Site icon Vistara News

Dolly Dhananjay: ಬಡವರಿಗೆ ಉಚಿತ ಅಕ್ಕಿ ಕೊಟ್ಟರೆ ತಪ್ಪಿಲ್ಲ: ಕಾಂಗ್ರೆಸ್‌ ಗ್ಯಾರಂಟಿ ಬೆಂಬಲಿಸಿದ ಡಾಲಿ ಧನಂಜಯ

Dolly Dhanajay and Anna Bhagya Rice

ಮಂಡ್ಯ: ಬಡವರಿಗೆ ಅಕ್ಕಿ ಕೊಟ್ಟರೆ ನನಗಂತೂ ತಪ್ಪು ಕಾಣುವುದಿಲ್ಲ. ಇದರಿಂದ ಜನರು ಸೋಮಾರಿಗಳಾಗುತ್ತಾರೆ ಎಂಬುದೆಲ್ಲ ಸುಳ್ಳು. ಅದರಿಂದ ಹಸಿವು ನೀಗುತ್ತದೆ. ಉಚಿತವಾಗಿ ಅಕ್ಕಿ ಕೊಡುವುದರಿಂದ ಮಾತ್ರ ಜೀವನ ಸಾಗುವುದಿಲ್ಲ. ಉಳಿದ ಖರ್ಚುಗಳು ಇರುತ್ತೆ. ಜನರು ಉಳಿದ ಖರ್ಚುಗಳಿಗಾಗಿ ದುಡಿಯುತ್ತಾರೆ ಎಂದು ನಟ ಡಾಲಿ ಧನಂಜಯ್‌ (Dolly Dhananjay) ಹೇಳಿದ್ದಾರೆ. ಈ ಮೂಲಕ ಕಾಂಗ್ರೆಸ್‌ ಸರ್ಕಾರ 5 ಗ್ಯಾರಂಟಿ (Congress Guarantee) ಯೋಜನೆಗಳಲ್ಲಿ ಒಂದಾಗಿರುವ 10 ಕೆ.ಜಿ. ಉಚಿತ ಅಕ್ಕಿ ಕೊಡುಗೆಯನ್ನು ಬೆಂಬಲಿಸಿದ್ದಾರೆ.

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಚಲುವರಸನಕೊಪ್ಪಲು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಚಾಲನೆ ಕಾರ್ಯಕ್ರಮಕ್ಕೆ ಭಾಗವಹಿಸಿದ್ದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಡಾಲಿ ಧನಂಜಯ್‌, ನಾನು ಈ ಹೇಳಿಕೆಯನ್ನು ಯಾವುದೋ ಪಕ್ಷದ ಪರವಾಗಿಯೋ, ಇಲ್ಲವೇ ಯಾರದ್ದೋ ವಿರೋಧದಿಂದಲೋ ಹೇಳುತ್ತಿಲ್ಲ. ಜನ ಸಾಮಾನ್ಯನಾಗಿ ಈ ಮಾತನ್ನು ಹೇಳುತ್ತಿದ್ದೇನೆ. ಉಚಿತ ಅಕ್ಕಿ ಕೊಡುಗೆಯಿಂದ ಬಡವರ ಹಸಿವು ನೀಗುತ್ತದೆ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ: KSRTC Bus Pass: ಶಾಲಾ ಮಕ್ಕಳಿಗೆ ಬಸ್‌ ಪಾಸ್‌ ಅವಧಿ ವಿಸ್ತರಣೆ; ಎಷ್ಟು ದಿನಕ್ಕೆ ಅವಕಾಶ, ಏನಿದೆ ಕಂಡೀಷನ್?

