Site icon Vistara News

Global Investment: ಕರ್ನಾಟಕಕ್ಕೆ ಬಹುದೊಡ್ಡ ಬಂಡವಾಳ ಹೂಡಿಕೆ ಮಿಸ್; ತಮಿಳುನಾಡು ಪಾಲು!

tamilnadu investors meet

ಬೆಂಗಳೂರು: ಬೆಂಗಳೂರಿಗೆ (Bangalore) ಹೊಂದಿಕೊಂಡಿರುವ ತಮಿಳುನಾಡಿನ ಹೊಸೂರಿನಲ್ಲಿ (Hosur) ದೊಡ್ಡ ಕಂಪನಿಗಳು ಹೆಚ್ಚಿನ ಬಂಡವಾಳ (Global Investment) ಹೂಡಲು ಮುಂದಾಗಿದ್ದು, ಬೆಂಗಳೂರಿನ ಉದ್ಯಮಗಳು ಹಾಗೂ ಉದ್ಯೋಗಗಳು ತಮಿಳುನಾಡಿನ ಪಾಲಾಗಲಾರಂಭಿಸಿವೆಯೇ ಎಂಬ ಆತಂಕ ಮೂಡಲಾರಂಭಿಸಿದೆ.

ಇದಗ ನಡೆಯುತ್ತಿರುವ ʼತಮಿಳುನಾಡು ಜಾಗತಿಕ ಹೂಡಿಕೆದಾರರ ಶೃಂಗಸಭೆ 2024ʼನ್ನು (Tamil Nadu Global Investors meet 2024) ಗಮನಿಸಿದರೆ, ಈಗಾಗಲೇ ನಮ್ಮ ರಾಜ್ಯಕ್ಕೆ ಸುಮಾರು 12 ಸಾವಿರ ಕೋಟಿ ರೂಪಾಯಿಯ ಬಂಡವಾಳ ಮಿಸ್ ಆಗಿರುವುದು ಕಂಡುಬಂದಿದೆ. ತಮಿಳುನಾಡಿನ ಹೊಸೂರಿನಲ್ಲಿ 12 ಸಾವಿರ ಕೋಟಿ ರೂ. ಬಂಡವಾಳ ಹೂಡಿ ಫ್ಯಾಕ್ಟರಿ ಸ್ಥಾಪಿಸಲು ಟಾಟಾ ಎಲೆಕ್ಟ್ರಾನಿಕ್ಸ್ (TATA electronics) ಅಲ್ಲಿನ ಸರ್ಕಾರದ ಜತೆಗೆ ತಾತ್ವಿಕ ಒಪ್ಪಂದ ಮಾಡಿಕೊಂಡಿದೆ.

ನಿನ್ನೆ ನಡೆದ ತಮಿಳುನಾಡು ಜಾಗತಿಕ ಹೂಡಿಕೆದಾರರ ಶೃಂಗಸಭೆಯ ಮೊದಲ ದಿನದಲ್ಲಿ, ಹೊಸೂರಿನಲ್ಲಿ 12 ಸಾವಿರ ಕೋಟಿಯ ಬಂಡವಾಳ ವಿಸ್ತರಣೆ ಮಾಡಲು ಸರ್ಕಾರದ ಜೊತೆ ಟಾಟಾ ಕಂಪನಿ ಎಂಒಯು ಮಾಡಿಕೊಂಡಿದೆ. ಇದರಿಂದ ತಮಿಳುನಾಡಿನಲ್ಲಿ 40 ಸಾವಿರ ಉದ್ಯೋಗ ಸೃಷ್ಟಿಯಾಗಲಿವೆ.

ಹೊಸೂರಿನಿಂದ ಬೆಂಗಳೂರಿನ ಏರ್‌ಪೋರ್ಟ್‌ ಮೂಲಕ ರಾಷ್ಟ್ರೀಯ- ಅಂತಾರಾಷ್ಟ್ರೀಯ ಸಾರಿಗೆ ಸಂಪರ್ಕ ಸುಲಭವಾಗಿರುವ ಹಿನ್ನೆಲೆಯಲ್ಲಿ ಹಾಗೂ ತಮಿಳುನಾಡಿನ ರಸ್ತೆಗಳು ಚೆನ್ನಾಗಿರುವುದರಿಂದ ಟ್ರಾನ್ಸ್‌ಪೋರ್ಟ್ ಅನುಕೂಲದ ಹಿನ್ನೆಲೆಯಲ್ಲಿ ಈ ಒಪ್ಪಂದ ನಡೆದಿರುವ ಸಾಧ್ಯತೆ ಇದೆ.

