಲ್ ಮೊಹಲ್ಲಾ ಬಡಾವಣೆಯಲ್ಲಿರುವ ಅಂಗಡಿಯೊಂದರಲ್ಲಿ ಗಾಂಜಾ ಚಾಕೋಲೆಟ್ ಮಾರಾಟ ಮಾಡುತ್ತಿದ್ದ ದಂಧೆಕೋರನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಕನ್ಹಯ್ಯಲಾಲ್ ಚವ್ಹಾಣ್ ಎಂಬಾತ ತನ್ನ ಅಂಗಡಿಯಲ್ಲಿ ಗಾಂಜಾ ಮಿಶ್ರಿತ ಚಾಕೋಲೆಟ್ ಅನ್ನು 50ರಿಂದ 500 ರೂಪಾಯಿವರೆಗೂ ಮಾರಾಟ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ನಿರ್ದಿಷ್ಟ ಗ್ರಾಹಕರಿಗೆ ಮಾತ್ರ ಈ ಗಾಂಜಾ ಚಾಕೋಲೆಟ್ ಅನ್ನು ಮಾರಾಟ ಮಾಡಿ, ಹಣ ಸಂಪಾದಿಸುತ್ತಿದ್ದ. ಈ ಇದನ್ನು ಮಧ್ಯಪ್ರದೇಶದಿಂದ ಖರೀದಿ ಮಾಡಿ ಕರ್ನಾಟಕದಲ್ಲಿ ಮಾರಾಟ ಮಾಡಲಾಗುತ್ತಿತ್ತು.
46 ಕೆ.ಜಿ ಚಾಕೋಲೆಟ್ ಜಪ್ತಿ
ಖಚಿತ ಮಾಹಿತಿ ಮೇರೆಗೆ ಅಬಕಾರಿ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿದ್ದಾರೆ. ಅಬಕಾರಿ ಡಿವೈಎಸ್‌ಪಿ ಮಲ್ಲಿಕಾರ್ಜುನ ರೆಡ್ಡಿ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಮಸ್ತನಾ ಮುನಕ್ಕಾ ಮುದ್ರಿತ ಹೆಸರಿನ 46 ಕೆ.ಜಿ ಯ 7,620 ಚಾಕೋಲೆಟ್ ಜಪ್ತಿ ಮಾಡಲಾಗಿದೆ. ಜತೆಗೆ ಮಾರಾಟ ಮಾಡುತ್ತಿದ್ದ ಕನ್ಹಯ್ಯಲಾಲ್ ಚವ್ಹಾಣ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ | Drug Supply | ಚಿಕನ್ ಪೀಸ್‌ನೊಳಗೆ ಗಾಂಜಾ, ಜೈಲಿಗೆ ಸಾಗಿಸಲು ಖದೀಮರ ಹೊಸ ತಂತ್ರ!