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಚಲುವರಸನಕೊಪ್ಪಲು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ

ಮಾದರಿ ಶಾಲೆಗಳು ಎಲ್ಲ ಹಳ್ಳಿಗಳಲ್ಲೂ ಇರಬೇಕು

ಸರ್ಕಾರಿ‌ ಶಾಲೆಗೆ ಬಂದು‌ ನನಗೆ ತುಂಬಾ ಖುಷಿ‌ ಆಯ್ತು. ಎಲ್ಲ ಮಕ್ಕಳಿಗೂ‌ ಒಂದೇ ರೀತಿಯ ಸವಲತ್ತುಗಳು ಇರುವುದಿಲ್ಲ. ಸಾಕಷ್ಟು ಮಕ್ಕಳು ಶಾಲೆಯಿಂದ ಬಿಟ್ಟು ಹೋಗ್ತಾರೆ. ಅವರನ್ನು‌ ಮತ್ತೆ ಶಾಲೆಗೆ ಕರೆತರುವುದು ದೊಡ್ಡ ಕೆಲಸ. ಸರ್ಕಾರಿ ಶಾಲೆಗಳು‌ ಮೂಲಸೌಕರ್ಯಗಳಿಲ್ಲದೆ ಮುಚ್ಚಬಾರದು. ಸರ್ಕಾರಿ ಶಾಲೆಯಲ್ಲಿ ಓದಬೇಕೆಂದು‌ ತುಂಬಾ ಜನ ಅಂದುಕೊಂಡಿದ್ದಾರೆ. ಈ ರೀತಿಯ ಮಾದರಿ ಶಾಲೆಗಳು ಎಲ್ಲ ಹಳ್ಳಿಗಳಲ್ಲೂ ಇರಬೇಕು ಎಂದು ಡಾಲಿ ಧನಂಜಯ್‌ ಹೇಳಿದರು.

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಚಲುವರಸನಕೊಪ್ಪಲು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ವೀಕ್ಷಣೆ ಮಾಡುತ್ತಿರುವ ಡಾಲಿ ಧನಂಜಯ.

ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಈ ಕಾರ್ಯಕ್ರಮ ಶ್ಲಾಘನೀಯವಾಗಿದೆ. ಶಿಕ್ಷಕರು ನನ್ನ ಶಾಲೆ ಎಂದು ಅಂದುಕೊಳ್ಳುತ್ತಾರೆ. ಇದರಿಂದ ಸರ್ಕಾರಿ‌ ಶಾಲೆಗಳು ಉತ್ತಮವಾಗುತ್ತವೆ, ಗುಣಮಟ್ಟದಿಂದ ಕೂಡಿರುತ್ತವೆ. ಎಲ್ಲ ಕಡೆ ಕೆಲಸಗಳ್ಳರೂ ಇರುತ್ತಾರೆ. ಕೆಲಸವನ್ನು ಪ್ರೀತಿ ಮಾಡುವವರೂ ಇರುತ್ತಾರೆ. ನಾವು ಕೆಲಸವನ್ನು ಪ್ರೀತಿ ಮಾಡುವವರನ್ನು ಉದಾಹರಣೆಯಾಗಿ ತೆಗೆದುಕೊಳ್ಳಬೇಕು ಎಂದು ಡಾಲಿ ಧನಂಜಯ ಹೇಳಿದರು.

ಇದನ್ನೂ ಓದಿ: Teacher Transfer : ಶಾಲೆ ಆರಂಭದ ದಿನವೇ ಶಿಕ್ಷಕರಿಗೆ ಸಿಹಿ ಸುದ್ದಿ! ಸರ್ಕಾರಿ ಶಿಕ್ಷಕರ ವರ್ಗಾವಣೆಗೆ ಸರ್ಕಾರದ ಅನುಮತಿ

ಮಾದರಿ ಶಾಲೆಗೆ ಡಾಲಿಯಿಂದ ಚಾಲನೆ

ಚಲುವರಸನಕೊಪ್ಪಲು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಮಾದರಿ ಶಾಲೆಯಾಗಿ ಶಾಲೆಯನ್ನು ನವೀಕರಣ ಮಾಡಿದ್ದ ಹಿನ್ನೆಲೆಯಲ್ಲಿ ಬುಧವಾರ (ಮೇ 31) ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ನಟ ಡಾಲಿ ಧನಂಜಯ ಅವರು ಟೇಪ್ ಕತ್ತರಿಸಿ ಚಾಲನೆ ನೀಡಿದರು. ಇಡೀ ಶಾಲೆಯನ್ನು ಒಂದು ಸುತ್ತು ಸುತ್ತಿ ಖುಷಿಪಟ್ಟರು.

Exit mobile version