ಇದರ ಜೊತೆಗೇ ಬೆಂಗಳರಿನ ನಮ್ಮ ಮೆಟ್ರೋವನ್ನು ಬೊಮ್ಮಸಂದ್ರದಿಂದ ಅತ್ತಿಬೆಲೆಗೆ ವಿಸ್ತರಿಸಬೇಕು ಎಂಬ ಬಗ್ಗೆ ಒತ್ತಡ ಹೆಚ್ಚಿದೆ. ಹೊಸೂರಿನ ಬೃಹತ್ ಕೈಗಾರಿಕಾ ಹಾಗೂ ಐಟಿ ಕಂಪನಿಗಳಿಂದ ಕೇಂದ್ರದ ಮೇಲೆ ಈ ಬಗ್ಗೆ ಒತ್ತಡ ಹೆಚ್ಚುತ್ತಿದೆ. ಇದರಿಂದ ಬೆಂಗಳೂರಿನ ವಸತಿ ಬಡಾವಣೆಗಳಿಗೂ ಹೊಸೂರಿನ ಔದ್ಯಮಿಕ ಕಾರಿಡಾರ್‌ಗೂ ಸಂಪರ್ಕ ಹೆಚ್ಚಲಿದೆ.

ತಮಿಳುನಾಡು ಜಾಗತಿಕ ಹೂಡಿಕೆದಾರರ ಶೃಂಗಸಭೆ- 2024ರ ಮೊದಲ ದಿನ ಹಲವು ಒಪ್ಪಂದಗಳಾಗಿವೆ. ಹೊಸೂರಿನಲ್ಲಿ 12,082 ಕೋಟಿ ಹೂಡಿಕೆ ಮಾಡಲು ಟಾಟಾ ಎಲೆಕ್ಟ್ರಾನಿಕ್ಸ್ ಒಪ್ಪಿಕೊಂಡಿದೆ. ಐಫೋನ್ ತಯಾರಕ ಪೆಗಾಟ್ರಾನ್ ಚೆನ್ನೈ ಬಳಿಯ ಮಹೀಂದ್ರಾ ಸಿಟಿ ಉತ್ಪಾದನಾ ಘಟಕದಲ್ಲಿ 1,000 ಕೋಟಿ ಹೂಡಿಕೆ ಮಾಡಲಿದೆ. ಟಿವಿಎಸ್ ಗ್ರೂಪ್ ಆಟೋಮೊಬೈಲ್, ಐಟಿ ಮತ್ತು ರಿಯಾಲ್ಟಿ ಕ್ಷೇತ್ರಗಳಲ್ಲಿ 5,000 ಕೋಟಿ ಹೂಡಿಕೆಯನ್ನು ಪ್ರಕಟಿಸಿದೆ. ಐಐಟಿ ಮದ್ರಾಸ್ ಸಹಯೋಗದಲ್ಲಿ ಹೈಡ್ರೋಜನ್ ಸಂಪನ್ಮೂಲ ಕೇಂದ್ರಕ್ಕಾಗಿ 6,000 ಕೋಟಿ ಹೂಡಿಕೆ ಮಾಡಲು ಹುಂಡೈ ಮುಂದಾಗಿದೆ. ವಿಯೆಟ್ನಾಮ್ ವಿನ್‌ಫಾಸ್ಟ್ ಟುಟಿಕೋರಿನ್‌ನಲ್ಲಿ ಇವಿ ಕ್ಲಸ್ಟರ್‌ಗಾಗಿ ತಮಿಳುನಾಡಿನಲ್ಲಿ 2 ಬಿಲಿಯ ಡಾಲರ್‌ ಹೂಡಿಕೆ ಮಾಡಲು ಎಂಒಯುಗೆ ಸಹಿ ಹಾಕಿದೆ. ಜೆಎಸ್‌ಡಬ್ಲ್ಯು ನವೀಕರಿಸಬಹುದಾದ ಇಂಧನವು ತಮಿಳುನಾಡಿನ ತೂತುಕುಡಿ ಮತ್ತು ತಿರುನಲ್ವೇಲಿಯಲ್ಲಿ 15,000 ಕೋಟಿ ಹೂಡಿಕೆ ಮಾಡುತ್ತಿದೆ.

ಇದನ್ನೂ ಓದಿ: Systematic Investment plan : ಏನಿದು ಮ್ಯೂಚುವಲ್‌ ಫಂಡ್‌ ಸಿಪ್‌, ಹೂಡಿಕೆದಾರರಿಗೆ ಏನೇನು ಲಾಭ?

Exit mobile version