Site icon Vistara News

ಕೊನೆಗೂ ಪ್ರತಿಭಟನೆ ಕೈ ಬಿಟ್ಟ ಪೌರಕಾರ್ಮಿಕರು: ಮಂಗಳವಾರದಿಂದ ಕೆಲಸಕ್ಕೆ ಹಾಜರ್‌

ಪೌರಕಾರ್ಮಿಕರ ಮುಷ್ಕರ

ಬೆಂಗಳೂರು: ಬೇಡಿಕೆ ಈಡೇರಿಕೆಗೆ ಪಟ್ಟು ಹಿಡಿದು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದ ಪೌರಕಾರ್ಮಿಕರು, 4ನೇ ದಿನಕ್ಕೆ ಪ್ರತಿಭಟನೆ ಕೈಬಿಟ್ಟಿದ್ದಾರೆ. ಸಿಎಂ ಬಸವರಾಜ್‌ ಬೊಮ್ಮಾಯಿ ಜತೆಗಿನ ಮಾತುಕತೆ ನಂತರವೂ ಲಿಖಿತ ರೂಪದ ಭರವಸೆಗಾಗಿ ಒತ್ತಡ ಹಾಕಿ ಪ್ರತಿಭಟನೆಯನ್ನು ಮುಂದುವರಿಸಿದ್ದರು.

ಇದೀಗ ಸರ್ಕಾರವು ನೇರ ನೇಮಕಾತಿ ಪೌರಕಾರ್ಮಿಕರನ್ನು ಕಾಯಂ ಮಾಡುವ ಪ್ರಕ್ರಿಯೆಗೆ ಮೂರು ತಿಂಗಳ ಕಾಲಾವಧಿ ಕೇಳಿದೆ. ಬಿಬಿಎಂಪಿ ಹೊರತಾಗಿ ರಾಜ್ಯದ ಇತರೆ ಕಡೆ ಚಾಲ್ತಿಯಲ್ಲಿರುವ ಗುತ್ತಿಗೆ ಪದ್ಧತಿಯನ್ನು ಹಂತ ಹಂತವಾಗಿ ಕಸದ ನಿರ್ವಹಣೆಗೆ ತೊಂದರೆಯಾಗದಂತೆ ನೇರ ಪಾವತಿಯಡಿ ತರಲಾಗುವುದು ಎಂದು ಹೇಳಿದೆ.

ನಗರದ ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಸರ್ಕಾರದ ಪರವಾಗಿ ಸಫಾಯಿ ಕರ್ಮಚಾರಿ ನಿಯೋಗದ ಅಧ್ಯಕ್ಷ ಶಿವಣ್ಣ ಆಗಮಿಸಿ ಭರವಸೆ ಪತ್ರ ನೀಡಿದ್ದಾರೆ. ಪತ್ರ ಮೂಲಕ ಸರ್ಕಾರದಿಂದ ಭರವಸೆ ಬಂದ ಹಿನ್ನೆಲೆ ಪೌರಕಾರ್ಮಿಕರು ಮುಷ್ಕರ ಕೈಬಿಟ್ಟಿದ್ದಾರೆ.

ಇದನ್ನೂ ಓದಿ | ಈಡೇರದ ಸರ್ಕಾರದ ಭರವಸೆ; 5ನೇ ದಿನಕ್ಕೆ ಕಾಲಿಟ್ಟ ಬೇಡ ಜಂಗಮರ ಪ್ರತಿಭಟನೆ

ಪೌರಕಾರ್ಮಿಕರ ಬೇಡಿಕೆಗಳಿವು

೧. ಎಲ್ಲ ಸ್ವಚ್ಛತಾ ಕಾರ್ಮಿಕರನ್ನು ಏಕ ಕಾಲಕ್ಕೆ ಕಾಯಂ ಮಾಡಬೇಕು.

೨. ಮಹಿಳಾ ಪೌರಕಾರ್ಮಿಕರಿಗೆ ಶೌಚಾಲಯ, ಕುಡಿಯುವ ನೀರು, ಹೆರಿಗೆ ಭತ್ಯೆ, ಹೆರಿಗೆ ರಜೆ ಸೇರಿದಂತೆ ವಿಶ್ರಾಂತಿ ಗೃಹದಂತಹ ಮೂಲಭೂತ ಸೌಲಭ್ಯ ಒದಗಿಸಬೇಕು.

೩. ಗೃಹ ಭಾಗ್ಯ ಯೋಜನೆಯನ್ನು ಎಲ್ಲರಿಗೂ ಸದ್ಬಳಕೆ ಆಗುವಂತೆ ಮಾಡಬೇಕು.

೪. ಕಾರ್ಮಿಕರ ಮಕ್ಕಳು ಖಾಸಗಿ ಶಾಲೆ-ಕಾಲೇಜುಗಳಲ್ಲಿಯೂ ವ್ಯಾಸಂಗ ಮಾಡಲು ಅನುಕೂಲವಾಗುವಂತೆ ಅಗತ್ಯವಿರುವ ಹಣಕಾಸಿನ ನೆರವು ಒದಗಿಸಬೇಕು.

೫. ಆರೋಗ್ಯ ಭದ್ರತೆಗಾಗಿ ಆರೋಗ್ಯ ಕಾರ್ಡ್‌ ವಿತರಿಸಬೇಕು.

ಇದನ್ನೂ ಓದಿ| ನಾಲ್ಕನೇ ದಿನಕ್ಕೆ ಕಾಲಿಟ್ಟ ಪೌರ ಕಾರ್ಮಿಕರ ಪ್ರತಿಭಟನೆ; ಬೆಂಗಳೂರಿನಲ್ಲಿ ಕಸದ ಸಮಸ್ಯೆ ಉಲ್ಬಣ

Exit mobile version