Site icon Vistara News

SCST, OBC ಮೀಸಲಾತಿ ಕುರಿತು ರಾಜ್ಯ ಸರ್ಕಾರದ ಮಹತ್ವದ ಘೋಷಣೆ

assembly session 1

ವಿಧಾನಸಭೆ: ರಾಜ್ಯದ ವಿವಿಧ ಸಮುದಾಯಗಳ ಮೀಸಲಾತಿ ಹೆಚ್ಚಳ ಹಾಗೂ ಹೆಚ್ಚಿನ ಮೀಸಲಾತಿ ವರ್ಗಕ್ಕೆ ಸೇರ್ಪಡೆ ಕುರಿತು ಶೀಘ್ರದಲ್ಲೆ ಸರ್ವಪಕ್ಷಗಳ ಸಭೆ ನಡೆಸಲಾಗುತ್ತದೆ ಎಂದಿರುವ ಸಿಎಂ ಬಸವರಾಜ ಬೊಮ್ಮಾಯಿ, ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಮಹತ್ವದ ಘೋಷಣೆ ಮಾಡಿದ್ದಾರೆ.

ವಿಧಾನಸಭೆಯಲ್ಲಿ ಬಿಎಂಎಸ್‌ ಟ್ರಸ್ಟ್‌ ಕುರಿತು ಎಚ್‌.ಡಿ. ಕುಮಾರಸ್ವಾಮಿ ಆರೋಪದ ಕುರಿತು ಗದ್ದಲದ ನಡುವೆಯೇ ಮಾತನಾಡಿದ ಬೊಮ್ಮಾಯಿ, ಎಸ್‌ಸಿಎಸ್‌ಟಿ ಸಮುದಾಯದ ಮೀಸಲಾತಿ ಕುರಿತು ಈಗಾಗಲೆ ಎರಡು ವರದಿಗಳು ಮುಂದಿವೆ.

ನ್ಯಾ. ನಾಗಮೋಹನದಾಸ್‌ ಅವರ ಸಮಿತಿ ವರದಿ, ನ್ಯಾ. ಸುಭಾಷ್‌ ಆಡಿ ಅವರ ಸಮಿತಿ ವರದಿಗಳನ್ನು ಆಧಾರದಲ್ಲಿರಿಸಿಕೊಂಡು ಚರ್ಚೆ ಮಾಡಬೇಕಿದೆ. ಸರ್ವಪಕ್ಷಗಳ ಸದಸ್ಯರೂ ಈ ಕುರಿತು ಚರ್ಚೆ ನಡೆಸಬೇಕು. ಅಕ್ಟೋಬರ್‌ ಮೊದಲ ವಾರದಲ್ಲಿ ಸಭೆಯನ್ನು ಆಯೋಜಿಸಿ ನಿರ್ಧಾರ ಮಾಡಲಾಗುತ್ತದೆ.

ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಲು ಸರ್ಕಾರ ಬದ್ಧವಾಗಿದೆ. ಎಲ್ಲ ಸಮುದಾಯಗಳ ಭಾವನೆಗಳಿಗೆ ಸರ್ಕಾರ ಸ್ಪಂದನೆ ಮಾಡಲಿದೆ. ಅನೇಕ ದಿನಗಳಿಂದ ಸತ್ಯಾಗ್ರಹ ನಡೆಸುತ್ತಿರುವ ವಾಲ್ಮೀಕಿ ಸ್ವಾಮೀಜಿ ತಮ್ಮ ಸತ್ಯಾಗ್ರಹವನ್ನು ಹಿಂಪಡೆಯಬೇಕು ಎಂದು ಮನವಿ ಮಾಡುತ್ತೇನೆ ಎಂದರು.

ನಂತರ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಂಈ ಈ ಮಾತಿಗೆ ಸಮ್ಮತಿ ಸೂಚಿಸಿದರು. ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿಯುವರೂ, ವಾಲ್ಮೀಕಿ ಸ್ವಾಮೀಜಿ ಸತ್ಯಾಗ್ರಹ ಹಿಂಪಡೆಯಬೇಕು ಎಂದು ಸದನದ ಪರವಾಗಿ ಮನವಿ ಮಾಡುವುದಾಗಿ ಹೇಳಿದರು.

ಇದನ್ನೂ ಓದಿ | ಬಿಎಂಎಸ್‌ ಟ್ರಸ್ಟ್‌ ವಿವಾದ | ತನಿಖೆಗೆ ಒಪ್ಪದ ಸರ್ಕಾರ, ಪ್ರತಿಭಟನೆ ಬಿಡದ JDS: ವಿಧಾನಸಭೆ ಮುಕ್ತಾಯ

Exit mobile version