Site icon Vistara News

Road Accident: ಗೂಡ್ಸ್ ವಾಹನ-ಕಾರು ಡಿಕ್ಕಿ; ಇಬ್ಬರ ಸಾವು, ಐವರಿಗೆ ಗಂಭೀರ ಗಾಯ

Car accident in kalaghatagi, Two killed

Car accident in kalaghatagi, Two killed

ಹುಬ್ಬಳ್ಳಿ.: ಕಲಘಟಗಿ ತಾಲೂಕಿನ ಧಾರವಾಡ ಕ್ರಾಸ್ ಬಳಿ ಟಾಟಾ ಗೂಡ್ಸ್ ವಾಹನ ಮತ್ತು ಕಾರು ಮುಖಾಮುಖಿ ಡಿಕ್ಕಿಯಾಗಿ (Road Accident) ಇಬ್ಬರು ಮೃತಪಟ್ಟು, ಐವರಿಗೆ ಗಂಭೀರ ಗಾಯಗಳಾಗಿರುವ ಘಟನೆ ಶುಕ್ರವಾರ ನಡೆದಿದೆ.

ಹುಬ್ಬಳ್ಳಿ ನಿವಾಸಿಗಳಾದ ಫ್ರಾನ್ಸಿಸ್ ಗೊನ್ಸಾಲ್ವಿಜ್ (73), ಓಲಿವಿಯಾ ಕ್ಯಾಥರೀನ್ (36) ಮೃತರು. ಫ್ರಾನ್ಸಿಸ್ ಪತ್ನಿ ಲೀನಾ, ಪುತ್ರ ಏಲೆನ್, ಮೊಮ್ಮಕ್ಕಳಾದ ವರ್ಷದ ಜೋರ್ಡನ್, ಶುವಾ ಹಾಗೂ ಗೂಡ್ಸ್ ವಾಹನ ಚಾಲಕ ಗಣೇಶ ಖನ್ನಾಗೌಡಾ ಗಂಭೀರವಾಗಿ ಗಾಯಗೊಂಡಿದ್ದಾರೆ.

ಹುಬ್ಬಳ್ಳಿಯಿಂದ ಕಲಘಟಗಿಯತ್ತ ಹೊರಟಿದ್ದ ಕಾರು ಹಾಗೂ ಕಲಘಟಗಿ ಕಡೆಯಿಂದ ಹುಬ್ಬಳ್ಳಿ ಕಡೆ ಹೊರಟ್ಟಿದ್ದ ಟಾಟಾ ಗೂಡ್ಸ್ ವಾಹನ ಮುಖಾಮುಖಿ ಡಿಕ್ಕಿಯಾಗಿ ದುರಂತ ಸಂಭವಿಸಿದೆ. ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ | Murder Case: ಪತ್ನಿಯ ಅನೈತಿಕ ಸಂಬಂಧಕ್ಕೆ ಬಲಿಯಾದ ಪತಿ; ಪ್ರಿಯಕರನ ಜತೆ ಸೇರಿ ಕೊಂದವಳು ಈಗ ಸೆರೆ

ಗುಡ್ಡದಿಂದ ಬಿದ್ದು ಗಾಯಗೊಂಡಿದ್ದ ಮಂಗ ಸಾವು; ಸಂಪ್ರದಾಯದಂತೆ ಅಂತ್ಯಕ್ರಿಯೆ ಮಾಡಿದ ಸ್ಥಳೀಯರು

ಗದಗ: ಗುಡ್ಡದಿಂದ ಆಯತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಮಂಗವೊಂದು ಚಿಕಿತ್ಸೆ ಫಲಿಸದೇ ಮೃತಪಟ್ಟಿದೆ. ಜಿಲ್ಲೆಯ ಮುಂಡರಗಿ ಪಟ್ಟಣದ ಶ್ರೀ ಲಕ್ಷ್ಮೀಕನಕನರಸಿಂಹ ದೇವಸ್ಥಾನ ಗುಡ್ಡದ ಬಳಿಯಲ್ಲಿ ತಲೆಗೆ ತೀವ್ರವಾಗಿ ಗಾಯಗೊಂಡು ಸಾವು ಬದುಕಿನ ಮಧ್ಯೆ ನರಳುತ್ತಿದ್ದ ಮಂಗವನ್ನು ಸ್ಥಳೀಯರು, ಅರಣ್ಯ ಇಲಾಖೆಯವರ ಸಹಕಾರದಿಂದ ಸ್ಥಳೀಯ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರೂ ಚಿಕಿತ್ಸೆ ಫಲಿಸದೇ ಮಂಗ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆಯಿತು.

ಮಂಗ ಮೃತಪಟ್ಟ ಹಿನ್ನೆಲೆಯಲ್ಲಿ ಸ್ಥಳೀಯರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಅರಣ್ಯ ಇಲಾಖೆಯ ಜೀಪ್‌ನಲ್ಲಿ ಮಂಗವನ್ನು ಶ್ರೀ ಲಕ್ಷ್ಮೀಕನಕನರಸಿಂಹ ದೇವಸ್ಥಾನ ಗುಡ್ಡಕ್ಕೆ ತಂದು ಆಲದ ಮರದ ಕೆಳಗೆ ಗುಂಡಿ ತೆಗೆದು ಅದಕ್ಕೆ ಅಂತ್ಯ ಸಂಸ್ಕಾರ‌ ಮಾಡಿ ಹಾಕಿ ಪೂಜೆ ಸಲ್ಲಿಸುವ ಮೂಲಕ ಸಾಂಪ್ರದಾಯಿಕವಾಗಿ ಅಂತ್ಯಕ್ರಿಯೆ ನೆರವೇರಿಸಿದರು.

ಗುಡ್ಡದ ಮೇಲಿಂದ ಮಂಗ ತೀವ್ರವಾಗಿ ಗಾಯಗೊಂಡು ಒದ್ದಾಡುತ್ತಿತ್ತು. ಆಗ ಅದಕ್ಕೆ ನೀರು ಕುಡಿಸಲಾಯಿತು. ಅರಣ್ಯ ಇಲಾಖೆ ಸಿಬ್ಬಂದಿ ಗಮನಕ್ಕೆ ತಂದು ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತಾದರೂ ಮಂಗವನ್ನು ಬದುಕಿಸಲಾಗಲಿಲ್ಲ. ಹೀಗಾಗಿ ಅದರ ಕಳೇಬರವನ್ನು ಅಂತ್ಯಕ್ರಿಯೆ ಮಾಡಲಾಗಿದೆ.

Exit mobile version