ಬೆಂಗಳೂರು: “ಮನೆಯಲ್ಲಿ ಇದ್ದರೆ ಚಿನ್ನ, ಚಿಂತೆಯು ಏತಕ್ಕೆ ಇನ್ನ?” ಎಂಬ ಸ್ಲೋಗನ್ ಉಲ್ಟಾ ಮಾಡಿದ ಖದೀಮನೊಬ್ಬ “ಮನೆಯಲ್ಲಿ ಇದ್ದರೆ ಕಬ್ಬಿಣ ಚಿಂತೆಯೂ ಏತಕ್ಕೆ ಇನ್ನ?” ಎಂದವನು ಮಣಪ್ಪುರಂ ಗೋಲ್ಡ್ ಫೈನಾನ್ಸ್‌ಗೆ (Gold Lone) ಪಂಗನಾಮ ಹಾಕಿದ್ದಾನೆ.
ರಾಜಸ್ಥಾನ ಮೂಲದ ಸುರೇಶ ಎಂಬಾತ ಕಬ್ಬಿಣದ ಗಟ್ಟಿಗೆ ಚಿನ್ನದ ಪ್ಲೇಟ್ ಹಾಕಿ ಜತೆಗೆ ಐಡಿ ಫ್ರೂಫ್ ನೀಡದೆ ಬೇರೆ ಬೇರೆ ವ್ಯಕ್ತಿಗಳನ್ನೂ ಕರೆತಂದು ಅವರ ಹೆಸರಿನಲ್ಲಿ ಮಣಪ್ಪುರಂ ಗೋಲ್ಡ್ ಲೋನ್‌ನಲ್ಲಿ ಅಡವಿಡುತ್ತಿದ್ದ. ಕಳೆದ ಮಾರ್ಚ್ ತಿಂಗಳಿನಲ್ಲಿ 187 ಗ್ರಾಂನ 8 ಗೋಲ್ಡ್ ಬಿಸ್ಕೆಟ್ ಅನ್ನು ಅಡ ಇಟ್ಟು, ವೈಟ್‌ಫೀಲ್ಡ್ ಬಳಿಯ ರಾಮಗೊಂಡನಹಳ್ಳಿ ಮಣಪ್ಪುರಂ ಬ್ರ್ಯಾಂಚ್‌ನಲ್ಲಿ ಅಡವಿಟ್ಟಿದ್ದ.
ಕಳೆದ ಕೆಲ ದಿನಗಳ ಹಿಂದೆ ಮಣಪ್ಪುರಂ ಫೈನಾನ್ಸ್‌ನಲ್ಲಿ ಸಿಬ್ಬಂದಿ ಆಡಿಟಿಂಗ್ ನಡೆಸಿದ್ದು, ಈ ವೇಳೆ ಸುರೇಶ ಅಡವಿಟ್ಟಿದ್ದ ಗೋಲ್ಡ್ ಬಿಸ್ಕೆಟ್ ಅನ್ನು ಪರಿಶೀಲಿಸಲಾಗಿದೆ. ತೂಕ ಹೆಚ್ಚಿಗೆ ಬಂದ ಕಾರಣದಿಂದ ಗೋಲ್ಡ್ ಬಿಸ್ಕೆಟ್ ಅನ್ನು ಕತ್ತರಿಸಲಾಗಿದೆ. ಕತ್ತರಿಸಿ ನೋಡಿದವರಿಗೆ ಆಘಾತ ಕಾದಿತ್ತು. ಬಿಸ್ಕೆಟ್ ಮೇಲೆ ಗೋಲ್ಡ್ ಪ್ಲೇಟ್ ಒಳಗೆ ಕಬ್ಬಿಣ ಇರುವುದು ಬಯಲಾಗಿದೆ.
ಈ ವಿಷಯ ತಿಳಿಯುತ್ತಿದ್ದಂತೆ ವೈಟ್‌ಫೀಲ್ಡ್ ಠಾಣೆಯಲ್ಲಿ ಮಣಪ್ಪುರಂ ಗೋಲ್ಡ್‌ನ ಮ್ಯಾನೇಜರ್ ಮಂಜಪ್ಪ ದೂರು ನೀಡಿದ್ದಾರೆ. ಚಿನ್ನದ ಮೇಲ್ಹೊದಿಕೆಯಲ್ಲೇ ವಂಚಿಸುತ್ತಿದ್ದ ಆರೋಪಿಯ ಮೇಲೆ ವೈಟ್‌ಫೀಲ್ಡ್‌ನಲ್ಲಿ ಎಫ್‌ಐಆರ್ ದಾಖಲಾಗಿದೆ.
ಆರೋಪಿ ಸುರೇಶ ಪರಾರಿ
ಆರೋಪಿ ಸುರೇಶನ ಜತೆ ಅಕ್ಕಸಾಲಿಗ (ಅಪ್ರೈಸರ್) ಕೂಡ ಭಾಗಿ ಆಗಿರುವ ಸಾಧ್ಯತೆ ಇದ್ದು, ಪರಾರಿ ಆಗಿರುವ ಸುರೇಶನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ರಾಜಸ್ಥಾನ ಮೂಲದ ಸುರೇಶ್ ಮೇಲೆ ಹೊಸಕೋಟೆಯಲ್ಲೂ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | School Robbery | ಶಾಲೆಗೆ ಕನ್ನ: ಮಕ್ಕಳ ಶೂ, ಸಾಕ್ಸ್, ವಾಲಿಬಾಲನ್ನೂ ಕದ್ದ ಖದೀಮರು !